Oscar Awards 2024: ಆಸ್ಕರ್ನಲ್ಲಿ ಏಳು ಅವಾರ್ಡ್ ಗೆದ್ದ ‘ಆಪನ್ಹೈಮರ್; ಯಾವ ಒಟಿಟಿಯಲ್ಲಿ ವೀಕ್ಷಿಸಬಹುದು?
Oppenheimer OTT: ‘ಬಾರ್ಬಿ’ ಮೊದಲಾದ ಸಿನಿಮಾಗಳ ಸ್ಪರ್ಧೆಗಳ ನಡುವೆಯೂ ‘ಆಪನ್ಹೈಮರ್’ ಸಿನಿಮಾ ಮುನ್ನಡೆ ಸಾಧಿಸಿದೆ. ‘ಆಪನ್ಹೈಮರ್’ ಸಿನಿಮಾ ಬರೋಬ್ಬರಿ ಏಳು ವಿಭಾಗಗಳಲ್ಲಿ ಅವಾರ್ಡ್ ಸಿಕ್ಕಿದೆ. ‘ಆಪನ್ಹೈಮರ್’ ಥಿಯೇಟರ್ನಲ್ಲಿ ರಿಲೀಸ್ ಆಗಿದ್ದು ಕಳೆದ ವರ್ಷ. ಈ ಚಿತ್ರವನ್ನು ಒಟಿಟಿಯಲ್ಲಿ ವೀಕ್ಷಿಸಲು ಇನ್ನೂ ಕೆಲವು ದಿನ ಕಾಯಬೇಕು.
ನೈಜ ಘಟನೆಗಳನ್ನು ಆಧರಿಸಿ ಸಿದ್ಧಗೊಂಡ ‘ಆಪನ್ಹೈಮರ್’ ಸಿನಿಮಾ 2024ರ ಆಸ್ಕರ್ ಅವಾರ್ಡ್ನಲ್ಲಿ ದಾಖಲೆ ಬರೆದಿದೆ. ಈ ಸಿನಿಮಾ ಪ್ರಮುಖ ವಿಭಾಗಗಳಲ್ಲಿ ಏಳು ಅವಾರ್ಡ್ ಗೆದ್ದು ಬೀಗಿದೆ. ಎರಡನೇ ವಿಶ್ವ ಯುದ್ಧದ ಸಂದರ್ಭದಲ್ಲಿ ಅಣುಬಾಂಬ್ ಕಂಡು ಹಿಡಿದು ಅದನ್ನು ಜಪಾನ್ ಮೇಲೆ ಪ್ರಯೋಗಿಸಿದ ಕಥೆಯನ್ನು ಈ ಚಿತ್ರ ಹೊಂದಿದೆ. ಕ್ರಿಸ್ಟೋಫರ್ ನೋಲನ್ (Christopher Nolan) ನಿರ್ದೇಶನದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡಿದೆ. ಕಿಲಿಯನ್ ಮರ್ಫಿ ಅವರು ಆಪನ್ಹೈಮರ್ ಪಾತ್ರದಲ್ಲಿ ಮಿಂಚಿದ್ದಾರೆ.
‘ಬಾರ್ಬಿ’ ಮೊದಲಾದ ಸಿನಿಮಾಗಳ ಸ್ಪರ್ಧೆಗಳ ನಡುವೆಯೂ ‘ಆಪನ್ಹೈಮರ್’ ಸಿನಿಮಾ ಮುನ್ನಡೆ ಸಾಧಿಸಿದೆ. ‘ಆಪನ್ಹೈಮರ್’ ಸಿನಿಮಾ ಬರೋಬ್ಬರಿ ಏಳು ವಿಭಾಗಗಳಲ್ಲಿ ಅವಾರ್ಡ್ ಸಿಕ್ಕಿದೆ. ಅತ್ಯುತ್ತಮ ನಟ (ಕಿಲಿಯನ್ ಮರ್ಫಿ), ಅತ್ಯುತ್ತಮ ನಿರ್ದೇಶನ (ಕ್ರಿಸ್ಟೋಫರ್ ನೋಲನ್), ಅತ್ಯುತ್ತಮ ಪೋಷಕ ನಟ (ರಾಬರ್ಟ್ ಡೌನೇ ಜೂನಿಯರ್), ಅತ್ಯುತ್ತಮ ಸಂಕಲನ, ಅತ್ಯುತ್ತಮ ಛಾಯಾಗ್ರಹಣ ಸೇರಿ ಏಳು ಅವಾರ್ಡ್ಗಳು ಈ ಸಿನಿಮಾಗೆ ಸಿಕ್ಕಿದೆ ಅನ್ನೋದು ವಿಶೇಷ. ಈ ಚಿತ್ರ 13 ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿತ್ತು.
