ಜನವರಿ 26ರಂದು ಗಣರಾಜ್ಯೋತ್ಸವದ ಪ್ರಯುಕ್ತ ‘ಅನಿಮಲ್’ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ (Animal OTT Release) ಆಗಿದೆ. ಚಿತ್ರಮಂದಿರದಲ್ಲಿ ಮಿಸ್ ಮಾಡಿಕೊಂಡವರು ಹಾಗೂ ಈಗಾಗಲೇ ಥಿಯೇಟರ್ನಲ್ಲಿ ನೋಡಿದ್ದರೂ ಮತ್ತೊಮ್ಮೆ ಮನೆಯಲ್ಲಿ ಕುಳಿತು ವೀಕ್ಷಿಸಬೇಕು ಎಂದುಕೊಂಡಿದ್ದವರಿಗಾಗಿ ನೆಟ್ಫ್ಲಿಕ್ಸ್ನಲ್ಲಿ (Animal On Netflix) ‘ಅನಿಮಲ್’ ಸಿನಿಮಾ ಲಭ್ಯವಾಗಿದೆ. ಆದರೆ ಒಟಿಟಿಯಲ್ಲಿ ಈ ಸಿನಿಮಾ ನೋಡಿದ ಕೆಲವರಿಗೆ ಬೇಸರ ಆಗಿದೆ. ಅದಕ್ಕೆ ಕಾರಣವೂ ಸ್ಪಷ್ಟವಾಗಿದೆ. ಥಿಯೇಟರ್ ವರ್ಷನ್ನಲ್ಲಿ ಡಿಲಿಟ್ ಆಗಿದ್ದ ದೃಶ್ಯಗಳು ಕೂಡ ಒಟಿಟಿ ವರ್ಷನ್ನಲ್ಲಿ ಇರಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ‘ಅನಿಮಲ್’ (Animal Movie) ತಂಡದವರು ಆ ನಿರೀಕ್ಷೆಯನ್ನು ಹುಸಿ ಮಾಡಿದ್ದಾರೆ. ಹಾಗಾಗಿ ಒಟಿಟಿಯಲ್ಲಿ ಈ ಚಿತ್ರವನ್ನು ನೋಡಿದ ಬಳಿಕ ಒಂದು ವರ್ಗದ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನೆಟ್ಫ್ಲಿಕ್ಸ್ ಒಟಿಟಿಯಲ್ಲಿ ‘ಅನಿಮಲ್’ ಸಿನಿಮಾ ಬಿಡುಗಡೆ ಆದಾಗ ಪ್ರೇಕ್ಷಕರು ಮೊದಲು ಗಮನಿಸಿದ್ದು ಚಿತ್ರದ ಅವಧಿ. ಚಿತ್ರಮಂದಿರದಲ್ಲಿ ಇದ್ದ ರೀತಿಯೇ 3 ಗಂಟೆ 24 ನಿಮಿಷ ಅವಧಿಯ ಸಿನಿಮಾವನ್ನೇ ಒಟಿಟಿಯಲ್ಲೂ ರಿಲೀಸ್ ಮಾಡಲಾಗಿದೆ. ಅಂದರೆ ಯಾವುದೇ ಡಿಲಿಟೆಡ್ ಸೀನ್ಗಳು ಕೂಡ ಇದರಲ್ಲಿ ಸೇರಿಸಿಲ್ಲ. ಹಾಗಾಗಿ ಪ್ರೇಕ್ಷಕರಿಗೆ ನಿರಾಸೆ ಆಗಿದೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್, ಬಾಬಿ ಡಿಯೋಲ್, ರಶ್ಮಿಕಾ ಮಂದಣ್ಣ ಮುಂದಾದವರು ನಟಿಸಿದ್ದಾರೆ.
ಇದನ್ನೂ ಓದಿ: ‘ಅನಿಮಲ್’ ಸಿನಿಮಾ ಗೆಲುವು ಅಪಾಯಕಾರಿ ಎಂದ ಜಾವೇದ್ ಅಖ್ತರ್; ಪ್ರೇಕ್ಷಕರಿಗೆ ಕಿವಿಮಾತು
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಅವರು ಒಂದು ಪ್ರಾಮಿಸ್ ಮಾಡಿದ್ದರು. ಒಟಿಟಿಯಲ್ಲಿ ಎಕ್ಸ್ಟೆಂಡೆಡ್ ವರ್ಷನ್ ಬಿಡುಗಡೆ ಆಗಲಿದೆ ಎಂದು ಅವರು ಹೇಳಿದ್ದರು. ಅಲ್ಲದೇ, ರಣಬೀರ್ ಕಪೂರ್ ಹಾಗೂ ಬಾಬಿ ಡಿಯೋಲ್ ನಡುವಿನ ಕಿಸ್ ದೃಶ್ಯ ಸಹ ಇರಲಿದೆ ಎಂದು ಅವರು ಹೇಳಿದ್ದರು. ಆದರೆ ಒಟಿಟಿ ವರ್ಷನ್ನಲ್ಲಿ ಆ ರೀತಿಯ ಯಾವುದೇ ದೃಶ್ಯ ಕಾಣಿಸಿಲ್ಲ.
ಇದನ್ನೂ ಓದಿ: ‘ನಾನು ಕೆಟ್ಟ ವ್ಯಕ್ತಿಯ ಪಾತ್ರ ಮಾಡಿದರೆ…’; ‘ಅನಿಮಲ್’ ಚಿತ್ರಕ್ಕೆ ಕುಟುಕಿದ್ರಾ ಶಾರುಖ್ ಖಾನ್?
ಬಾಕ್ಸ್ ಆಫೀಸ್ನಲ್ಲಿ ‘ಅನಿಮಲ್’ ಸಿನಿಮಾ ಅಬ್ಬರಿಸಿದೆ. ಭಾರತದ ಬಾಕ್ಸ್ ಆಫೀಸ್ನಲ್ಲಿ 555 ಕೋಟಿ ರೂ. ಗಳಿಸಿದೆ. ಜಾಗತಿಕ ಬಾಕ್ಸ್ ಆಫೀಸ್ನ ಗಳಿಕೆಯನ್ನೂ ಸೇರಿಸಿದರೆ 900 ಕೋಟಿ ರೂಪಾಯಿಗೂ ಅಧಿಕ ಆಗುತ್ತದೆ. ಈ ಸಿನಿಮಾ ಬಿಡುಗಡೆ ಆದಾಗ ವಿಮರ್ಶಕರಿಂದ ಟೀಕೆ ವ್ಯಕ್ತವಾಯಿತ್ತು. ಅನೇಕ ದೃಶ್ಯಗಳಿಗೆ ಆಕ್ಷೇಪ ವ್ಯಕ್ತವಾಯಿತ್ತು. ಹಾಗಿದ್ದರೂ ಕೂಡ ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ಗೆದ್ದಿದೆ. ಈಗ ಒಟಿಟಿಯಲ್ಲಿ ಬಿಡುಗಡೆಯಾಗಿ ಮತ್ತೆ ಸುದ್ದಿಯಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:00 pm, Fri, 26 January 24