‘ಆಪನ್​ಹೈಮರ್​’ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡಿದ ನಟ ಕಿಲಿಯನ್​ ಮರ್ಫಿಗೆ ಸಿಕ್ಕ ಸಂಭಾವನೆ ಅಬ್ಬಬ್ಬಾ ಇಷ್ಟೊಂದಾ?

Cillian Murphy Remuneration: ವಿಶ್ವಾದ್ಯಂತ ಸದ್ದು ಮಾಡಿರುವ ‘ಆಪನ್​ಹೈಮರ್​’ ಸಿನಿಮಾದಲ್ಲಿ ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಅದರಲ್ಲೂ ಕಿಲಿಯನ್​ ಮರ್ಫಿ ಅವರ ನಟನೆಗೆ ಎಲ್ಲರಿಂದ ಮೆಚ್ಚುಗೆ ಸಿಕ್ಕಿದೆ.

‘ಆಪನ್​ಹೈಮರ್​’ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡಿದ ನಟ ಕಿಲಿಯನ್​ ಮರ್ಫಿಗೆ ಸಿಕ್ಕ ಸಂಭಾವನೆ ಅಬ್ಬಬ್ಬಾ ಇಷ್ಟೊಂದಾ?
ಕಿಲಿಯನ್​ ಮರ್ಫಿ
Follow us
ಮದನ್​ ಕುಮಾರ್​
|

Updated on:Aug 02, 2023 | 4:52 PM

ಹಾಲಿವುಡ್​ ಸಿನಿಪ್ರಿಯರ ವಲಯದಲ್ಲಿ ಇತ್ತೀಚೆಗೆ ಅತಿ ಹೆಚ್ಚು ಚರ್ಚೆಗೆ ಒಳಗಾದ ಸಿನಿಮಾ ಎಂದರೆ ಅದು ‘ಆಪನ್​ಹೈಮರ್​’ (Oppenheimer). ನೈಜ ಘಟನೆಗಳನ್ನು ಆಧರಿಸಿ ತಯಾರಾದ ಈ ಸಿನಿಮಾ ಸೂಪರ್​ ಹಿಟ್​ ಆಗಿದೆ. ಭಾರತದ ಗಲ್ಲಾಪೆಟ್ಟಿಗೆಯಲ್ಲೂ ಭರ್ಜರಿ ಕಲೆಕ್ಷನ್ ಮಾಡಿದೆ. ಖ್ಯಾತ​ ನಿರ್ದೇಶಕ ಕ್ರಿಸ್ಟೋಫರ್​ ನೋಲನ್​ (Christopher Nolan) ಅವರು ಈ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಅವರ ಈ ಹಿಂದಿನ ಸಿನಿಮಾಗಳಿಗಿಂತಲೂ ಡಿಫರೆಂಟ್​ ಆಗಿ ‘ಆಪನ್​ಹೈಮರ್​’ ಮೂಡಿಬಂದಿದೆ. ಈ ಸಿನಿಮಾದಲ್ಲಿ ಕಿಲಿಯನ್​ ಮರ್ಫಿ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಐರ್ಲ್ಯಾಂಡ್​ ಮೂಲದ ಈ ನಟನಿಗೆ ಹಾಲಿವುಡ್​ನಲ್ಲಿ ಸಖತ್​ ಬೇಡಿಕೆ ಇದೆ. ‘ಆಪನ್​ಹೈಮರ್​’ ಸಿನಿಮಾದಲ್ಲಿ ನಟಿಸಿದ್ದಕ್ಕಾಗಿ ಕಿಲಿಯನ್​ ಮರ್ಫಿ (Cillian Murphy) ಅವರಿಗೆ ಬರೋಬ್ಬರಿ 82 ಕೋಟಿ ರೂಪಾಯಿ ಸಂಭಾವನೆ ಸಿಕ್ಕಿದೆ.

ಹಲವಾರು ವರ್ಷಗಳಿಂದ ಹಾಲಿವುಡ್​ನಲ್ಲಿ ಕಿಲಿಯನ್​ ಮರ್ಫಿ ಅವರು ಸಕ್ರಿಯರಾಗಿದ್ದಾರೆ. ‘ಬ್ಯಾಟ್​ಮ್ಯಾನ್ ಬಿಗಿನ್ಸ್​’, ‘ದಿ ಡಾರ್ಕ್​ ನೈಟ್​’, ‘ಡಂಕಿರ್ಕ್​’ ಸೇರಿದಂತೆ ಅನೇಕ ಗಮನಾರ್ಹ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಕ್ರಿಸ್ಟೋಫರ್​ ನೋಲನ್​ ಜೊತೆ ಅವರಿಗೆ ಇರುವ ಒಡನಾಟ ಬಹಳ ಹಳೆಯದು. ಆದರೆ ಅವರಿಗೆ ನೋಲನ್​ ನಿರ್ದೇಶನದ ಸಿನಿಮಾದಲ್ಲಿ ಮೊದಲ ಬಾರಿಗೆ ಮುಖ್ಯಭೂಮಿಕೆ ನಿಭಾಯಿಸುವ ಚಾನ್ಸ್​ ಸಿಕ್ಕಿದ್ದು ‘ಆಪನ್​ಹೈಮರ್​’ ಚಿತ್ರದ ಮೂಲಕ. ಅಣು ಬಾಂಬ್​ ಜನಕ ಎಂದೇ ಖ್ಯಾತರಾಗಿದ್ದ ಅಮೆರಿಕದ ವಿಜ್ಞಾನಿ ಜೆ. ರಾಬರ್ಟ್​ ಆಪನ್​ಹೈಮರ್ ಅವರ ಜೀವನದ ಕುರಿತು ಈ ಸಿನಿಮಾ ಸಿದ್ಧವಾಗಿದ್ದು, ಆಪನ್​ಹೈಮರ್​ ಪಾತ್ರವನ್ನು ಕಿಲಿಯನ್​ ಮರ್ಫಿ ಮಾಡಿದ್ದಾರೆ.

