ಈ ವಾರ ಒಟಿಟಿಗೆ ಬರುತ್ತಿವೆ ಭರ್ಜರಿ ಸಿನಿಮಾಗಳು: ಪಟ್ಟಿ ಇಲ್ಲಿದೆ
OTT release this week: ಈ ವಾರ ಚಿತ್ರಮಂದಿರಗಳಲ್ಲಿ ಕೆಲವು ಒಳ್ಳೆಯ ಸಿನಿಮಾಗಳು ಬಿಡುಗಡೆ ಆಗಿವೆ. ‘ಧುರಂದರ್’, ‘ಅಖಂಡ 2’, ದರ್ಶನ್ ನಟನೆಯ ‘ಡೆವಿಲ್’ ಇನ್ನೂ ಕೆಲ ಸಿನಿಮಾಗಳು ಒಳ್ಳೆಯ ಪ್ರದರ್ಶನ ಕಾಣುತ್ತಿವೆ. ಹೀಗಿರುವಾಗ ಈ ವಾರ ಒಟಿಟಿಗೆ ಸಹ ಕೆಲ ಒಳ್ಳೆಯ ಸಿನಿಮಾಗಳು ಬಂದಿವೆ. ಕನ್ನಡದ ಹಿಟ್ ಸಿನಿಮಾ ಸೇರಿದಂತೆ ಪರಭಾಷೆಯ ಉತ್ತಮ ಸಿಸಿನಿಮಾಗಳು ಒಟಿಟಿಗೆ ಬಂದಿದ್ದು, ಪಟ್ಟಿ ಇಲ್ಲಿದೆ ನೋಡಿ...
Updated on:Dec 13, 2025 | 6:51 PM

ಡಾರ್ಲಿಂಗ್ ಕೃಷ್ಣ ನಟಿಸಿ ಶಶಾಂಕ್ ನಿರ್ದೇಶನ ಮಾಡಿರುವ ‘ಬ್ರ್ಯಾಟ್’ ಸಿನಿಮಾ ಬಿಡುಗಡೆ ಆಗಿ ಉತ್ತಮ ಪ್ರದರ್ಶನ ತೋರಿತ್ತು. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದೆ. ಈ ಹಿಂದೆಯೇ ಸಿನಿಮಾದ ಕನ್ನಡ ವರ್ಷನ್ ಒಟಿಟಿಗೆ ಬಂದಿತ್ತು. ಈಗ ತೆಲುಗು, ತಮಿಳು ವರ್ಷನ್ ಸಹ ಸೇರಿಸಲಾಗಿದೆ.

ದುಲ್ಕರ್ ಸಲ್ಮಾನ್, ಭಾಗ್ಯಶ್ರೀ ಬೋರ್ಸೆ, ರಾಣಾ ದಗ್ಗುಬಾಟಿ, ಸಮುದ್ರಕಿಣಿ ನಟಿಸಿರುವ ‘ಕಾಂತಾ’ ಸಿನಿಮಾ ಕೆಲ ವಾರಗಳ ಹಿಂದಷ್ಟೆ ಚಿತ್ರಮಂದಿರಕ್ಕೆ ಬಿಡುಗಡೆ ಆಗಿದ್ದು ಸಿನಿಮಾ ಸಖತ್ ಹಿಟ್ ಆಗಿತ್ತು. ಸಿನಿಮಾನಲ್ಲಿ ದುಲ್ಕರ್ ನಟನೆಗೆ ಭಾರಿ ಮೆಚ್ಚುಗೆ ಸಹ ವ್ಯಕ್ತವಾಗಿದೆ. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದೆ. ನೆಟ್ಫ್ಲಿಕ್ಸ್ನಲ್ಲಿ ಸಿನಿಮಾ ನೋಡಬಹುದಾಗಿದೆ.

ಕುನಾಲ್ ಕೇಮು ಮುಖ್ಯ ಪಾತ್ರದಲ್ಲಿ ನಟಿಸಿರುವ ಹಾಸ್ಯ ಪ್ರಧಾನ ಕೌಟುಂಬಿಕ ಸಿನಿಮಾ ‘ಸಿಂಗಲ್ ಪಾಪ’ ಈ ವಾರ ಒಟಿಟಿಗೆ ಬಂದಿದೆ. ಹೆಸರೇ ಸೂಚಿಸುತ್ತಿರುವಂತೆ ತಂದೆಯೊಬ್ಬ, ಒಬ್ಬನೇ ಮಗುವನ್ನು ಆರೈಕೆ ಮಾಡುವ ಕತೆ ಒಳಗೊಂಡಿರುವ ಈ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿದೆ.

ಕೆಲ ತಿಂಗಳ ಹಿಂದೆ ಬಿಡುಗಡೆ ಆಗಿ ಪ್ರೇಕ್ಷಕರ ಹಾಗೂ ವಿಮರ್ಶಕರ ಮನ ಗೆದ್ದಿರುವ ಹೊಸ ಸೂಪರ್ ಹೀರೋ ಸಿನಿಮಾ ಇದೀಗ ಒಟಿಟಿಗೆ ಬಂದಿದೆ. ಹೊಸ ‘ಸೂಪರ್ ಹೀರೋ’ ಸಿನಿಮಾ ಜಿಯೋ ಹಾಟ್ಸ್ಟಾರ್ನಲ್ಲಿ ಉಚಿತವಾಗಿ ವೀಕ್ಷಣೆಗೆ ಲಭ್ಯವಿದೆ.

ಅರ್ಜುನ್ ಸರ್ಜಾ ಮುಖ್ಯ ಪಾತ್ರದಲ್ಲಿ ನಟಿಸಿರುವ ಆಕ್ಷನ್ ಥ್ರಿಲ್ಲರ್ ತಮಿಳು ಸಿನಿಮಾ ‘ತೀಯವರ್ ಕೊಲೈಗಲ್ ನಡುಂಗ’ ಸಿನಿಮಾ ಇದೇ ವಾರ ಒಟಿಟಿಗೆ ಬಂದಿದೆ. ಈ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವನ್ನು ಸನ್ ನೆಕ್ಸ್ಟ್ನಲ್ಲಿ ವೀಕ್ಷಿಸಬಹುದಾಗಿದೆ.
Published On - 6:51 pm, Sat, 13 December 25




