‘ಹೀರಾಮಂಡಿ’ಗೆ ಸೀಕ್ವೆಲ್ ಘೋಷಿಸಿದ ನೆಟ್ಫ್ಲಿಕ್ಸ್; ಭಾರತದಲ್ಲಿ ಸಾಗಲಿದೆ ಕಥೆ
‘ಹೀರಾಮಂಡಿ’ ಕಲಾವಿದರ ನಟನೆಗೆ ಭರ್ಜರಿ ಮೆಚ್ಚುಗೆ ಸಿಕ್ಕಿದೆ. ಹೀರಾಮಂಡಿಯ ವೇಶ್ಯರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿ ಆಗುತ್ತಾರೆ. ಎರಡನೇ ಭಾಗದಲ್ಲಿ ದ್ವಿಭಜನೆಯ ನಂತರ ಹೀರಾಮಂಡಿ ಮೇಲೆ ಆದ ಪರಿಣಾಮಗಳನ್ನು ವಿವರಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.
ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ನಿರ್ದೇಶನದ ‘ಹೀರಾಮಂಡಿ: ದಿ ಡೈಮಂಡ್ ಬಜಾರ್’ ಸೀರಿಸ್ ಸಾಕಷ್ಟು ಜನಪ್ರಿಯತೆ ಪಡೆದಿದೆ. ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆದ ಈ ಸೀರಿಸ್ ದೊಡ್ಡ ಮಟ್ಟದಲ್ಲಿ ವೀಕ್ಷಣೆ ಕಂಡಿದೆ. ಈಗ ನೆಟ್ಫ್ಲಿಕ್ಸ್ ಕಡೆಯಿಂದ ಘೋಷಣೆ ಒಂದು ಆಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಈ ಸೀರಿಸ್ ಯಾವ ರೀತಿಯಲ್ಲಿ ಮೂಡಿ ಬರಲಿದೆ ಎನ್ನುವ ಕುತೂಹಲ ಮೂಡಿದೆ.
‘ಹೀರಾಮಂಡಿ’ ಒಂದು ಮ್ಯೂಸಿಕ್ ಸೀರಿಸ್ ರೀತಿಯಲ್ಲಿ ಮೂಡಿ ಬಂದಿದೆ. ಈ ಸರಣಿಯ ಹಾಡನ್ನು ಅನೇಕರು ಇಷ್ಟಪಟ್ಟಿದ್ದಾರೆ. ಕಲಾವಿದರ ನಟನೆಗೆ ಭರ್ಜರಿ ಮೆಚ್ಚುಗೆ ಸಿಕ್ಕಿದೆ. ಹೀರಾಮಂಡಿಯ ವೇಶ್ಯರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿ ಆಗುತ್ತಾರೆ. ಎರಡನೇ ಭಾಗದಲ್ಲಿ ದ್ವಿಭಜನೆಯ ನಂತರ ಹೀರಾಮಂಡಿ ಮೇಲೆ ಆದ ಪರಿಣಾಮಗಳನ್ನು ವಿವರಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.
View this post on Instagram
ಮಾಧ್ಯಮಗಳ ಜೊತೆ ಮಾತನಾಡಿರುವ ಬನ್ಸಾಲಿ ‘ಹೀರಾಮಂಡಿ 2’ ಬಗ್ಗೆ ಮಾತನಾಡಿದ್ದಾರೆ ‘ಹೀರಾಮಂಡಿ ಸೀಕ್ವೆಲ್ನಲ್ಲಿ ಮಹಿಳೆಯರು ಲಾಹೋರ್ನಿಂದ ಸಿನಿಮಾ ಜಗತ್ತಿಗೆ ಬಂದಿದ್ದಾರೆ. ಅನೇಕರು ಲಾಹೋರ್ನ ತೊರೆದಿದ್ದಾರೆ. ಹಲವರು ಮುಂಬೈ ಫಿಲ್ಮ್ ಇಂಡಸ್ಟ್ರಿ ಅಥವಾ ಕೋಲ್ಕತ್ತಾ ಫಿಲ್ಮ್ ಇಂಡಸ್ಟ್ರಿಯಲ್ಲಿ ಸೆಟಲ್ ಆಗಿದ್ದಾರೆ. ಆದರೆ, ಬಜಾರ್ನ ಪ್ರಯಾಣ ಹಾಗೆಯೇ ಇರುತ್ತದೆ. ಅವರು ಇಲ್ಲಿಯೂ ಡ್ಯಾನ್ಸ್ ಮಾಡಬೇಕು, ಹಾಡಬೇಕು. ಅವರು ಈಗ ನವಾಬ್ಗಳಿಗಾಗಲ್ಲ, ನಿರ್ಮಾಪಕರಿಗೆ ಇದೆಲ್ಲವನ್ನೂ ಮಾಡಬೇಕು. ಯಾವಾಗ ಈ ಸರಣಿ ಸೆಟ್ಟೇರುತ್ತದೆ ಗೊತ್ತಿಲ್ಲ’ ಎಂದಿದ್ದರು ಅವರು.
ಇದನ್ನೂ ಓದಿ: ‘ಹುಡುಗಿಯರೂ ಅಸಹ್ಯವಾಗಿ ಮುಟ್ಟುತ್ತಾರೆ’: ಕೆಟ್ಟ ಘಟನೆ ವಿವರಿಸಿದ ‘ಹೀರಾಮಂಡಿ’ ನಟಿ
ಇಂದು (ಜೂನ್ 3) ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಆಗಿದೆ. ಮುಂಬೈನಲ್ಲಿ 100ಕ್ಕೂ ಅಧಿಕ ಡ್ಯಾನ್ಸರ್ಗಳು ನೃತ್ಯ ಮಾಡುತ್ತಿರುವ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ‘ಹೀರಾಮಂಡಿ ಎರಡನೇ ಸೀಸನ್ ಬರಲಿದೆ’ ಎಂದು ಬರೆಯಲಾಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.