Oppenheimer: ಮೊಟ್ಟ ಮೊದಲ ಅಣು ಬಾಂಬ್​ ಪರೀಕ್ಷೆಯ ರಿಯಲ್​ ವಿಡಿಯೋ ವೈರಲ್​; ‘ಆಪನ್​ಹೈಮರ್​’ ಚಿತ್ರದಲ್ಲಿ ವ್ಯತ್ಯಾಸ ಉಂಟಾ?

Christopher Nolan: ಅಮೆರಿಕದ ವಿಜ್ಞಾನಿಗಳು ಅಣು ಬಾಂಬ್​ ಕಂಡು ಹಿಡಿದಾಗ ಅದನ್ನು 1945ರಲ್ಲಿ ಮೊದಲ ಬಾರಿಗೆ ಪರೀಕ್ಷೆ ಮಾಡಲಾಗಿತ್ತು. ಜೆ. ರಾಬರ್ಟ್​ ಆಪನ್​ಹೈಮರ್​ ಅವರು ಅದರ ಉಸ್ತುವಾರಿ ವಹಿಸಿದ್ದರು.

Oppenheimer: ಮೊಟ್ಟ ಮೊದಲ ಅಣು ಬಾಂಬ್​ ಪರೀಕ್ಷೆಯ ರಿಯಲ್​ ವಿಡಿಯೋ ವೈರಲ್​; ‘ಆಪನ್​ಹೈಮರ್​’ ಚಿತ್ರದಲ್ಲಿ ವ್ಯತ್ಯಾಸ ಉಂಟಾ?
ಆಪನ್​ಹೈಮರ್​
Follow us
ಮದನ್​ ಕುಮಾರ್​
|

Updated on: Jul 30, 2023 | 11:39 AM

ನಿರ್ದೇಶಕ ಕ್ರಿಸ್ಟೋಫರ್​ ನೋಲನ್​ (Christopher Nolan) ಅವರು ಪ್ರತಿ ಸಿನಿಮಾದಲ್ಲೂ ಅಭಿಮಾನಿಗಳಿಗೆ ಅಚ್ಚರಿ ನೀಡುತ್ತಾರೆ. ಇತ್ತೀಚೆಗೆ ಅವರ ನಿರ್ದೇಶನದಲ್ಲಿ ಮೂಡಿಬಂದ ‘ಆಪನ್​ಹೈಮರ್​’ ಸಿನಿಮಾ (Oppenheimer) ಕೂಡ ಸೂಪರ್​ ಹಿಟ್​ ಆಗಿದೆ. ಅಣು ಬಾಂಬ್​ ಕಂಡುಹಿಡಿದ ಅಮೆರಿಕದ ವಿಜ್ಞಾನಿ ಜೆ. ರಾಬರ್ಟ್​ ಆಪನ್​ಹೈಮರ್​ ಅವರ ಜೀವನದ ಕುರಿತು ಈ ಸಿನಿಮಾ ಸಿದ್ಧವಾಗಿದೆ. ಕ್ರಿಸ್ಟೋಫರ್​ ನೋಲನ್​ ಅವರು ಈ ಸಿನಿಮಾವನ್ನು ಕಟ್ಟಿಕೊಟ್ಟ ರೀತಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಅದರಲ್ಲೂ ಅಣು ಬಾಂಬ್​ (Atom Bomb) ಪರೀಕ್ಷೆಯ ದೃಶ್ಯಗಳಿಗೆ ಹೆಚ್ಚು ಮೆಚ್ಚುಗೆ ಸಿಕ್ಕಿದೆ. ಅದು ತುಂಬ ವೈಭವದಿಂದ ಕೂಡಿದೆ ಎಂಬ ಕಾರಣಕ್ಕಾಗಿ ಅಲ್ಲ. ಬದಲಿಗೆ, ಹೆಚ್ಚು ನಿಖರವಾಗಿ ಆ ದೃಶ್ಯವನ್ನು ಚಿತ್ರಿಸಲಾಗಿದೆ ಎಂಬುದೇ ಪ್ರಶಂಸೆಗೆ ಕಾರಣ ಆಗಿದೆ. ಈ ನಡುವೆ, ಮೊಟ್ಟ ಮೊದಲ ಅಣು ಬಾಂಬ್​ ಪರೀಕ್ಷೆಯ ರಿಯಲ್​ ವಿಡಿಯೋ ವೈರಲ್​ ಆಗಿದೆ.

