ಒಂದು ದಿನಕ್ಕೆ ಪ್ರಿಯಾಮಣಿ ಪಡೆಯುವ ಸಂಬಳ ಎಷ್ಟು? ‘ದಿ ಫ್ಯಾಮಿಲಿ ಮ್ಯಾನ್’ ನಟಿಯ ಸಂಭಾವನೆ ಏರಿಕೆ

| Updated By: ಮದನ್​ ಕುಮಾರ್​

Updated on: Feb 18, 2022 | 8:49 AM

Priyamani Remuneration: ಪ್ರಿಯಾಮಣಿ ಓರ್ವ ಪ್ರತಿಭಾವಂತ ನಟಿ. ಯಾವುದೇ ಪಾತ್ರ ಕೊಟ್ಟರೂ ಅವರು ನ್ಯಾಯ ಸಲ್ಲಿಸುತ್ತಾರೆ. ಆ ಕಾರಣಕ್ಕಾಗಿ ಅವರ ಕಾಲ್​ಶೀಟ್​ ಪಡೆಯಲು ನಿರ್ಮಾಪಕರು ಮುಗಿ ಬೀಳುತ್ತಾರೆ.

ಒಂದು ದಿನಕ್ಕೆ ಪ್ರಿಯಾಮಣಿ ಪಡೆಯುವ ಸಂಬಳ ಎಷ್ಟು? ‘ದಿ ಫ್ಯಾಮಿಲಿ ಮ್ಯಾನ್’ ನಟಿಯ ಸಂಭಾವನೆ ಏರಿಕೆ
ಪ್ರಿಯಾಮಣಿ
Follow us on

ದಕ್ಷಿಣ ಭಾರತದ ಖ್ಯಾತ ನಟಿ ಪ್ರಿಯಾಮಣಿ (Priyamani) ಅವರು ಒಳ್ಳೊಳ್ಳೆಯ ಪ್ರಾಜೆಕ್ಟ್​ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಈ ಪ್ರತಿಭಾವಂತ ನಟಿಗೆ ಬಹುಭಾಷೆಯಲ್ಲಿ ಬೇಡಿಕೆ ಇದೆ. ಅನೇಕ ಸಿನಿಮಾ ಹಾಗೂ ವೆಬ್​ ಸಿರೀಸ್​ಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್​’ ವೆಬ್​ ಸರಣಿಯಿಂದ ಪ್ರಿಯಾಮಣಿ ಅವರಿಗೆ ಸಿಕ್ಕ ಯಶಸ್ಸು ದೊಡ್ಡದು. ಅದರ ಎರಡನೇ ಸೀಸನ್​ನಲ್ಲೂ ಅವರ ಪಾತ್ರಕ್ಕೆ ಹೆಚ್ಚು ಮಹತ್ವ ಸಿಕ್ಕಿತ್ತು. ಇತ್ತೀಚೆಗೆ ಅವರು ನಟಿಸಿದ ‘ಭಾಮಾ ಕಲಾಪಂ’ (Bhama Kalapam) ಸಿನಿಮಾ​ ಕೂಡ ಸೂಪರ್​ ಹಿಟ್​ ಆಗಿದೆ. ಇದರ ಪರಿಣಾಮವಾಗಿ ಪ್ರಿಯಾಮಣಿ ಅವರ ಡಿಮ್ಯಾಂಡ್​ ಹೆಚ್ಚಿದೆ. ಅದಕ್ಕೆ ಅನುಗುಣವಾಗಿ ಅವರು ಸಂಭಾವನೆ ಕೂಡ ಹೆಚ್ಚಿಸಿಕೊಂಡಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಒಂದು ದಿನಕ್ಕೆ ಪ್ರಿಯಾಮಣಿ ಪಡೆಯುವ ಸಂಬಳ (Priyamani Salary) ಡಬಲ್​ ಆಗಿದೆ ಎನ್ನಲಾಗಿದೆ. ಮದುವೆ ಆದ ಬಳಿಕವೂ ಅನೇಕ ನಟಿಯರು ವೃತ್ತಿಜೀವನವನ್ನು ಯಶಸ್ವಿಯಾಗಿ ಮುಂದುವರಿಸಿಕೊಂಡು ಸಾಗುತ್ತಿದ್ದಾರೆ. ಅಂಥವರಲ್ಲಿ ನಟಿ ಪ್ರಿಯಾಮಣಿ ಕೂಡ ಪ್ರಮುಖರಾಗಿದ್ದಾರೆ.

