Madhuri Dixit: ನಟಿ ಮಾಧುರಿ ದೀಕ್ಷಿತ್ ಬಗ್ಗೆ ಅವಹೇಳನಕಾರಿ ಕಮೆಂಟ್​; ನೆಟ್​ಫ್ಲಿಕ್ಸ್​ಗೆ ಲೀಗಲ್ ನೋಟಿಸ್

|

Updated on: Mar 28, 2023 | 12:29 PM

‘ಬಿಗ್ ಬ್ಯಾಂಗ್ ಥಿಯರಿ’ ಅಮೆರಿಕದ ಸಿಚ್ಯುವೇಷನಲ್ ಕಾಮಿಡಿ ಶೋ. 12 ಸೀಸನ್ ಪ್ರಸಾರ ಕಂಡಿದೆ. ನೆಟ್​ಫ್ಲಿಕ್ಸ್ ಇದನ್ನು ಬಿತ್ತರ ಮಾಡಿತ್ತು. ಇದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

Madhuri Dixit: ನಟಿ ಮಾಧುರಿ ದೀಕ್ಷಿತ್ ಬಗ್ಗೆ ಅವಹೇಳನಕಾರಿ ಕಮೆಂಟ್​; ನೆಟ್​ಫ್ಲಿಕ್ಸ್​ಗೆ ಲೀಗಲ್ ನೋಟಿಸ್
ಮಾಧುರಿ ದೀಕ್ಷಿತ್
Follow us on

‘ಬಿಗ್ ಬ್ಯಾಂಗ್ ಥಿಯರಿ’ ಶೋನಲ್ಲಿ ನಟಿ ಮಾಧುರಿ ದೀಕ್ಷಿತ್​ಗೆ (Madhuri Dixit) ಅವಮಾನ ಮಾಡಲಾಗಿದೆ. ಈ ಕಾರಣಕ್ಕೆ ಎರಡನೇ ಸೀಸನ್​ನ ಮೊದಲ ಎಪಿಸೋಡ್ ಡಿಲೀಟ್ ಮಾಡುವಂತೆ ನೆಟ್​ಫ್ಲಿಕ್ಸ್​ಗೆ ರಾಜಕೀಯ ವಿಶ್ಲೇಷಕ ಮಿಥುನ್ ವಿಜಯ್ ಕುಮಾರ್ (Mithun Vijay Kumar) ನೋಟಿಸ್ ನೀಡಿದ್ದಾರೆ. ಈ ನೋಟಿಸ್​ಗೆ ಒಟಿಟಿ ಪ್ಲಾಟ್​ಫಾರ್ಮ್ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಸದ್ಯ, ಮಾಧುರಿ ದೀಕ್ಷಿತ್ ಬಗ್ಗೆ ಇರುವ ಅವಹೇಳನಕಾರಿ ಹೇಳಿಕೆಯನ್ನು ತೆಗೆದು ಹಾಕುವಂತೆ ಆಗ್ರಹ ಬಂದಿದೆ.

‘ಬಿಗ್ ಬ್ಯಾಂಗ್ ಥಿಯರಿ’ ಅಮೆರಿಕದ ಸಿಚ್ಯುವೇಷನಲ್ ಕಾಮಿಡಿ ಶೋ. 12 ಸೀಸನ್ ಪ್ರಸಾರ ಕಂಡಿದೆ. ನೆಟ್​ಫ್ಲಿಕ್ಸ್ ಇದನ್ನು ಬಿತ್ತರ ಮಾಡಿತ್ತು. ಇದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಈ ಶೋನಲ್ಲಿ ಬರುವ ಎರಡು ಪಾತ್ರಗಳು ಐಶ್ವರ್ಯಾ ರೈ ಹಾಗೂ ಮಾಧುರಿ ದೀಕ್ಷಿತ್ ಅವರನ್ನು ಹೋಲಿಕೆ ಮಾಡುತ್ತವೆ. ಜೊತೆಗೆ ಮಾಧುರಿ ದೀಕ್ಷಿತ್ ಬಗ್ಗೆ ಕೆಟ್ಟ ಪದಗಳ ಬಳಕೆ ಮಾಡುತ್ತಾರೆ. ಇದಕ್ಕೆ ಸಂಬಂಧಿಸಿ ಲೀಗಲ್ ನೋಟಿಸ್ ಕಳುಹಿಸಲಾಗಿದೆ.