ಅಮೆರಿಕದ ವಿಜ್ಞಾನಿಗಳು ಅಣು ಬಾಂಬ್​ ಕಂಡು ಹಿಡಿದಾಗ ಅದನ್ನು 1945ರಲ್ಲಿ ಮೊದಲ ಬಾರಿಗೆ ಪರೀಕ್ಷೆ ಮಾಡಲಾಗಿತ್ತು. ಜೆ. ರಾಬರ್ಟ್​ ಆಪನ್​ಹೈಮರ್​ ಅವರು ಅದರ ಉಸ್ತುವಾರಿ ವಹಿಸಿದ್ದರು. ಅಂದು ಏನೆಲ್ಲ ನಡೆಯಿತು ಎಂಬುದನ್ನು ವಿವರಿಸುವ ರಿಯಲ್​ ವಿಡಿಯೋ ಈಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಅದರಲ್ಲಿ ಹೇಗಿದೆಯೋ ಅದೇ ರೀತಿ ಸಿನಿಮಾದಲ್ಲೂ ತೋರಿಸಲಾಗಿದೆ. ಹೆಚ್ಚೇನೂ ವ್ಯತ್ಯಾಸ ಇಲ್ಲದೆ, ಎಷ್ಟು ಸಾಧ್ಯವೋ ಅಷ್ಟು ನಿಖರವಾಗಿ ಆ ದೃಶ್ಯವನ್ನು ಕ್ರಿಸ್ಟೋಫರ್​ ನೋಲನ್​ ಅವರು ಚಿತ್ರಿಸಿದ್ದಾರೆ. ಇದಕ್ಕಾಗಿ ಪ್ರೇಕ್ಷಕರು ಭೇಷ್​ ಎನ್ನುತ್ತಿದ್ದಾರೆ.

View this post on Instagram

A post shared by News in Memes (@peeper)

ಜೆ. ರಾಬರ್ಟ್​ ಆಪನ್​ಹೈಮರ್​ ಅವರ ಪಾತ್ರವನ್ನು ಕಿಲಿಯನ್​ ಮರ್ಫಿ ನಿಭಾಯಿಸಿದ್ದಾರೆ. ಇನ್ನುಳಿದ ಪಾತ್ರಗಳಲ್ಲಿ ಮ್ಯಾಟ್​ ಡೇಮನ್​, ಎಲಿಮಿ ಬ್ಲಂಟ್​, ರಾಬರ್ಡ್​ ಡೌನಿ ಜೂನಿಯರ್​ ಮುಂತಾದವರು ನಟಿಸಿದ್ದಾರೆ. ವಿಶ್ವಾದ್ಯಂತ ರಿಲೀಸ್​ ಆಗಿರುವ ಈ ಸಿನಿಮಾಗೆ ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಕಮಾಯಿ ಆಗಿದೆ. ಭಾರತದಲ್ಲಿ ಈ ಚಿತ್ರ 84 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡಿದೆ. ಆ ಮೂಲಕ ಚಿತ್ರತಂಡ ಗೆಲುವಿನ ನಗು ಬೀರಿದೆ. ಹೊಸ ಸಿನಿಮಾಗಳ ರಿಲೀಸ್​ ನಡುವೆಯೂ ‘ಆಪನ್​ಹೈಮರ್​’ ಸಿನಿಮಾ ಪೈಪೋಟಿ ನೀಡುತ್ತಿದೆ.

ಇದನ್ನೂ ಓದಿ: Hostel Hudugaru Bekagiddare: ‘ಆಪನ್​ಹೈಮರ್​’, ‘ಬಾರ್ಬಿ’ ಚಿತ್ರವನ್ನೂ ಮೀರಿಸಿ ‘ಬುಕ್​ ಮೈ ಶೋ’ ರೇಟಿಂಗ್​ ಪಡೆದ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’

ಜುಲೈ 21ರಂದು ‘ಆಪನ್​ಹೈಮರ್​’ ಸಿನಿಮಾ ಬಿಡುಗಡೆ ಆಯಿತು. ಅದೇ ದಿನ ಹಾಲಿವುಡ್​ನ ಮತ್ತೊಂದು ಸಿನಿಮಾ ‘ಬಾರ್ಬಿ’ ಕೂಡ ತೆರೆಕಂಡಿತು. ಈ ಎರಡು ಸಿನಿಮಾಗಳ ನಡುವೆ ಸಖತ್​ ಸ್ಪರ್ಧೆ ಏರ್ಪಟ್ಟಿತ್ತು. ಭಾರತದಲ್ಲಿ ‘ಬಾರ್ಬಿ’ ಚಿತ್ರಕ್ಕಿಂತಲೂ ‘ಆಪನ್​ಹೈಮರ್​’ ಸಿನಿಮಾ ಹೆಚ್ಚು ಕಲೆಕ್ಷನ್​ ಮಾಡಿದೆ. ಈ ಸಿನಿಮಾದಲ್ಲಿ ಭಗವದ್ಗೀತೆ ಕುರಿತು ಆಕ್ಷೇಪಾರ್ಹ ದೃಶ್ಯ ಇದೆ ಎಂದು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ವಿರೋಧ ಎದುರಾದ ಬಳಿಕ ಕಲೆಕ್ಷನ್​ ಕೊಂಚ ತಗ್ಗಿದೆ.

​ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