ಒಟಿಟಿಯಲ್ಲಿ ಪ್ರಸಾರ ಕಂಡ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಸಿನಿಮಾ

| Updated By: ರಾಜೇಶ್ ದುಗ್ಗುಮನೆ

Updated on: Jul 26, 2022 | 7:48 PM

ರಾತ್ರಿ ಬೆಳಗಾಗುವುದರೊಳಗೆ ಸಾವಿರಾರು ರೂಪಾಯಿ ಕಳೆದುಕೊಂಡ ಉದಾಹರಣೆ ಸಾಕಷ್ಟಿದೆ. ಇದೇ ರೀತಿಯ ವಿಚಾರ ಇಟ್ಟುಕೊಂಡು ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಸಿನಿಮಾ ಸಿದ್ಧಗೊಂಡಿದೆ.

ಒಟಿಟಿಯಲ್ಲಿ ಪ್ರಸಾರ ಕಂಡ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಸಿನಿಮಾ
ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾ ತಂಡ
Follow us on

ನಟ ದಿಗಂತ್ (Diganth) ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಗೋವಾದಲ್ಲಿ ಬಿದ್ದು ಅವರು ಪೆಟ್ಟು ಮಾಡಿಕೊಂಡಿದ್ದರು. ಬೆಂಗಳೂರಿನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಯಿತು. ಈಗ ಅವರು ಸಂಪೂರ್ಣ ರಿಕವರಿ ಆಗಿದ್ದಾರೆ. ಈಗ ಅವರ ಫ್ಯಾನ್ಸ್​ಗೆ ಖುಷಿ ಸುದ್ದಿ ಸಿಕ್ಕಿದೆ. ಅವರ ನಟನೆಯ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಸಿನಿಮಾ (Kshamisi Nimma Katheyalli Hanavilla Movie) ಈಗ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರ ಕಂಡಿದೆ.

ಇದು ಡಿಜಿಟಲ್ ಯುಗ. ಚಿಕ್ಕ ಅಂಗಡಿಯಿಂದ ಹಿಡಿದು, ದೊಡ್ಡ ದೊಡ್ಡ ಹೋಟೆಲ್​ವರೆಗೆ ಎಲ್ಲ ಕಡೆಗಳಲ್ಲಿ ಡಿಜಿಟಲ್ ಪೇಮೆಂಟ್ ಆಯ್ಕೆ ಇದೆ. ಬಹುತೇಕರು ಹಣ ಪಾವತಿಗೆ ಆನ್​ಲೈನ್​ ಮೊರೆ ಹೋಗಿದ್ದಾರೆ. ಈ ಕ್ರಾಂತಿಯ ಜತೆಗೆ ಸೈಬರ್ ಕಳ್ಳರ ಕಾಟವೂ ಹೆಚ್ಚಾಗಿದೆ. ಹಣ ಕಳೆದುಕೊಳ್ಳುವ ಪ್ರಕರಣ ಹೆಚ್ಚುತ್ತಿದೆ. ರಾತ್ರಿ ಬೆಳಗಾಗುವುದರೊಳಗೆ ಸಾವಿರಾರು ರೂಪಾಯಿ ಕಳೆದುಕೊಂಡ ಉದಾಹರಣೆ ಸಾಕಷ್ಟಿದೆ. ಇದೇ ರೀತಿಯ ವಿಚಾರ ಇಟ್ಟುಕೊಂಡು ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಸಿನಿಮಾ ಸಿದ್ಧಗೊಂಡಿದೆ.

ದಿಗಂತ್ ಅವರು ಈ ಚಿತ್ರದಲ್ಲಿ ಹಳ್ಳಿಯಲ್ಲಿ ಬಾಳುವ ಮಧ್ಯಮ ವರ್ಗದ ಯುವಕನಾಗಿ ಕಾಣಿಸಿಕೊಂಡಿದ್ದಾರೆ. ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಸಿನಿಮಾ ಏಪ್ರಿಲ್ 29ರಂದು ತೆರೆಗೆ ಬಂತು. ಅನೇಕರಿಗೆ ಈ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಲು ಸಾಧ್ಯವಾಗಿಲ್ಲ. ಅಂತಹವರು ಈಗ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಸಿನಿಮಾ ವೀಕ್ಷಿಸಬಹುದಾಗಿದೆ. ಬ್ಯಾಂಕಿಂಗ್ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮನರಂಜನಾತ್ಮಕವಾಗಿ ಕಟ್ಟಿಕೊಡಲಾಗಿದೆ.

ಇದನ್ನೂ ಓದಿ
ಗುಣಮುಖರಾದ ದಿಗಂತ್ ಚಿತ್ರರಂಗದಲ್ಲಿ ಮತ್ತೆ ಆ್ಯಕ್ಟೀವ್; ಇಲ್ಲಿದೆ ವಿಡಿಯೋ
ವಿಶೇಷ ಸ್ಥಳಕ್ಕೆ ಭೇಟಿ ನೀಡಿ ಫೋಟೋ ಹಂಚಿಕೊಂಡ ನಟಿ ರಂಜನಿ ರಾಘವನ್
‘ಆಣೆ ಮಾಡಿ ಹೇಳುತೀನಿ..’ ಎಂದು ಲಂಗ ದಾವಣಿ ಚಾಲೆಂಜ್ ಸ್ವೀಕರಿಸಿದ ರಂಜನಿ ರಾಘವನ್
ದಿಗಂತ್​ ಖಾತೆಯಿಂದ ಮಾಯವಾಯ್ತು ಹಣ; ಕೋರ್ಟ್​​ಗೆ​ ಅಲೆಯೋಕೆ ಶುರು ಹಚ್ಚಿಕೊಂಡ ನಟ

ಉಪ್ಪಿ ಎಂಟರ್​ಟೇನರ್​ ಬ್ಯಾನರ್​ ಅಡಿಯಲ್ಲಿ ಸಿಲ್ಕ್​ ಮಂಜು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ವಿನಾಯಕ್​ ಕೋಡ್ಸರ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಪ್ರಜ್ವಲ್​ ಪೈ ಅವರು ಚಿತ್ರವನ್ನು ಸಹ ನಿರ್ಮಾಣ ಮಾಡುವುದರ ಜತೆಗೆ, ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ. ನಂದಕಿಶೋರ್​ ಎನ್​. ಛಾಯಾಗ್ರಹಣ, ರಾಹುಲ್​ ವಸಿಷ್ಟ ಸಂಕಲನ ಚಿತ್ರಕ್ಕೆ ಇದೆ.

ಇದನ್ನೂ ಓದಿ: ಗುಣಮುಖರಾದ ದಿಗಂತ್ ಚಿತ್ರರಂಗದಲ್ಲಿ ಮತ್ತೆ ಆ್ಯಕ್ಟೀವ್; ಇಲ್ಲಿದೆ ವಿಡಿಯೋ

ದಿಗಂತ್ ಅವರು ‘ಗಾಳಿಪಟ 2’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಂಗವಾಗಿ ಈ ಚಿತ್ರ ಆಗಸ್ಟ್ 13ರಂದು ತೆರೆಗೆ ಬರುತ್ತಿದೆ. ಈ ಸಿನಿಮಾಗೆ ಯೋಗರಾಜ್ ಭಟ್ ಅವರು ನಿರ್ದೇಶನ ಮಾಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್, ಪವನ್ ಕುಮಾರ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

Published On - 7:45 pm, Tue, 26 July 22