ಒಟಿಟಿಗೆ ಬಂದೇ ಬಿಡ್ತು ಪವನ್ ಕಲ್ಯಾಣ್-ಶ್ರೀಲೀಲಾ ಸಿನಿಮಾ

Ustaad Bhagat Singh: ಪವನ್ ಅಭಿಮಾನಿಗಳು ಪ್ರತಿಬಾರಿಯಂತೆ ಈ ಬಾರಿಯೂ ಸಿನಿಮಾವನ್ನು ಸಂಪೂರ್ಣವಾಗಿ ಸೋಲಲು ಬಿಡಲಿಲ್ಲ. ದೊಡ್ಡ ಮಟ್ಟದ ಗಳಿಕೆ ಅಲ್ಲದಿದ್ದರೂ ಲಾಭದಲ್ಲಿಯೇ ಇದೆ ಸಿನಿಮಾ. ಆದರೆ ಚಿತ್ರಮಂದಿರದಲ್ಲಿ ‘ಧುರಂಧರ್ 2’ ಅಲೆಯಿಂದ ಸಮಸ್ಯೆ ಎದುರಿಸಿದ ಈ ಸಿನಿಮಾ ಇದೀಗ ಒಟಿಟಿಗೆ ಬಂದಿದೆ.

ಒಟಿಟಿಗೆ ಬಂದೇ ಬಿಡ್ತು ಪವನ್ ಕಲ್ಯಾಣ್-ಶ್ರೀಲೀಲಾ ಸಿನಿಮಾ
Sreeleela Pawan Kalyan

Updated on: Apr 16, 2026 | 11:56 AM

ಪವನ್ ಕಲ್ಯಾಣ್ (Pawan Kalyan) ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಿತ್ತು. ‘ಧುರಂಧರ್ 2’ ಸಿನಿಮಾ ಹಾಗೂ ‘ಉಸ್ತಾದ್ ಭಗತ್ ಸಿಂಗ್’ ಎರಡೂ ಒಟ್ಟಿಗೆ ಬಿಡುಗಡೆ ಆಗಿತ್ತು. ಇದೇ ಕಾರಣಕ್ಕೆ ಸಿನಿಮಾಕ್ಕೆ ಬಾಕ್ಸ್ ಆಫೀಸ್​​ನಲ್ಲಿ ತುಸು ಹಿನ್ನಡೆ ಆಯ್ತು. ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಗಳಿಕೆ ಮಾಡಲಿಲ್ಲ. ಆದರೆ ಪವನ್ ಅಭಿಮಾನಿಗಳು ಪ್ರತಿಬಾರಿಯಂತೆ ಈ ಬಾರಿಯೂ ಸಿನಿಮಾವನ್ನು ಸಂಪೂರ್ಣವಾಗಿ ಸೋಲಲು ಬಿಡಲಿಲ್ಲ. ದೊಡ್ಡ ಮಟ್ಟದ ಗಳಿಕೆ ಅಲ್ಲದಿದ್ದರೂ ಲಾಭದಲ್ಲಿಯೇ ಇದೆ ಸಿನಿಮಾ. ಆದರೆ ಚಿತ್ರಮಂದಿರದಲ್ಲಿ ‘ಧುರಂಧರ್ 2’ ಅಲೆಯಿಂದ ಸಮಸ್ಯೆ ಎದುರಿಸಿದ ಈ ಸಿನಿಮಾ ಇದೀಗ ಒಟಿಟಿಗೆ ಬಂದಿದೆ.

‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಇದೀಗ ನೆಟ್​​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಿದೆ. ಶ್ರೀಲೀಲಾ ಮತ್ತು ರಾಶಿ ಖನ್ನಾ ಅವರುಗಳು ನಾಯಕಿಯರಾಗಿ ನಟಿಸಿರುವ ಸಿನಿಮಾನಲ್ಲಿ ಆರ್ ಪಾರ್ತಿಬನ್, ಕೆಎಸ್ ರವಿಕುಮಾರ್, ನವಾಬ್ ಶಾ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆದಾಗ, ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ಅವರ ಕುಟುಂಬದವರು ಚಿತ್ರಮಂದಿರಕ್ಕೆ ತೆರಳಿ ಸಿನಿಮಾ ವೀಕ್ಷಿಸಿದ್ದರು. ಇದೀಗ ಒಟಿಟಿಗೆ ಸಿನಿಮಾ ಬಂದಿದ್ದು, ಒಟಿಟಿಯಲ್ಲಿ ಸಿನಿಮಾ ಹಿಟ್ ಆಗುವ ನಿರೀಕ್ಷೆ ಚಿತ್ರತಂಡದ್ದು.