‘ಈ ರೀತಿ ಶಬ್ದಗಳ ಬಳಕೆ ತಪ್ಪು ಮಾತ್ರವಲ್ಲ ಮಾನಹಾನಿಕರವೂ ಹೌದು. ಈ ಎಪಿಸೋಡ್​ನ ತೆಗೆದುಹಾಕಬೇಕು ಅಥವಾ ಲೀಗಲ್ ಆ್ಯಕ್ಷನ್ ಎದುರಿಸಬೇಕು. ಮಹಿಳೆಯರ ಬಗೆಗಿನ ತಾರತಮ್ಯವನ್ನು ಈ ಶೋ ಪ್ರಚೋದಿಸುವಂತಿದೆ’ ಎಂದು ಮಿಥುನ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: Snehalata Dixit: ಮಾಧುರಿ ದೀಕ್ಷಿತ್​ ತಾಯಿ ಸ್ನೇಹಲತಾ ನಿಧನ; 91ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಹಿರಿಯ ಜೀವ

‘ಬಿಗ್ ಬ್ಯಾಂಗ್ ಥಿಯರಿ’ 2007ರಲ್ಲಿ ಪ್ರಸಾರ ಆರಂಭಿಸಿತು. 2019ರಲ್ಲಿ ಇದು ಕೊನೆ ಆಗಿದೆ. 12 ಸೀಸನ್​ಗಳನ್ನು ಇದು ಪೂರೈಸಿದೆ. ಇದರ 12 ಸೀಸನ್​ಗಳು ನೆಟ್​ಫ್ಲಿಕ್ಸ್​ನಲ್ಲಿ ಲಭ್ಯವಿದೆ. ವಿವಾದದ ಬಗ್ಗೆ ನೆಟ್​ಫ್ಲಿಕ್ಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: Madhuri Dixit: ಪಾಕಿಸ್ತಾನಿ ಹುಡುಗಿಯ ಡ್ಯಾನ್ಸ್​ ಕಾಪಿ ಮಾಡಿದ ಮಾಧುರಿ ದೀಕ್ಷಿತ್​; ನೆಟ್ಟಿಗರಿಂದ ಬುದ್ಧಿಮಾತು

1984ರಲ್ಲಿ ಅಬೋದ್​ ಸಿನಿಮಾ ಮೂಲಕ ಮಾಧುರಿ ದೀಕ್ಷಿತ್​ ಅವರು ಬಾಲಿವುಡ್​ಗೆ ಕಾಲಿಟ್ಟರು. ಆರಂಭದಲ್ಲೇ ತಮ್ಮ ನಟನೆ ಮೂಲಕ ಅವರು ಗಮನ ಸೆಳೆದರು. ಆಗ ಮಾಧುರಿ ವಯಸ್ಸು ಕೇವಲ 17. ನಂತರ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದ್ದು ‘ತೇಜಾಬ್​’ ಸಿನಿಮಾ ಮೂಲಕ. ಆ ಚಿತ್ರದ ‘ಏಕ್​ ದೋ ತೀನ್​..’ ಹಾಡು ಸೂಪರ್​ ಹಿಟ್​ ಆಯಿತು. ಆ ಮೂಲಕ ಮಾಧುರಿ ದೀಕ್ಷಿತ್​ ದೇಶಾದ್ಯಂತ ಖ್ಯಾತಿ ಗಳಿಸಿದರು. ಸಿನಿಪ್ರೇಮಿಗಳಿಗೆ ಇಂದಿಗೂ ಆ ಹಾಡು ಫೇವರಿಟ್​ ಆಗಿ ಉಳಿದುಕೊಂಡಿದೆ. ತೇಜಾಬ್​ ಚಿತ್ರದ ನಂತರ ಮಾಧುರಿ ದೀಕ್ಷಿತ್​ ಅವರ ಸ್ಟಾರ್​ಗಿರಿ ದೊಡ್ಡ ಮಟ್ಟಕ್ಕೆ ಏರಿತು. ಸ್ಟಾರ್​ ನಟರಿಗಿಂತಲೂ ಅವರು ಹೆಚ್ಚು ಸಂಭಾವನೆ ಪಡೆಯುತ್ತಿದ್ದರು ಎಂಬುದು ಅಚ್ಚರಿಯ ವಿಷಯ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Published On - 12:29 pm, Tue, 28 March 23