AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಾರ ಒಟಿಟಿಗೆ ಬಂದಿವೆ ಸೂಪರ್ ಹಿಟ್ ಸಿನಿಮಾಗಳು: ಪಟ್ಟಿ ಇಲ್ಲಿದೆ

OTT Release this week: ಪ್ರತಿ ವಾರದಂತೆ ಈ ವಾರವೂ ಒಟಿಟಿಗೆ ಕೆಲ ಸೂಪರ್ ಹಿಟ್ ಸಿನಿಮಾಗಳು ಬಂದಿವೆ. ಈ ವಾರವಂತೂ ಎಲ್ಲ ಕೆಲ ಸೂಪರ್ ಬ್ಲಾಕ್ ಬಸ್ಟರ್ ಸಿನಿಮಾಗಳು ಒಟಿಟಿಗೆ ಬಂದಿವೆ. ಸಿನಿಮಾಗಳು ಮಾತ್ರವೇ ಅಲ್ಲದೆ, ವೆಬ್ ಸರಣಿಗಳು, ರಿಯಾಲಿಟಿ ಶೋಗಳು ಸಹ ಈ ವಾರ ಒಟಿಟಿಗೆ ಬಂದಿವೆ. ಇಲ್ಲಿದೆ ನೋಡಿ ಅವುಗಳ ಪಟ್ಟಿ...

ಮಂಜುನಾಥ ಸಿ.
|

Updated on: Jun 27, 2026 | 4:00 PM

Share
ಇತ್ತೀಚೆಗಷ್ಟೆ ಬಿಡುಗಡೆ ಆದ ತಮಿಳು ಸಿನಿಮಾ ‘ಬ್ಲಾಸ್ಟ್’ ಚಿತ್ರಮಂದಿರದಲ್ಲಿ ಸಖತ್ ಸದ್ದು ಮಾಡಿತು. ಪ್ರಚಾರವೇ ಇಲ್ಲದೆ ಬಿಡುಗಡೆ ಆಗಿದ್ದರೂ ಸಹ ತನ್ನ ಕಂಟೆಂಟ್​​ನಿಂದ ಸಿನಿಮಾ ಸೂಪರ್ ಹಿಟ್ ಆಗಿದೆ. ಅರ್ಜುನ್ ಸರ್ಜಾ ನಟನೆಯ ಈ ಸಿನಿಮಾ ಇದೀಗ ನೆಟ್​​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಿದ್ದು, ತಪ್ಪದೇ ನೋಡಬೇಕಾದ ಸಿನಿಮಾ ಇದಾಗಿದೆ.

1 / 7
ಪ್ರಖ್ಯಾತ ‘ಗೇಮ್ ಆಫ್ ಥ್ರೋನ್ಸ್’ನ ಪ್ರೀಕ್ವೆಲ್ ಆಗಿರುವ ‘ಹೌಸ್ ಆಫ್ ದಿ ಡ್ರ್ಯಾಗನ್’ ವೆಬ್ ಸರಣಿಯ ಮೂರನೇ ಸೀಸನ್ ಕಳೆದ ವಾರವೇ ಆರಂಭವಾಗಿದೆ. ಇದೀಗ ಈ ವೆಬ್ ಸರಣಿಯ ಎರಡನೇ ಸೀಸನ್ ಈ ಭಾನುವಾರ ಬಿಡುಗಡೆ ಆಗಲಿದೆ. ವೆಬ್ ಸರಣಿಯನ್ನು ಎಚ್​​ಬಿಓ, ಜಿಯೋ ಹಾಟ್​​ಸ್ಟಾರ್ ಗಳಲ್ಲಿ ವೀಕ್ಷಿಸಬಹುದಾಗಿದೆ.

2 / 7
ಜೇಮ್ಸ್ ಕ್ಯಾಮರನ್ ನಿರ್ದೇಶನದ ವಿಶ್ವ ಪ್ರಸಿದ್ಧ ‘ಅವತಾರ್: ಫೈರ್ ಆಂಡ್ ಆಶ್’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ತಿಂಗಳುಗಳ ಬಳಿಕ ಇದೀಗ ಒಟಿಟಿಗೆ ಬಂದಿದೆ. ಅದೂ ಉಚಿತವಾಗಿ. ಸಿನಿಮಾವನ್ನು ಜಿಯೋ ಹಾಟ್​ಸ್ಟಾರ್ ಮತ್ತು ಅಮೆಜಾನ್​​ನಲ್ಲಿ ಹೆಚ್ಚುವರಿ ಹಣ ನೀಡದೆ ನೋಡಬಹುದಾಗಿದೆ.

3 / 7
‘ಬಾಹುಬಲಿ’ ಮತ್ತು ‘ಬಾಹುಬಲಿ 2’ ಸಿನಿಮಾಗಳು ಭಾರತದ ಸಿನಿಮಾ ಇತಿಹಾಸದಲ್ಲೇ ಪ್ರಮುಖವಾದ ಸಿನಿಮಾಗಳು. ಈ ಸಿನಿಮಾದ ಚಿತ್ರೀಕರಣ ಇನ್ನಿತರೆಗಳ ಬಗ್ಗೆ ಸಿನಿಮಾದ ಕಲಾವಿದರು, ತಂತ್ರಜ್ಞರು ಮಾತನಾಡಿರುವ ಅಪರೂಪದ ಡಾಕ್ಯುಮೆಂಟರಿ ‘ಬಾಹುಬಲಿ: ದಿ ಟಾರ್ಚ್ ಬೇರರ್’ ಇದು ಈ ವಾರ ನೆಟ್​​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಿದೆ.