ಇದನ್ನೂ ಓದಿ: ‘ಅತ್ಯುತ್ತಮ ಸಿನಿಮಾ’ ಸೇರಿ ಪ್ರಮುಖ ಅವಾರ್ಡ್ ಪಡೆದ ‘ಆಪನ್ಹೈಮರ್’; ಇಲ್ಲಿದೆ ಆಸ್ಕರ್ ಫುಲ್ ಲಿಸ್ಟ್
ಸಿನಿಮಾದಲ್ಲಿ ಏನಿದೆ?
ಎರಡನೇ ವಿಶ್ವಯುದ್ಧದಲ್ಲಿ ಜಪಾನ್ನ ಹಿರೋಷಿಮಾ ಹಾಗೂ ನಾಗಸಾಕಿ ಮೇಲೆ ಅಮೆರಿಕ ಅಣುಬಾಂಬ್ ಪ್ರಯೋಗಿಸಿತು. ಇದರಿಂದ ವಿಶ್ವದ ರಾಜಕೀಯವೇ ಬದಲಾಗಿ ಹೋಗಿತ್ತು. ಇದಕ್ಕೆ ಕಾರಣವಾಗಿದ್ದು ವಿನಾಶಕಾರಿ ಅಟಾಮಿಕ್ ಬಾಂಬ್ ಜನಕ ವಿಜ್ಞಾನಿ ಜೆ ರಾಬರ್ಟ್ ಆಪನ್ಹೈಮರ್. ಅವನ ಆಲೋಚನೆ, ಅವನು ಇದನ್ನು ಒಳ್ಳೆಯ ಉದ್ದೇಶಕ ಕಂಡು ಹಿಡಿದಿದ್ದು, ನಂತರ ಅದನ್ನು ತಪ್ಪು ಕೆಲಸಕ್ಕೆ ಬಳಕೆ ಆಗಿದ್ದು ಈ ಸಿನಿಮಾದಲ್ಲಿ ಇದೆ. ಅಣು ಬಾಂಬ್ ಪ್ರಯೋಗದ ನಂತರ ಅವರು ಸಾಕಷ್ಟು ನೊಂದಿದ್ದರು.
ಎಲ್ಲಿ ನೋಡಬಹುದು?
ಆಪನ್ಹೈಮರ್ ರಿಲೀಸ್ ಆಗಿದ್ದು ಕಳೆದ ವರ್ಷ. ಈ ಚಿತ್ರವನ್ನು ಒಟಿಟಿಯಲ್ಲಿ ವೀಕ್ಷಿಸಲು ಇನ್ನೂ ಕೆಲವು ದಿನ ಕಾಯಬೇಕು. ಜಿಯೋ ಸಿನಿಮಾದಲ್ಲಿ ಮಾರ್ಚ್ 21ರಿಂದ ಈ ಚಿತ್ರ ಪ್ರಸಾರ ಕಾಣಲಿದೆ. ಈಗ ಸಿನಿಮಾಗೆ ಏಳು ಅವಾರ್ಡ್ ಸಿಕ್ಕಿರುವುದರಿಂದ ಸಿನಿಮಾಗೆ ಹೆಚ್ಚಿನ ನಿರೀಕ್ಷೆ ಸೃಷ್ಟಿ ಆಗಿದೆ. ಜಿಯೋ ಸಿನಿಮಾದಲ್ಲಿ ಎಲ್ಲಾ ಸಿನಿಮಾಗಳನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:24 pm, Mon, 11 March 24