ಈ ವಾರ ಒಟಿಟಿಗೆ ಬಂದಿವೆ ಸೂಪರ್ ಹಿಟ್ ಸಿನಿಮಾಗಳು: ಪಟ್ಟಿ ಇಲ್ಲಿದೆ

Updated on: May 09, 2026 | 3:22 PM

OTT Release this week: ಪ್ರತಿ ವಾರದಂತೆ ಈ ವಾರವೂ ಸಹ ಹಲವು ಸಿನಿಮಾ ಮತ್ತು ವೆಬ್ ಸರಣಿಗಳು ಒಟಿಟಿಗೆ ಬಂದಿವೆ. ಈ ವಾರ, ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆದ ಕೆಲವು ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆ ಆಗಿವೆ. ಚಿತ್ರಮಂದಿರದಲ್ಲಿ ಸಿನಿಮಾಗಳನ್ನು ಮಿಸ್ ಮಾಡಿಕೊಂಡವರು ಮನೆಯಲ್ಲೇ ಕೂತು ಸಿನಿಮಾ ನೋಡಬಹುದು. ಪಟ್ಟಿ ಇಲ್ಲಿದೆ ನೋಡಿ...

1 / 6
ಪ್ರಿಯಾಂಕಾ ಚೋಪ್ರಾ ಮುಖ್ಯ ಪಾತ್ರದಲ್ಲಿ ನಟಿಸಿರುವ ಹಾಲಿವುಡ್ ವೆಬ್ ಸರಣಿ ‘ಸಿಟಾಡೆಲ್ ಸೀಸನ್ 2’ ಈ ವಾರ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ. ‘ಸಿಟಾಡೆಲ್’ ಮೊದಲನೇ ಸರಣಿ ಕಳೆದ ವರ್ಷ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿತ್ತು.

2 / 6
‘ಡಕಾಯಿತ್’ ಸಿನಿಮಾ ಬಿಡುಗಡೆಗೆ ಮುಂಚೆ ಸಾಕಷ್ಟು ಸದ್ದು ಮಾಡಿದ್ದ ಸಿನಿಮಾ. ಅಡಿವಿ ಶೇಷ್ ಮತ್ತು ಮೃಣಾಲ್ ಠಾಕೂರ್ ನಾಯಕ-ನಾಯಕಿಯಾಗಿ, ಅನುರಾಗ್ ಕಶ್ಯಪ್ ವಿಲನ್ ಆಗಿ ನಟಿಸಿದ್ದ ಈ ಸಿನಿಮಾ ಇದೀಗ ಅಮೆಜಾನ್ ಪ್ರೈಂ ವಿಡಿಯೋನಲ್ಲಿ ಲಭ್ಯವಿದೆ.

3 / 6
ರ್ಯಾಪರ್ ಜಗತ್ತು, ಡ್ರಗ್ಸ್ ಮತ್ತು ರಾಜಕೀಯದ ಸುತ್ತ ನಡೆಯುವ ಕತೆಯನ್ನು ಒಳಗೊಂಡಿರುವ ‘ಲುಕ್ಕೆ’ ವೆಬ್ ಸರಣಿ ಈ ವಾರದಿಂದ ಅಮೆಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಕೆಲ ನಿಜ ರ್ಯಾಪರ್​​ಗಳು ನಟಿಸಿರುವ ಈ ವೆಬ್ ಸರಣಿಯಲ್ಲಿ ರಾಶಿ ಖನ್ನಾ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿದ್ದಾರೆ.

4 / 6
ಇದು ಸಹ ಮತ್ತೊಂದು ಸೂಪರ್ ಹಿಟ್ ಮಲಯಾಳಂ ಸಿನಿಮಾದ ಸೀಕ್ವೆಲ್ ಆಗಿದೆ. ‘ಭರತನಾಟ್ಯಂ 2: ಮೋಹಿಯಾಟ್ಟಂ’ ಸಿನಿಮಾ ಡಾರ್ಕ್ ಕಾಮಿಡಿ ಥ್ರಿಲ್ಲರ್ ಕತೆಯನ್ನು ಒಳಗೊಂಡಿದೆ. ಈ ಸಿನಿಮಾ ಇದೀಗ ನೆಟ್​​ಫ್ಲಿಕ್ಸ್​ನಲ್ಲಿ ವೀಕ್ಷಣೆಗೆ ಲಭ್ಯವಿದೆ.

5 / 6
ಗಿಲ್ಲಿ ನಟ, ಗೌರವ್ ಶೆಟ್ಟಿ, ಸಾಧು ಕೋಕಿಲ ಇನ್ನೂ ಕೆಲವು ಹಾಸ್ಯ ಕಲಾವಿದರು ಒಟ್ಟಿಗೆ ನಟಿಸಿರುವ ಹಾಸ್ಯಮಯ ಕೌಟುಂಬಿಕ ಸಿನಿಮಾ ‘ಸೂಪರ್​ ಹಿಟ್’ ಈ ವಾರ ಒಟಿಟಿಗೆ ಬಂದಿದೆ. ಸಿನಿಮಾವನ್ನು ಸನ್ ನೆಕ್ಸ್ಟ್​​ನಲ್ಲಿ ವೀಕ್ಷಿಸಬಹುದು.

6 / 6
ಮಲಯಾಳಂನ ‘ವಾಳ 2’ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆಗಿರುವ ಸಿನಿಮಾ. ಈ ಸಿನಿಮಾ ಬಗ್ಗೆ ಸಾಕಷ್ಟು ಸೆಲೆಬ್ರಿಟಿಗಳು ಸಹ ಒಳ್ಳೆಯ ವಿಮರ್ಶೆಗಳನ್ನು ನೀಡಿದ್ದಾರೆ. ಇದೀಗ ಈ ಸಿನಿಮಾ ಜಿಯೋ ಹಾಟ್​​ಸ್ಟಾರ್​​ನಲ್ಲಿ ಬಿಡುಗಡೆ ಆಗಿದೆ.

Follow Us