‘ಮಿರ್ಜಾಪುರ ಸೀಸನ್ 3′ ಜುಲೈ 5ರಂದು ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ. ‘ಮಿರ್ಜಾಪುರ’ ಸರಣಿಯ ಮೊದಲ ಎರಡು ಸೀಸನ್‌ಗಳನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಇದೀಗ ಸರಣಿಯ ಮೂರನೇ ಸೀಸನ್‌ಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ಕಾಲೀನ್ ಭಯ್ಯಾ ಅವರನ್ನು ಶ್ಲಾಘಿಸುತ್ತಿದ್ದರೆ, ಇತರರು ಮುನ್ನಾ ಭೈಯಾ ಅವರನ್ನು ತುಂಬಾ ಮಿಸ್ ಮಾಡಿಕೊಂಡಿದ್ದಾರೆ. ಮುನ್ನಾ ಇಲ್ಲ ಎನ್ನುವ ಕಾರಣಕ್ಕೆ ಅನೇಕರು ಈ ಸರಣಿಯನ್ನು ಇಷ್ಟಪಡಲಿಲ್ಲ. ಮೂರನೇ ಸೀಸನ್ನಲ್ಲಿ, ಕೆಲವು ರಹಸ್ಯಗಳನ್ನು ಬಹಿರಂಗಪಡಿಸಲಾಗಿದೆ. ಈ ಮಧ್ಯೆ ಕಲಾವಿದರ ಸಂಭಾವನೆ ವಿಚಾರ ರಿವೀಲ್ ಆಗಿದೆ.
‘ಮಿರ್ಜಾಪುರ ಸೀಸನ್ 2′ ಕೊನೆಯಲ್ಲಿ ಮುನ್ನಾ ಮೇಲೆ ಗುಂಡಿನ ದಾಳಿ ನಡೆದಿತ್ತು. ಮೂರನೇ ಸೀಸನ್ ಆರಂಭದಲ್ಲಿ ಮುನ್ನಾ ನಿಧನರಾದರು ಎಂದು ತೋರಿಸಲಾಗಿದೆ. ಮುನ್ನಾ ಅವರ ನಿಧನವಾರ್ತೆ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಕಾಲೀನ್ ಭಯ್ಯಾ ಫುಲ್ ಸೀಸನ್ನಲ್ಲಿ ಶೋಪೀಸ್ ರೀತಿ ಆಗಿದ್ದಾರೆ ಎನ್ನುತ್ತಾರೆ ಪ್ರೇಕ್ಷಕರು. ಈ ಬಗ್ಗೆಯೂ ಚರ್ಚೆಯಾಗಿದೆ. ಸದ್ಯ ಸಂಭಾವನೆ ವಿಚಾರ ಚರ್ಚೆ ಆಗುತ್ತಿದೆ.
ನಟಿ ರಸಿಕಾ ದುಗ್ಗಲ್ ಈ ಸರಣಿಯಲ್ಲಿ ಬೀನಾ ತ್ರಿಪಾಠಿ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಸರಣಿಯ ಪ್ರತಿ ಸಂಚಿಕೆಗೆ ನಟಿ 2 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಅಂದರೆ 10 ಸಂಚಿಕೆಗಳಿಗೆ ನಟಿ 20 ಲಕ್ಷ ಸಂಭಾವನೆ ಪಡೆದಿದ್ದಾರೆ.
ಧಾರಾವಾಹಿಯಲ್ಲಿ ಗುಡ್ಡು ಪಂಡಿತ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಅಲಿ ಫಜಲ್ ಪ್ರತಿ ಸಂಚಿಕೆಗೆ 12 ಲಕ್ಷ ರೂಪಾಯಿ ಪಡೆದಿದ್ದಾರೆ. 10 ಎಪಿಸೋಡ್‌ಗಳಿಗೆ 1.20 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಈ ಸರಣಿಯಲ್ಲಿ ನಟ ಜಿತೇಂದ್ರ ಕುಮಾರ್ ಅತಿಥಿ ನಟನಾಗಿ ಕಾಣಿಸಿಕೊಂಡಿದ್ದಾರೆ. ‘ಪಂಚಾಯತ್ 2′ ನ ಒಂದು ಸಂಚಿಕೆಗೆ ನಟ 4 ಲಕ್ಷ ರೂಪಾಯಿಗಳನ್ನು ಸಂಭಾವನೆಯಾಗಿ ತೆಗೆದುಕೊಂಡಿದ್ದಾರೆ. ಹಾಗಾಗಿ ಅವರು ಮೂರನೇ ಸೀಸನ್‌ಗಾಗಿ ತಮ್ಮ ಶುಲ್ಕವನ್ನು ಹೆಚ್ಚಿಸಿದ್ದಾರೆ ಎಂದು ವರದಿಯಾಗಿದೆ.
ಮಾಧ್ಯಮ ವರದಿಗಳ ಪ್ರಕಾರ ‘ಮಿರ್ಜಾಪುರ 2′ ಚಿತ್ರಕ್ಕಾಗಿ ನಟ ಪಂಕಜ್ ತ್ರಿಪಾಠಿ 2 ರಿಂದ 10 ಕೋಟಿ ಸಂಭಾವನೆ ಪಡೆದಿದ್ದಾರೆ. ಈ ಸಮಯದಲ್ಲಿ, ಅವರ ಸಂಭಾವನೆಯಲ್ಲಿ ಹೆಚ್ಚಳದ ಬಗ್ಗೆಯೂ ಮಾಹಿತಿ ಇದೆ. ಆದರೆ ಪಂಕಜ್ ಪಡೆದ ಸಂಭಾವನೆ ಎಷ್ಟು ಎಂಬ ಮಾಹಿತಿ ಹೊರಬಿದ್ದಿಲ್ಲ. ನಟಿ ಶ್ವೇತಾ ತ್ರಿಪಾಠಿ ಒಂದು ಸಂಚಿಕೆಗೆ 2.20 ಲಕ್ಷ ಸಂಭಾವನೆ ಪಡೆದಿದ್ದಾರೆ. ಅಂದರೆ ಶ್ವೇತಾ 10 ಸಂಚಿಕೆಗಳಿಗೆ 22 ಲಕ್ಷ ರೂಪಾಯಿ ಪಡೆದಿದ್ದಾರೆ.
ಇದನ್ನೂ ಓದಿ: ಅಮೇಜಾನ್ ಪ್ರೈಮ್ನಲ್ಲಿ ಪ್ರಸಾರ ಆರಂಭಿಸಿದ ‘ಮಿರ್ಜಾಪುರ್ 3’; ಹೇಗಿದೆ ಹೊಸ ಸೀಸನ್?
ಮುನ್ನಾ ಭಯ್ಯಾ ಇಲ್ಲದೆ ಇರುವುದು ಫ್ಯಾನ್ಸ್ಗೆ ಸಾಕಷ್ಟು ಬೇಸರ ಮೂಡಿಸಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:30 am, Sun, 7 July 24