4 / 7
ಕಬಡ್ಡಿ ಆಟಗಾರನೊಬ್ಬ ಅನಿವಾರ್ಯ ಕಾರಣಗಳಿಂದ ಭೂಗತ ಲೋಕಕ್ಕೆ ಇಳಿಯುವ ಕತೆಯನ್ನು ಒಳಗೊಂಡಿರುವ ತಮಿಳು ಸಿನಿಮಾ ‘ಲಿಂಗಂ’. ಚಿತ್ರಮಂದಿರಗಳಲ್ಲಿ ಗಮನ ಸೆಳೆದಿದ್ದ ಈ ಸಿನಿಮಾ ಇದೀಗ ಒಟಿಟಿಗೆ ಬಂದಿದೆ. ಸಿನಿಮಾವನ್ನು ಜಿಯೋ ಹಾಟ್​​ಸ್ಟಾರ್​​ನಲ್ಲಿ ವೀಕ್ಷಿಸಬಹುದಾಗಿದೆ.

5 / 7
ಈ ಹಿಂದೆ ಬೇರೆ ಒಟಿಟಿಯಲ್ಲಿ ಪ್ರಸಾರ ಆಗಿದ್ದ ‘ಲಾಕಪ್’ ಒಟಿಟಿ ರಿಯಾಲಿಟಿ ಶೋ ಈ ಬಾರಿ ನೆಟ್​​ಫ್ಲಿಕ್ಸ್​​ಗೆ ಬಂದಿದೆ. ಕಳೆದ ಸೀಸನ್ ವಿನ್ನರ್ ಮುನಾವರ್ ಫಾರುಖಿ ನಿರೂಪಕರಾದರೆ, ರಿತೇಶ್ ದೇಶ್​ಮುಖ್ ಮತ್ತು ಫರಾ ಖಾನ್ ಮುಖ್ಯ ನಿರೂಪಕರಾಗಿದ್ದಾರೆ. ಇದೇ ವಾರದಿಂದ ಈ ಶೋ ನೆಟ್​ಫ್ಲಿಕ್ಸ್​​ನಲ್ಲಿ ಪ್ರಾರಂಭವಾಗಿದೆ.

6 / 7
ಬಾಲಿವುಡ್ ನಟ ರಿತೇಶ್ ದೇಶ್​​ಮುಖ್ ನಟಿಸಿ, ನಿರ್ದೇಶನ ಮತ್ತು ನಿರ್ಮಾಣವೂ ಮಾಡಿರುವ ಮರಾಠಿ ಸಿನಿಮಾ ‘ರಾಜಾ ಶಿವಾಜಿ’ ಮರಾಠಿ ಚಿತ್ರರಂಗದಲ್ಲಿ ದಾಖಲೆಗಳನ್ನು ಬರೆದಿದೆ. ಈ ಸಿನಿಮಾ ಇದೀಗ ಒಟಿಟಿಗೆ ಬಂದಿದೆ. ಸಿನಿಮಾವನ್ನು ಮರಾಠಿಯಲ್ಲಿ ನೆಟ್​​ಫ್ಲಿಕ್ಸ್​​ನಲ್ಲಿ ವೀಕ್ಷಿಸಬಹುದಾಗಿದೆ.

7 / 7
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us
ಜಿಬಿಎ ವ್ಯಾಪ್ತಿಯಲ್ಲಿ ಐದು ನಗರ ಪೊಲೀಸ್ ಕಮಿಷನರೇಟ್‌ಗಳಿಗೆ ಸಂಪುಟ ಅನುಮೋದನೆ

ದಸರಾ, ದೀಪಾವಳಿ ಹೊತ್ತಲ್ಲೇ ಬೆಲೆ ಏರಿಕೆ ಶಾಕ್: ಹಾಲಿನ ದರ 8 ರೂ. ಹೆಚ್ಚಳ

ಕೆಪಿಎಸ್​ಸಿ ಅಕ್ರಮ: ಮಾಜಿ ಅಧ್ಯಕ್ಷ ಶಿವಶಂಕರಪ್ಪ,ಸದಸ್ಯೆ ಗೀತಾ ಇಡಿ ವಶಕ್ಕೆ

ಬಿಗ್​​ಬಾಸ್ ಕನ್ನಡ: ‘ಅಯ್ಯೋ ಉರಿ’ ಕಣ್ಣೀರು ಹಾಕಿದ ಕಿರಣ್ ಶಾಸ್ತ್ರಿ

ನಮ್ಮ್ ಸಿಎಂ ಫೋನ್‌ಗೆ ಸಿಗಲ್ಲ ಎಂದ ಲಕ್ಷ್ಮಿ ಹೆಬ್ಬಾಳ್ಕರ್

ದಾವಣಗೆರೆ: ಭತ್ತದ ವ್ಯಾಪಾರಿಯಿಂದ 4 ಕೋಟಿ ವಂಚನೆ ಆರೋಪ

ಪ್ರತಿಭಟನೆ ವೇಳೆ ಬ್ಯಾರಿಕೇಡ್ ಹತ್ತಿ ಧ್ವಜ ಬೀಸಿದ ರಾಹುಲ್ ಗಾಂಧಿ!

ಕೈದಿ ಬಿಡುಗಡೆಗೆ ಪತ್ನಿ ಮೇಲೆ ಆಸೆ: ಅಪರಾಧಿ ಪತ್ನಿಗೆ ಡಿಐಜಿ ವಿಡಿಯೋ ಕಾಲ್!

ವೀರಶೈವ ಲಿಂಗಾಯತ ಸ್ವಾಮೀಜಿಗಳಿಗೆ ಅಗೌರವ ಆರೋಪಕ್ಕೆ ಸ್ಪಷ್ಟನೆ ನೀಡಿದ ಡಿಕೆಶಿ

ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ರಸ್ತೆ ಅಸ್ತವ್ಯಸ್ತ