OTT Censorship: ಒಟಿಟಿ ಸೆನ್ಸಾರ್​ಶಿಪ್​ ಬಗ್ಗೆ ಮಹತ್ವದ ಆದೇಶ ನೀಡಿದ ಸುಪ್ರೀಂ ಕೋರ್ಟ್​

| Updated By: ಮದನ್​ ಕುಮಾರ್​

Updated on: Oct 14, 2022 | 4:53 PM

OTT Platform: ಭಾರತದಲ್ಲಿ ಒಟಿಟಿ ಪ್ಲಾಟ್​​ಫಾರ್ಮ್ ಪ್ರಾಬಲ್ಯ ಹೆಚ್ಚಿದೆ. ಹತ್ತಾರು ಒಟಿಟಿ ಸಂಸ್ಥೆಗಳು ಕಾರ್ಯನಿರತವಾಗಿವೆ. ಇವುಗಳಲ್ಲಿ ಪ್ರಸಾರ ಆಗುವ ಕೆಲವು ಕಂಟೆಂಟ್​ಗಳು ತುಂಬ ಬೋಲ್ಡ್​ ಆಗಿರುತ್ತವೆ.

OTT Censorship: ಒಟಿಟಿ ಸೆನ್ಸಾರ್​ಶಿಪ್​ ಬಗ್ಗೆ ಮಹತ್ವದ ಆದೇಶ ನೀಡಿದ ಸುಪ್ರೀಂ ಕೋರ್ಟ್​
ಒಟಿಟಿ
Follow us on

ಮನರಂಜನೆಯ ಜಗತ್ತಿನಲ್ಲಿ ಈಗ ಒಟಿಟಿ ಪ್ಲಾಟ್​ಫಾರ್ಮ್​ನದ್ದೇ (OTT Platform) ಹವಾ. ಎಲ್ಲ ಹೊಸ ಸಿನಿಮಾಗಳೂ ಚಿತ್ರಮಂದಿರದಲ್ಲಿ ಬಿಡುಗಡೆಯಾದ ಕೆಲವೇ ದಿನಗಳ ನಂತರ ಒಟಿಟಿಗೆ ಲಗ್ಗೆ ಇಡುತ್ತವೆ. ಹಲವಾರು ವೆಬ್​ ಸರಣಿಗಳು ಪ್ರತಿ ವಾರ ಬಿಡುಗಡೆ ಆಗುತ್ತವೆ. ರಿಯಾಲಿಟಿ ಶೋಗಳು ಕೂಡ ಒಟಿಟಿಯಲ್ಲಿ ಶೈನ್​ ಆಗುತ್ತಿವೆ. ಹೊಸ ಹೊಸ ಸಿನಿಮಾಗಳನ್ನು ಕೊಂಡುಕೊಳ್ಳುವಲ್ಲಿ ಎಲ್ಲ ಒಟಿಟಿ ಸಂಸ್ಥೆಗಳ ನಡುವೆ ಪೈಪೋಟಿ ಇದೆ. ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ ಪ್ರಸಾರ ಆಗುವ ಕಂಟೆಂಟ್​ಗಳ ಬಗ್ಗೆ ಕೆಲವರಿಗೆ ತರಕಾರು ಇದೆ. ಬೋಲ್ಡ್​ ದೃಶ್ಯಗಳು ಹೆಚ್ಚಾಗಿರುತ್ತವೆ ಎಂದು ಅನೇಕರು ಮೂಗು ಮುರಿದಿದ್ದುಂಟು. ಈ ವಿಚಾರ ಸುಪ್ರೀಂ ಕೋರ್ಟ್​ (Supreme Court) ಮೆಟ್ಟಿಲೇರಿತ್ತು. ಆ ಬಗ್ಗೆ ಮಹತ್ವದ ತೀರ್ಪು ಪ್ರಕಟ ಆಗಿದೆ. ಒಟಿಟಿ ಕಂಟೆಂಟ್​ಗಳಿಗೆ ಸೆನ್ಸಾರ್​ (Censorship) ಸಮಿತಿ ರಚಿಸಲು ಸಾಧ್ಯವಿಲ್ಲ ಎಂದು ಕೋರ್ಟ್​ ಹೇಳಿದೆ.

‘ವೆಬ್​ ಸಿರೀಸ್​ಗಳಿಗೆ ಸೆನ್ಸಾರ್​ ಕಮಿಟಿ ಇರಲು ಹೇಗೆ ಸಾಧ್ಯ? ಅದಕ್ಕಾಗಿ ಬೇರೆಯದೇ ಕಾನೂನು ಇದೆ. ಅದರ ಅಡಿಯಲ್ಲಿ ಒಟಿಟಿ ಬರುತ್ತದೆ ಎಂದಾದರೆ ಮಾತ್ರ ಈಗಿರುವ ಕಾನೂನು ಅನ್ವಯ ಆಗುತ್ತದೆ. ಬೇರೆ ಬೇರೆ ದೇಶಗಳಿಂದಲೂ ಕಂಟೆಂಟ್​ ಪ್ರಸಾರ ಆಗುವುದರಿಂದ ಅನೇಕ ಪ್ರಶ್ನೆಗಳು ಉದ್ಭವ ಆಗುತ್ತವೆ’ ಎಂದು ಕೋರ್ಟ್​ ತಿಳಿಸಿದೆ.

