AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karan Johar: ಕರಣ್ ಜೋಹರ್​ಗೆ ಓಪನ್ ಆಗಿ ‘ಶಟ್​ಅಪ್​’ ಎಂದ ಕಾಜೋಲ್

ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿತ್ ಕರಣ್’ ವಿವಾದಾತ್ಮಕ ಶೋ ಎಂದೇ ಫೇಮಸ್. ಈಗ ಈ ವೇದಿಕೆ ಮೇಲೆ 25 ವರ್ಷಗಳ ಹಿಂದೆ ಮಾಡಿದ ಕೆಲಸವನ್ನು ಹೊಗಳಿಕೊಳ್ಳುವ ಕೆಲಸವನ್ನು ಕರಣ್ ಜೋಹರ್ ಮಾಡಿದ್ದರು. ಇದಕ್ಕೆ ಕಾಜೋಲ್ ಸಿಟ್ಟಾಗಿದ್ದಾರೆ.

Karan Johar: ಕರಣ್ ಜೋಹರ್​ಗೆ ಓಪನ್ ಆಗಿ ‘ಶಟ್​ಅಪ್​’ ಎಂದ ಕಾಜೋಲ್
ಕಾಜೋಲ್​-ಕರಣ್
ರಾಜೇಶ್ ದುಗ್ಗುಮನೆ
|

Updated on: Dec 01, 2023 | 8:40 AM

Share

ಕರಣ್ ಜೋಹರ್ (Karan Johar) ಅವರನ್ನು ಎದುರುಹಾಕಿಕೊಳ್ಳಲು, ಅವರಿಗೆ ಎದುರುತ್ತರ ಕೊಡುವ ಸಾಹಸವನ್ನು ಯಾರೂ ಮಾಡುವುದಿಲ್ಲ. ಈಗ ‘ಕಾಫಿ ವಿತ್ ಕರಣ್’ ಶೋನಲ್ಲಿ ನಟಿ ಕಾಜೋಲ್​ ಅವರು ಕರಣ್​ಗೆ ಶಟ್​ ಅಪ್ ಎಂದು ನೇರವಾಗಿ ಹೇಳಿದ್ದಾರೆ. 25 ವರ್ಷಗಳ ಹಿಂದೆ ಮಾಡಿದ ಕೆಲಸವನ್ನು ಹೊಗಳಿಕೊಳ್ಳುವ ಕೆಲಸವನ್ನು ಕರಣ್ ಜೋಹರ್ ಮಾಡಿದ್ದರು. ಇದು ಕಾಜೋಲ್ ಕೋಪಕ್ಕೆ ಕಾರಣ ಆಗಿದೆ.

1998ರಲ್ಲಿ ಕರಣ್ ಜೋಹರ್ ಅವರು ‘ಕುಚ್ ಕುಚ್ ಹೋತಾ ಹೈ’ ಸಿನಿಮಾ ನಿರ್ದೇಶನ ಮಾಡಿದ್ದರು. ಇದು ಅವರ ನಿರ್ದೇಶನದ ಮೊದಲ ಸಿನಿಮಾ. ಈ ಚಿತ್ರದಲ್ಲಿ ಶಾರುಖ್ ಖಾನ್, ಕಾಜೋಲ್, ರಾಣಿ ಮುಖರ್ಜಿ ಮೊದಲಾದವರು ನಟಿಸಿದ್ದರು. ಈ ಸಿನಿಮಾ ಯಶಸ್ಸು ಕಂಡಿತ್ತು.

‘ಕುಚ್ ಕುಚ್​ ಹೋತಾ ಹೈ’ ಚಿತ್ರದಲ್ಲಿ ಜೆಂಡರ್ ಪಾಲಿಟಿಕ್ಸ್ ಇದೆ ಎಂದು ರಾಣಿ ಮುಖರ್ಜಿ ಅನೇಕಬಾರಿ ಕರಣ್ ವಿರುದ್ಧ ಕಿಡಿಕಾರಿದ್ದರಂತೆ. ಇದಕ್ಕೆ ಕರಣ್ ಜೋಹರ್ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದರಂತೆ. ಎಲ್ಲಾ ವಿಚಾರಗಳನ್ನು ಅವರು ಹೇಳಿಕೊಳ್ಳಲು ಆರಂಭಿಸಿದರು. ಆಗ ಕಾಜೋಲ್ ಅವರು ‘ಶಟ್​ಅಪ್​’ ಎಂದರು

‘25 ವರ್ಷಗಳ ಹಿಂದೆ ಆದ ವಿಚಾರದ ಬಗ್ಗೆ ಈಗ ನೀವು ವಾದಿಸುತ್ತೀದ್ದೀರಿ’ ಎಂದರು ಕಾಜೋಲ್. ಇದಕ್ಕೆ ಉತ್ತರಿಸಿದ ಕರಣ್​, ‘ನಾನು ನನ್ನ ಮೊದಲ ಚಿತ್ರವನ್ನು ಇಷ್ಟಪಡುತ್ತೇನೆ’ ಎಂದು ಹೇಳಿದ್ದಾರೆ. ಸದ್ಯ ಈ ವಿಚಾರದ ಬಗ್ಗೆ ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ: ಅನನ್ಯಾ ಪಾಂಡೆ ಪ್ರೀತಿಸುತ್ತಿರುವುದು ಇಶಾನ್ ಅನ್ನೋ ಕಾರ್ತಿಕ್ ಅನ್ನೋ: ಕರಣ್ ಜೋಹರ್​ಗೆ ಸಿಕ್ತಾ ಉತ್ತರ?

ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿತ್ ಕರಣ್’ ವಿವಾದಾತ್ಮಕ ಶೋ ಎಂದೇ ಫೇಮಸ್. ಏಳು ಸೀಸನ್​ಗಳನ್ನು ಪೂರ್ಣಗೊಳಿಸಿರುವ ಈ ಶೋ ಈಗ ಎಂಟನೇ ಸೀಸನ್ ಪ್ರಸಾರ ಆರಂಭಿಸಿದೆ. ರಣವೀರ್ ಸಿಂಗ್​-ದೀಪಿಕಾ ಪಡುಕೋಣೆ ಸೇರಿ ಅನೇಕರು ಈ ಶೋಗೆ ಬಂದಿದ್ದಾರೆ. ಈ ಬಾರಿ ಶೋ ಶೂಟಿಂಗ್ ಸಂದರ್ಭದಲ್ಲಿ ಕರಣ್ ಜೋಹರ್​ಗೆ ದೂರವಾಣಿ ಕರೆ ಬಂದಿದೆ. ಇದನ್ನು ಸ್ವೀಕರಿಸಿ ಮಾತನಾಡುವಾಗ ಕರಣ್ ಸಾಕಷ್ಟು ಸಮಯ ವ್ಯರ್ಥ ಮಾಡಿದ್ದರು. ಇದರಿಂದ ಕಾಜೋಲ್ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