ಇದನ್ನೂ ಓದಿ: Oppenheimer: ‘ಆಪನ್​ಹೈಮರ್​’ ಪಾತ್ರಕ್ಕಾಗಿ ಅಪಾಯಕಾರಿ ಡಯೆಟ್​ ಮಾಡಿದ ನಟ ಕಿಲಿಯನ್​ ಮರ್ಫಿ; ದಿನಕ್ಕೆ ಒಂದೇ ಬಾದಾಮಿ?

ಕಿಲಿಯನ್​ ಮರ್ಫಿ ಅವರು ಪ್ರತಿಭಾವಂತ ನಟ ಎಂಬುದರಲ್ಲಿ ಅನುಮಾನವೇ ಇಲ್ಲ. ‘ಆಪನ್​ಹೈಮರ್​’ ಸಿನಿಮಾದಲ್ಲಿ ಅವರ ನಟನೆಗೆ ಸಖತ್​ ಸ್ಕೋಪ್​ ಸಿಕ್ಕಿದೆ. ಇಡೀ ಸಿನಿಮಾವನ್ನು ಅವರೇ ಆವರಿಸಿಕೊಂಡಿದ್ದಾರೆ. ವಿವಿಧ ಶೇಡ್​ನಲ್ಲಿ ಅವರ ಪಾತ್ರ ಹೈಲೈಟ್​ ಆಗಿದೆ. ಈ ಪಾತ್ರಕ್ಕಾಗಿ ಅವರು 10 ಮಿಲಿಯನ್​ ಡಾಲರ್​ ಸಂಭಾವನೆ ಪಡೆದಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಭಾರತದ ಕರೆನ್ಸಿಯಲ್ಲಿ ಅಂದಾಜು 82 ಕೋಟಿ 36 ಲಕ್ಷದ 65 ಸಾವಿರ ರೂಪಾಯಿ ಆಗಲಿದೆ. ಈ ಸಿನಿಮಾದಲ್ಲಿನ ಅವರ ಅಭಿನಯಕ್ಕೆ ಎಲ್ಲರೂ ಭೇಷ್​ ಎನ್ನುತ್ತಿದ್ದಾರೆ.

ಇದನ್ನೂ ಓದಿ: Oppenheimer: ಮೊಟ್ಟ ಮೊದಲ ಅಣು ಬಾಂಬ್​ ಪರೀಕ್ಷೆಯ ರಿಯಲ್​ ವಿಡಿಯೋ ವೈರಲ್​; ‘ಆಪನ್​ಹೈಮರ್​’ ಚಿತ್ರದಲ್ಲಿ ವ್ಯತ್ಯಾಸ ಉಂಟಾ?

‘ಆಪನ್​ಹೈಮರ್​’ ಸಿನಿಮಾದಲ್ಲಿ ರಾಬರ್ಟ್​ ಡೌನಿ ಜೂನಿಯರ್​, ಎಮಿಲಿ ಬ್ಲಂಟ್​ ಕೂಡ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಮೂಲಗಳ ಪ್ರಕಾರ, ಇವರಿಬ್ಬರು ತಲಾ 4 ಮಿಲಿಯನ್​ ಡಾಲರ್​ (ಅಂದಾಜು 32 ಕೋಟಿ ರೂ.) ಸಂಭಾವನೆ ಪಡೆದಿದ್ದಾರೆ. ಕ್ರಿಸ್ಟೋಫರ್​ ನೋಲನ್​ ಅವರ ಪತ್ನಿ ಎಮ್ಮಾ ಥಾಮಸ್​ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಿಂದ ಅವರಿಗೆ ಸಖತ್​ ಲಾಭ ಆಗಿದೆ. ಭಾರತದಲ್ಲಿ ‘ಆಪನ್​ಹೈಮರ್​’ ಸಿನಿಮಾ ನೂರು ಕೋಟಿ ರೂಪಾಯಿ ಕಲೆಕ್ಷನ್​ ಮಾಡುವತ್ತ ಮುನ್ನುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:42 pm, Wed, 2 August 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