ಕೆಲವು ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ಪ್ರಿಯಾಮಣಿ ಅವರು ಈ ಮೊದಲು ದಿನವೊಂದಕ್ಕೆ ಒಂದೂವರೆ ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ಆದರೆ ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​ ಮತ್ತು ‘ಭಾಮಾ ಕಲಾಪಂ’ ಸಿನಿಮಾ ಹಿಟ್​ ಆದ ನಂತರ ಅವರು ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ಈಗ ಅವರು ಒಂದು ದಿನಕ್ಕೆ ಬರೋಬ್ಬರಿ 3ರಿಂದ 4 ಲಕ್ಷ ರೂಪಾಯಿ ಪಡೆಯುತ್ತಾರೆ ಎನ್ನಲಾಗಿದೆ. ಅಂದರೆ ಅವರ ಸಂಬಳ ಡಬಲ್​ಗಿಂತಲೂ ಹೆಚ್ಚಾಗಿದೆ.

ಪ್ರಿಯಾಮಣಿ ಓರ್ವ ಪ್ರತಿಭಾವಂತ ನಟಿ. ‘ದಿ ಫ್ಯಾಮಿಲಿ ಮ್ಯಾನ್​’ ವೆಬ್​ ಸಿರೀಸ್​ನಲ್ಲಿ ಅವರು ನಿಭಾಯಿಸಿದ ಸುಚಿ ಎಂಬ ಪಾತ್ರ ಜನಮನ ಗೆಲ್ಲುವಲ್ಲಿ ಯಶಸ್ವಿ ಆಯಿತು. ಯಾವುದೇ ಪಾತ್ರ ಕೊಟ್ಟರೂ ಅವರು ನ್ಯಾಯ ಸಲ್ಲಿಸುತ್ತಾರೆ. ಆ ಕಾರಣಕ್ಕಾಗಿ ಅವರ ಕಾಲ್​ಶೀಟ್​ ಪಡೆಯಲು ನಿರ್ಮಾಪಕರು ಮುಗಿ ಬೀಳುತ್ತಾರೆ. ಸಿನಿಮಾ, ವೆಬ್​ ಸಿರೀಸ್​ಗಳ ಆಯ್ಕೆಯಲ್ಲಿ ಪ್ರಿಯಾಮಣಿ ತುಂಬ ಕಾಳಜಿ ವಹಿಸುತ್ತಿದ್ದಾರೆ. ಸದ್ಯ ಅವರ ಕೈಯಲ್ಲಿ ಅನೇಕ ಪ್ರಾಜೆಕ್ಟ್​ಗಳಿವೆ. ಅಜಯ್​ ದೇವಗನ್​ ನಟನೆಯ ‘ಮೈದಾನ್​’, ರಾಣಾ ದಗ್ಗುಬಾಟಿ ಅಭಿನಯದ ‘ವಿರಾಟ ಪರ್ವಂ’ ಚಿತ್ರದಲ್ಲಿ ಅವರು ನಟಿಸಿದ್ದಾರೆ. ಆ ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿವೆ. ಶಾರುಖ್​ ಖಾನ್​ ಹಾಗೂ ಅಟ್ಲಿ ಕುಮಾರ್​ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾದಲ್ಲೂ ಪ್ರಿಯಾಮಣಿ ಬಣ್ಣ ಹಚ್ಚುತ್ತಿದ್ದಾರೆ ಎನ್ನಲಾಗಿದೆ.

ಹಿಂದಿ, ತೆಲುಗು, ತಮಿಳು ಚಿತ್ರರಂಗದಲ್ಲಿ ಅನೇಕ ನಟಿಯರು ಮದುವೆ ಆದ ಬಳಿಕವೂ ನಟನೆಯಲ್ಲಿ ಸಕ್ರಿಯರಾಗಿದ್ದಾರೆ. ಕರೀನಾ ಕಪೂರ್​ ಖಾನ್​, ಸಮಂತಾ ಮುಂತಾದವರು ಈ ವಿಚಾರದಲ್ಲಿ ಮಾದರಿ ಆಗಿದ್ದಾರೆ. ಈ ನಟಿಯರು ಕೂಡ ಸಂಭಾವನೆ ಹೆಚ್ಚಿಸಿಕೊಳ್ಳುತ್ತ ಮುಂದೆ ಸಾಗುತ್ತಿದ್ದಾರೆ. ಅಂಥವರ ಸಾಧನೆ ಬಗ್ಗೆ ಪ್ರಿಯಾಮಣಿ ಇತ್ತೀಚೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:

‘ನೀವು ಈಗಲೂ ಸೂಪರ್​ ಹಾಟ್​’; ಪ್ರಿಯಾಮಣಿ ಬಗ್ಗೆ ಅಲ್ಲು ಅರ್ಜುನ್​ ಮೆಚ್ಚುಗೆಯ ಮಾತು

ವಿಚ್ಛೇದನ ವದಂತಿ ಹಬ್ಬಿಸಿದವರಿಗೆ ಸೈಲೆಂಟ್​ ಆಗಿ ಉತ್ತರಿಸಿದ ಪ್ರಿಯಾಮಣಿ