ಜಿಯೋ ಸಿನಿಮಾಕ್ಕೆ ಬಂತು ಏಳು ಆಸ್ಕರ್ ಗೆದ್ದ ‘ಆಪನ್​ಹೈಮರ್’

|

Updated on: Mar 20, 2024 | 2:59 PM

Oppenheimer: 13 ವಿಭಾಗಗಳಲ್ಲಿ ಆಸ್ಕರ್​ಗೆ ನಾಮಿನೇಟ್ ಆಗಿ ಅತ್ಯುತ್ತಮ ಸಿನಿಮಾ ಸೇರಿದಂತೆ ಏಳು ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದ ‘ಆಪನ್​ಹೈಮರ್’ ಸಿನಿಮಾ ಜಿಯೋ ಸಿನಿಮಾಸ್​ನಲ್ಲಿ ಸ್ಟ್ರೀಮ್ ಆಗಲಿದೆ. ಯಾವಾಗ?

ಜಿಯೋ ಸಿನಿಮಾಕ್ಕೆ ಬಂತು ಏಳು ಆಸ್ಕರ್ ಗೆದ್ದ ‘ಆಪನ್​ಹೈಮರ್’
Follow us on

ಈ ಬಾರಿಯ ಆಸ್ಕರ್​ನಲ್ಲಿ (Oscar) ಏಳು ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದು ದಾಖಲೆ ಬರೆದ ‘ಆಪನ್​ಹೈಮರ್’ (oppenheimer) ಸಿನಿಮಾ ಜಿಯೋ ಸಿನಿಮಾಸ್ ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ. ವಿಶ್ವದ ಅತ್ಯುತ್ತಮ ಸಿನಿಮಾ ನಿರ್ದೇಶಕರಲ್ಲಿ ಒಬ್ಬರೆನಿಸಿಕೊಂಡಿರುವ ಕ್ರಿಸ್ಟೊಫರ್ ನೋಲನ್ ನಿರ್ದೇಶನ ಮಾಡಿ, ಕಿಲಿಯನ್ ಮರ್ಫಿ, ರಾಬರ್ಟ್ ಡೌನಿ ಜ್ಯೂನಿಯರ್, ಎಮಿಲಿ ಬ್ಲಂಟ್, ಮ್ಯಾಟ್ ಡ್ಯಾಮನ್, ಫ್ಲೋರೆನ್ಸ್ ಪುಗ್ ಇನ್ನೂ ಕೆಲವು ಟಾಪ್ ನಟ-ನಟಿಯರು ನಟಿಸಿರುವ ‘ಆಪನ್​ಹೈಮರ್’ ಸಿನಿಮಾ ಮಾರ್ಚ್ 21ರಿಂದ ಹಿಂದಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಜಿಯೋ ಸಿನಿಮಾಸ್​ನಲ್ಲಿ ಸ್ಟ್ರೀಮ್ ಆಗಲಿದೆ.

ದ್ವಿತೀಯ ಮಹಾಯುದ್ಧದಲ್ಲಿ ಅಣುಬಾಂಬ್ ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಅಮೆರಿಕಾದ ಮೇಧಾವಿ ಭೌತಶಾಸ್ತ್ರಜ್ಞ ಜೆ.ರಾಬರ್ಟ್ ಓಪನ್ ಹೈಮರ್ ಜೀವನದ ಕುರಿತಾದ ಕತೆಯನ್ನು ‘ಆಪನ್​ಹೈಮರ್’ ಒಳಗೊಂಡಿದೆ. ‘ಅಣುಬಾಂಬ್ ಪಿತಾಮಹ’ ಎಂದು ಗುರುತಿಸಲಾಗುವ ಆಫನ್​ಹೈಮರ್ ಅವರ ಅಸಾಧಾರಣ ಜೀವನ ಕುರಿತಾಗಿದೆ. ಮ್ಯಾನ್ ಹಟ್ಟನ್ ಪ್ರಾಜೆಕ್ಟ್ ನಲ್ಲಿ ಲಾಸ್ ಅಲಮೊಸ್ ಲ್ಯಾಬೊರೇಟರಿಯಲ್ಲಿ ಅವರ ನೇತೃತ್ವದ ತಂಡವು ಇತಿಹಾಸವನ್ನೇ ಬದಲಾಯಿಸಿತು. ಕಿಲಿಯನ್ ಮರ್ಫಿ, ಆಫನ್​ಹೈಮರ್ ಪಾತ್ರದಲ್ಲಿ ಅದ್ಭುತ ಅಭಿನಯ ಮಾಡಿದ್ದು, ಆಫನ್​ಹೈಮರ್​ನ ಭಿನ್ನ ವ್ಯಕ್ತಿತ್ವವನ್ನು, ವಿಜ್ಞಾನಿಯ ಸಂಕೀರ್ಣತೆ, ಅಭದ್ರತೆ, ಅಸಹಾಯಕತೆ ಮತ್ತು ನೈತಿಕ ದ್ವಂದ್ವಗಳನ್ನು ಅದ್ಭುತವಾಗಿ ಅಭಿವ್ಯಕ್ತಿಪಡಿಸಿದ್ದಾರೆ. ಅವರ ಅತ್ಯುತ್ತಮ ನಟನೆಗೆ ಕಿಲಿಯಾನ್ ಮರ್ಫಿಗೆ ಆಸ್ಕರ್ ಸಹ ದೊರಕಿದೆ.

