ಈ ವಾರ ಒಟಿಟಿಗೆ ಬಂದಿವೆ ಬ್ಲಾಕ್ ಬಸ್ಟರ್ ಸಿನಿಮಾಗಳು: ಇಲ್ಲಿದೆ ಪಟ್ಟಿ

Updated on: May 16, 2026 | 10:48 AM

OTT Release this week: ಐಪಿಎಲ್ ಸೀಸನ್ ಇರುವ ಸಿನಿಮಾಗಳು ತಮ್ಮ ಬಿಡುಗಡೆ ದಿನಾಂಕಗಳನ್ನು ಮುಂದೂಡಿಕೊಂಡಿವೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಚಿತ್ರಮಂದಿರಕ್ಕೆ ದೊಡ್ಡ ಸಿನಿಮಾಗಳು ಬಂದಿರುವುದು ಕಡಿಮೆ. ಆದರೆ ಒಟಿಟಿಗೆ ಐಪಿಎಲ್ ಬಗ್ಗೆ ಭಯವಿಲ್ಲ. ಒಂದಕ್ಕಿಂತ ಬ್ಲಾಕ್ ಬಸ್ಟರ್ ಸಿನಿಮಾಗಳು ಒಟಿಟಿಗೆ ಬರುತ್ತಲೇ ಇವೆ. ಈ ವಾರ ಬಿಡುಗಡೆ ಆದ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ...

1 / 6
ಸೂಪರ್ ಹಿಟ್ ವೆಬ್ ಸರಣಿ ‘ಮನಿ ಹೈಸ್ಟ್’ನ ಜನಪ್ರಿಯ ಪಾತ್ರ ‘ಬರ್ಲಿನ್’ ಅನ್ನು ಪ್ರಧಾನವಾಗಿರಿಸಿ ಈಗಾಗಲೇ ಒಂದು ವೆಬ್ ಸರಣಿ ಬಿಡುಗಡೆ ಆಗಿದ್ದು, ಇದೀಗ ಅದೇ ವೆಬ್ ಸರಣಿಯ ಎರಡನೇ ಸೀಸನ್ ನೆಟ್​​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಿದೆ.

ಸೂಪರ್ ಹಿಟ್ ವೆಬ್ ಸರಣಿ ‘ಮನಿ ಹೈಸ್ಟ್’ನ ಜನಪ್ರಿಯ ಪಾತ್ರ ‘ಬರ್ಲಿನ್’ ಅನ್ನು ಪ್ರಧಾನವಾಗಿರಿಸಿ ಈಗಾಗಲೇ ಒಂದು ವೆಬ್ ಸರಣಿ ಬಿಡುಗಡೆ ಆಗಿದ್ದು, ಇದೀಗ ಅದೇ ವೆಬ್ ಸರಣಿಯ ಎರಡನೇ ಸೀಸನ್ ನೆಟ್​​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಿದೆ.

2 / 6

ರಣ್ವೀರ್ ಸಿಂಗ್ ನಟನೆಯ ಬ್ಲಾಕ್ ಬಸ್ಟರ್ ಸಿನಿಮಾ ‘ಧುರಂಧರ್ 2’ ಕೊನೆಗೂ ಒಟಿಟಿಗೆ ಬಂದಿದೆ ಆದರೆ ಭಾರತದಲ್ಲಿ ಅಲ್ಲ. ‘ಧುರಂಧರ್ 2’ ಈ ವಾರ ನೆಟ್​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಿದ್ದು, ಭಾರತದ ಹೊರತಾಗಿ ಬೇರೆ ದೇಶದವರು ಮಾತ್ರ ಸಿನಿಮಾ ನೋಡಬಹುದಾಗಿದೆ.

3 / 6

‘ಎಕ್ಸಾಮ್’ ಒಂದು ಸಸ್ಪೆನ್ಸ್ ಥ್ರಿಲ್ಲರ್ ತಮಿಳು ವೆಬ್ ಸರಣಿ ಆಗಿದ್ದು, ಪರೀಕ್ಷಾ ಪ್ರಶ್ನೆ ಪತ್ರಿಕೆ ಲೀಕ್ ಕುರಿತ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಈಗ ನೀಟ್​​ನ ಪ್ರಶ್ನೆ ಪತ್ರಿಕೆ ಲೀಕ್ ಆಗಿರುವ ಸಮಯದಲ್ಲಿ ಇದೊಂದು ಒಳ್ಳೆಯ ವೀಕ್ಷಣೆ ಆಗಬಹುದು. ಈ ವೆಬ್ ಸರಣಿ ಅಮೆಜಾನ್ ಪ್ರೈಂ ವಿಡಿಯೋನಲ್ಲಿ ಲಭ್ಯವಿದೆ.

4 / 6

ರಣ್​​ದೀಪ್ ಹೂಡ ನಟನೆಯ ‘ಇನ್​​ಸ್ಪೆಕ್ಟರ್ ಅವಿನಾಶ್’ ಮೊದಲ ಸೀಸನ್ ಜನಪ್ರಿಯತೆ ಗಳಿಸಿತ್ತು. ಇದೀಗ ಮತ್ತಷ್ಟು ಆಕ್ಷನ್ ಮತ್ತು ಥ್ರಿಲ್ಲರ್ ಅಂಶಗಳ ಜೊತೆಗೆ ಈ ಸೀಸನ್ ಮತ್ತೆ ಮರಳಿ ಬಂದಿದೆ. ಇದೀಗ ಈ ಸರಣಿಯನ್ನು ಜಿಯೋ ಹಾಟ್​​ಸ್ಟಾರ್​​ನಲ್ಲಿ ವೀಕ್ಷಿಸಬಹುದಾಗಿದೆ.

5 / 6

ಕೆಲ ವಾರಗಳ ಹಿಂದೆ ಬಿಡುಗಡೆ ಆಗಿದ್ದ ಹಾಲಿವುಡ್ ಸಿನಿಮಾ ‘ಪ್ರಾಜೆಕ್ಟ್ ಹೇಮ್ ಮೇರಿ’ ಬ್ಲಾಕ್ ಬಸ್ಟರ್ ಎನಿಸಿಕೊಂಡಿತ್ತು. ಸೂಪರ್ ಸ್ಟಾರ್ ರ್ಯಾನ್ ಗಾಸ್ಲಿಂಗ್ ನಟನೆಯ ಈ ಸಿನಿಮಾವನ್ನು ಆಪಲ್ ಟಿವಿ, ಪ್ರೈಂ ವಿಡಿಯೋನಲ್ಲಿ ಇದೀಗ ವೀಕ್ಷಿಸಬಹುದಾಗಿದೆ.

6 / 6

ಸೈಫ್ ಅಲಿ ಖಾನ್ ನಟಿಸಿರುವ ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ ‘ಕರ್ತವ್ಯ’ ಇದೀಗ ನೇರವಾಗಿ ನೆಟ್​​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಿದೆ. ಪೊಲೀಸ್ ಒಬ್ಬ ತನ್ನ ಕುಟುಂಬ ಮತ್ತು ಕರ್ತವ್ಯದ ನಡುವೆ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾನೆ ಎಂಬುದು ಸಿನಿಮಾದ ಕತೆ. ಸಿನಿಮಾ ನಿರ್ಮಾಣ ಮಾಡಿರುವುದು ಶಾರುಖ್ ಖಾನ್ ಮತ್ತು ಅವರ ಪತ್ನಿ ಗೌರಿ ಖಾನ್.

Loading...
Unable to load recommendations.
Follow Us