‘ಉಸ್ತಾದ್ ಭಗತ್ ಸಿಂಗ್’ ಸಿನಿಮಾನಲ್ಲಿ ಪವನ್ ಅವರ ಕೆಲವು ವಿಂಟೇಜ್ ಹಾಡುಗಳನ್ನು ನಿರ್ದೇಶಕ ಹರೀಶ್ ಶಂಕರ್ ಬಳಸಿಕೊಂಡಿದ್ದರು. ಅದು ಪವನ್ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿತ್ತು. ಅಲ್ಲದೆ, ಪವನ ಅವರ ಹಳೆಯ ಸಿನಿಮಾದ ರೆಫರೆನ್ಸ್​​ಗಳನ್ನು ಸಾಕಷ್ಟು ಈ ಸಿನಿಮಾನಲ್ಲಿ ಬಳಸಲಾಗಿದೆ. ಒಟ್ಟಾರೆಯಾಗಿ ಪವನ್ ಅಭಿಮಾನಿಗಳಿಗಾಗಿಯೆಂದೇ ಸಿನಿಮಾವನ್ನು ಪ್ಯಾಕೇಜ್ ಮಾಡಿ ಕೊಟ್ಟಿದ್ದರು ಹರೀಶ್ ಶಂಕರ್.

ಇದನ್ನೂ ಓದಿ:‘ಜೈಲರ್ 2’ ಸಿನಿಮಾದಲ್ಲಿ ಪವನ್ ಕಲ್ಯಾಣ್? ಶಾರುಖ್ ಮಾಡಬೇಕಿದ್ದ ಪಾತ್ರ ಈಗ ಪವರ್ ಸ್ಟಾರ್ ಪಾಲು

ಉಸ್ತಾದ್ ಭಗತ್ ಸಿಂಗ್, ಸಿನಿಮಾವನ್ನು ಪವನ್ ಕಲ್ಯಾಣ್ ಅವರು ವರ್ಷಗಳ ಹಿಂದೆ ಒಪ್ಪಿಕೊಂಡಿದ್ದರು. ಆದರೆ ಆಂಧ್ರ ಚುನಾವಣಾ ಪ್ರಚಾರಕ್ಕೆ ಧುಮುಕಿದ ಕಾರಣ ಸಿನಿಮಾದ ಚಿತ್ರೀಕರಣ ನಿಂತು ಹೋಗಿತ್ತು. ಇದೀಗ ಕೆಲ ವರ್ಷಗಳ ಬಳಿಕ ಸಿನಿಮಾದ ಚಿತ್ರೀಕರಣವನ್ನು ಪವನ್ ಮುಗಿಸಿ ಬಳಿಕ ಬಿಡುಗಡೆ ಮಾಡಲಾಯ್ತು. ಇದೀಗ ಪವನ್ ಕಲ್ಯಾಣ್ ಅವರು ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಕೊಂಡಿದ್ದಾರೆ. ಆದರೆ ‘ಓಜಿ 2’ ಸಿನಿಮಾನಲ್ಲಿ ನಟಿಸಲಿದ್ದು, ಸಿನಿಮಾವನ್ನು ಸುರೇಂಧರ್ ರೆಡ್ಡಿ ನಿರ್ದೇಶನ ಮಾಡಲಿದ್ದು, ಈ ಹಿಂದೆ ‘ಕಿಕ್’, ‘ರೇಸು ಗುರ್ರಂ’, ‘ಊಸರವಳ್ಳಿ’ ಅಂಥಹಾ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಇವರು ನಿರ್ದೇಶಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us