ಇದನ್ನೂ ಓದಿ:Oppenheimer movie Review: ಆಪನ್​ಹೈಮರ್, ವಿಜ್ಞಾನಿಯೋ? ವಿಧ್ವಂಸಕನೋ, ದೇಶದ್ರೋಹಿಯೊ, ರಾಜಕಾರಣಿಯೋ?

ಕಳೆದ ವರ್ಷ ಜೂನ್ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಅಪಾರ ಯಶಸ್ಸು ಪಡೆದುಕೊಂಡಿದೆ. 96ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಏಳು ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದಿದ್ದು ಅದರಲ್ಲಿ ಶ್ರೇಷ್ಠ ಸಂಕಲನ, ಶ್ರೇಷ್ಠ ಹಿನ್ನೆಲೆ ಸಂಗೀತ ಮತ್ತು ಶ್ರೇಷ್ಠ ಛಾಯಾಗ್ರಹಣ, ಅತ್ಯುತ್ತಮ ನಟ, ಅತ್ಯುತ್ತಮ ಪೋಷಕ ನಟ, ಅತ್ಯುತ್ತಮ ನಿರ್ದೇಶಕ ಮತ್ತಿತರೆ ವಿಭಾಗಗಳು ಒಳಗೊಂಡಿವೆ. ಇದು ಗೋಲ್ಡನ್ ಗ್ಲೋಬ್ಸ್ ನಲ್ಲಿ 8 ಪ್ರಶಸ್ತಿಗಳನ್ನು ಗೆದ್ದಿದ್ದು ಅದರಲ್ಲಿ ಶ್ರೇಷ್ಠ ಡ್ರಾಮಾ ಮೋಷನ್ ಪಿಕ್ಚರ್, ಮೋಷನ್ ಪಿಕ್ಚರ್ ನ ಶ್ರೇಷ್ಠ ನಿರ್ದೇಶಕ ಮತ್ತು ಮೋಷನ್ ಪಿಕ್ಚರ್ ನಲ್ಲಿ ಶ್ರೇಷ್ಠ ಆಕ್ಟರ್ ಡ್ರಾಮಾ ಒಳಗೊಂಡಿದೆ. ಬಾಫ್ತಾ ಚಲನಚಿತ್ರ ಪ್ರಶಸ್ತಿಗಳಲ್ಲಿ ಓಪನ್ ಹೀಮರ್ ಏಳು ಗೆಲುವುಗಳನ್ನು ಸಾಧಿಸಿದ್ದು ಶ್ರೇಷ್ಠ ಚಲನಚಿತ್ರ ಮತ್ತು ಶ್ರೇಷ್ಠ ನಿರ್ದೇಶಕ ಒಳಗೊಂಡಿವೆ. ಹೆಚ್ಚುವರಿಯಾಗಿ ಇದು ಎಂಟು ವಿಭಾಗಗಳಲ್ಲಿ 2024ರ ವಿಮರ್ಶಕರ ಆಯ್ಕೆಯ ಪ್ರಶಸ್ತಿಗಳನ್ನು ಗೆದ್ದಿದೆ. ಕ್ರಿಸ್ಟೋಫರ್ ನೋಲನ್ ಅವರ ಕಥೆ ಹೇಳುವ ಕಲೆಗಾರಿಕೆ ಮತ್ತು ಫ್ಲಾರೆನ್ಸ್ ಪುಗ್, ರಾಬರ್ಟ್ ಡೌನೀ ಜೂನಿಯರ್, ಗ್ಯಾರಿ ಓಲ್ಡ್ ಮನ್, ರಮಿ ಮಲೆಕ್ ಮತ್ತು ಕೆನೆತ್ ಬ್ರಾನಾಗ್ ಒಳಗೊಂಡ ತಾರಾಗಣವು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು.

‘ಆಪನ್​ಹೈಮರ್’ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಈ ಹಿಂದೆ ಬಿಡುಗಡೆ ಆಗಿದೆಯಾದರೂ ಅಲ್ಲಿ ಉಚಿತ ವೀಕ್ಷಣೆಗೆ ಲಭ್ಯವಿಲ್ಲ. ಬಾಡಿಗೆ ಆಧಾರದಲ್ಲಿ ಕೊಟ್ಟು ‘ಆಪನ್​ಹೈಮರ್’ ಸಿನಿಮಾ ನೋಡಬೇಕಿದೆ. ಆದರೆ ಜಿಯೋ ಸಿನಿಮಾಸ್​ನಲ್ಲಿ ಉಚಿತವಾಗಿ ನೋಡಲು ಲಭ್ಯವಾಗುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