‘ವೀಕ್ಷಕರು ಇಲ್ಲಿನವರೇ ಆಗಿದ್ದರೂ ಕೂಡ ಕಂಟೆಂಟ್​ ಪ್ರಸಾರ ಆಗುತ್ತಿರುವುದು ಬೇರೆ ಬೇರೆ ದೇಶಗಳಿಂದ. ಪ್ರಸಾರ ಆದ ನಂತರ ಏನಾದರೂ ತಪ್ಪಿದ್ದರೆ ಕ್ರಮ ಕೈಗೊಳ್ಳುವುದು ಬೇರೆ. ನಿಮ್ಮ ಅರ್ಜಿ ಹೆಚ್ಚು ವಿವರವಾಗಿ ಇರಬೇಕು’ ಎಂದು ಹೇಳುವ ಮೂಲಕ ಅರ್ಜಿದಾರರ ಮನವಿಯನ್ನು ಕೋರ್ಟ್​ ತಳ್ಳಿಹಾಕಿದೆ.

ಇದನ್ನೂ ಓದಿ
ಬಾಲಿವುಡ್​ನಲ್ಲಿ ಸೋತ ಆಮಿರ್ ಖಾನ್​ ನಟನೆಯ ‘ಲಾಲ್​ ಸಿಂಗ್ ಚಡ್ಡಾ’ಗೆ ಒಟಿಟಿಯಲ್ಲಿ ಭವ್ಯ ಸ್ವಾಗತ  
100 ಕೋಟಿ ರೂಪಾಯಿಗೆ ಸೇಲ್ ಆಯ್ತು ಶಾರುಖ್ ಸಿನಿಮಾದ ಒಟಿಟಿ ಹಕ್ಕು; ಥಿಯೇಟರ್ ಕಥೆ ಏನು?
Bigg Boss OTT: ‘ಬಿಗ್​ ಬಾಸ್​ ಒಟಿಟಿ’ ಲಾಭವೋ ನಷ್ಟವೋ? ಇನ್ನೊಂದು ಸೀಸನ್​ ಬರೋದು ಅನುಮಾನ
Ponniyin Selvan: 125 ಕೋಟಿ ರೂಪಾಯಿಗೆ ‘ಪೊನ್ನಿಯಿನ್​ ಸೆಲ್ವನ್​’ ಒಟಿಟಿ ಹಕ್ಕು ಮಾರಾಟ; ಮಣಿರತ್ನಂ ಚಿತ್ರಕ್ಕೆ ಭಾರಿ ಬಿಸ್ನೆಸ್​

ಇದನ್ನೂ ಓದಿ: Brahmastra: ಸೂಪರ್​ ಹಿಟ್​ ಆದ ‘ಬ್ರಹ್ಮಾಸ್ತ್ರ’ ಚಿತ್ರ ಒಟಿಟಿಯಲ್ಲಿ ಪ್ರಸಾರ ಆಗೋದು ಯಾವಾಗ?

ಭಾರತದಲ್ಲೂ ಒಟಿಟಿ ಸಂಸ್ಥೆಗಳ ಪ್ರಾಬಲ್ಯ ಹೆಚ್ಚಿದೆ. ಅಮೇಜಾನ್​ ಪ್ರೈಂ ವಿಡಿಯೋ, ನೆಟ್​ಫ್ಲಿಕ್ಸ್​, ಸೋನಿ ಲಿವ್​, ಜೀ5, ವೂಟ್​ ಸೆಲೆಕ್ಟ್​, ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​, ಆಲ್ಟ್​ ಬಾಲಾಜಿ, ಆಹಾ ಸೇರಿದಂತೆ ಹತ್ತಾರು ಒಟಿಟಿ ಸಂಸ್ಥೆಗಳು ಕಾರ್ಯನಿರತವಾಗಿವೆ. ಇವುಗಳಲ್ಲಿ ಪ್ರಸಾರ ಆಗುವ ಕೆಲವು ಕಂಟೆಂಟ್​ಗಳು ತುಂಬ ಬೋಲ್ಡ್​ ಆಗಿರುತ್ತವೆ. ಎಲ್ಲಾ ವಯೋಮಾನದವರಿಗೆ ಸೂಕ್ತ ಆಗದಂತಹ ದೃಶ್ಯಗಳು ಕೂಡ ಇರುತ್ತವೆ. ಅವುಗಳಿಗೆ ಸೆನ್ಸಾರ್​ ಮಾಡಬೇಕು ಎಂಬುದು ಕೆಲವರ ಒತ್ತಾಯ.

‘ಮಿರ್ಜಾಪುರ್​’ ವೆಬ್​ ಸರಣಿಯ ಹೊಸ ಸೀಸನ್​ಗೆ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ಅದಕ್ಕೆ ತಡೆ ನೀಡಬೇಕು ಎಂದು ಮಿರ್ಜಾಪುರ್​ ನಗರದ ನಿವಾಸಿಯೊಬ್ಬರು ಕೋರ್ಟ್​ಗೆ ಮನವಿ ಸಲ್ಲಿಸಿದ್ದರು. ಈ ವೆಬ್​ ಸರಣಿಯಲ್ಲಿ ಮಿರ್ಜಾಪುರ್ ನಗರವನ್ನು ಆಕ್ಷೇಪಾರ್ಹವಾಗಿ ತೋರಿಸಲಾಗಿದ್ದು, ಅದರ ಬಿಡುಗಡೆಗೆ ತಡೆ ನೀಡಬೇಕು ಎಂಬ ಮನವಿಯನ್ನು ಕೋರ್ಟ್​ ತಳ್ಳಿಹಾಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.