ವಿಚ್ಛೇದನ ವದಂತಿ ಹಬ್ಬಿಸಿದವರಿಗೆ ಸೈಲೆಂಟ್​ ಆಗಿ ಉತ್ತರಿಸಿದ ಪ್ರಿಯಾಮಣಿ

ದೀಪಾವಳಿ ನಿಮಿತ್ತ ಪ್ರಿಯಾಮಣಿ ಅವರು ಪತಿ ಜತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ‘ನಾನು ಮತ್ತು ನನ್ನವನಿಂದ ದೀಪಾವಳಿ ಹಬ್ಬದ ಶುಭಾಶಯಗಳು’ ಎಂದು ಹೇಳಿದ್ದಾರೆ.

ವಿಚ್ಛೇದನ ವದಂತಿ ಹಬ್ಬಿಸಿದವರಿಗೆ ಸೈಲೆಂಟ್​ ಆಗಿ ಉತ್ತರಿಸಿದ ಪ್ರಿಯಾಮಣಿ
ಪ್ರಿಯಾಮಣಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Nov 08, 2021 | 7:37 PM

ಫ್ಯಾಮಿಲಿ ಮ್ಯಾನ್ ವೆಬ್ ಸರಣಿಯ ಮೂಲಕ ಪ್ರಿಯಾಮಣಿ ಅವರು ಸಾಕಷ್ಟು ಹೆಸರು ಮಾಡಿದ್ದಾರೆ. ಈ ವೆಬ್​ ಸರಣಿಯಲ್ಲಿ ಮನೋಜ್​ ಭಾಜಪೇಯ್​ ಮತ್ತು ಪ್ರಿಯಾಮಣಿ ಅವರು ಶ್ರೀಕಾಂತ್​ ತಿವಾರಿ-ಸುಚಿತ್ರಾ ಐಯ್ಯರ್​​ ಎಂಬ ಗಂಡ-ಹೆಂಡತಿಯ ಪಾತ್ರ ಮಾಡಿದ್ದರು. ಸುಚಿ ತನ್ನ ಸ್ನೇಹಿತನ ಜೊತೆಗೆ ಹೊಂದಿರುವ ಆಪ್ತತೆಯ ಕಾರಣದಿಂದ ಶ್ರೀಕಾಂತ್​ ತಿವಾರಿಯ ಸಂಸಾರದಲ್ಲಿ ಬಿರುಕು ಉಂಟಾಗುತ್ತದೆ. ಈ ವೆಬ್ ಸೀರಿಸ್​ ತೆರೆಕಂಡ ಬೆನ್ನಲ್ಲೇ ಮುಸ್ತಫಾ ರಾಜ್ ಅವರ ಜತೆಗಿನ ವೈವಾಹಿಕ ಜೀವನಕ್ಕೆ ಪ್ರಿಯಾಮಣಿ ಅಂತ್ಯ ಹಾಡಲಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ಈ ಬಗ್ಗೆ ಪ್ರಿಯಾಮಣಿ ಸ್ಪಷ್ಟನೆ ನೀಡುವ ಕೆಲಸವನ್ನು ಮಾಡಿದ್ದರು. ಈಗ ಅವರು ವಿಚ್ಛೇದನ ಕುರಿತು ಸೈಲೆಂಟ್​ ಆಗಿಯೇ ಉತ್ತರ ನೀಡಿದ್ದಾರೆ.

ದೀಪಾವಳಿ ನಿಮಿತ್ತ ಪ್ರಿಯಾಮಣಿ ಅವರು ಪತಿ ಜತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ‘ನಾನು ಮತ್ತು ನನ್ನವನಿಂದ ದೀಪಾವಳಿ ಹಬ್ಬದ ಶುಭಾಶಯಗಳು’ ಎಂದು ಹೇಳಿದ್ದಾರೆ. ಈ ಮೂಲಕ ತಮ್ಮ ಸಂಬಂಧದಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.

ಈ ಮೊದಲು ಕೂಡ ಪ್ರಿಯಾಮಣಿ ಈ ಬಗ್ಗೆ ನೇರವಾಗಿಯೇ ಮಾತನಾಡಿದ್ದರು. ‘ನನ್ನ ಮತ್ತು ಮುಸ್ತಫಾ ಸಂಬಂಧ ಬಹಳ ಚೆನ್ನಾಗಿದೆ. ಇಬ್ಬರೂ ಪರಸ್ಪರ ಅರ್ಥ ಮಾಡಿಕೊಂಡಿದ್ದೇವೆ. ಒಂದು ವೇಳೆ ನಾನು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದರೂ ಪತಿಯ ಜತೆ ಮಾತನಾಡುವುದನ್ನು ತಪ್ಪಿಸುವುದಿಲ್ಲ. ಅದೇ ರೀತಿ ಮುಸ್ತಫಾ ಅವರ ಕೆಲಸದ ಒತ್ತಡವನ್ನು ನಾನು ಅರ್ಥ ಮಾಡಿಕೊಳ್ಳುತ್ತೇನೆ. ಇಬ್ಬರಿಗೂ ಸಮಯ ಸಿಕ್ಕಾಗ ಮನಬಿಚ್ಚಿ ಮಾತನಾಡುತ್ತೇವೆ. ಇದರಿಂದಾಗಿ ನಮ್ಮ ಸಂಬಂಧ ಬಹಳ ಗಟ್ಟಿಯಾಗಿದೆ’ ಎಂದು ಅವರು ಹೇಳಿಕೊಂಡಿದ್ದರು.

ಮುಸ್ತಫಾ ಮೊದಲ ಪತ್ನಿ ತಗಾದೆ ಒಂದನ್ನು ತೆಗೆದಿದ್ದರು. ಮುಸ್ತಫಾ ರಾಜ್ ಅವರು ಮೊದಲ ಪತ್ನಿ ಆಯೆಷಾ ಅವರಿಂದ 2013ರಲ್ಲಿ ದೂರವಾಗಿದ್ದರು. ನಂತರ 2017ರಲ್ಲಿ ಪ್ರಿಯಾಮಣಿ ಅವರನ್ನು ವಿವಾಹವಾದರು. ಮುಸ್ತಫಾ ಮತ್ತು ಆಯೆಷಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮುಸ್ತಫಾ ವಿರುದ್ಧ ಆಯೆಷಾ ಆರೋಪ ಒಂದನ್ನು ಮಾಡಿದ್ದರು. ‘ಕಾನೂನಿನ ಪ್ರಕಾರ ನಾವಿನ್ನೂ ಬೇರ್ಪಟ್ಟಿಲ್ಲ. ನಾನೀಗಲೂ ಅವರ ಪತ್ನಿ. ಆದ್ದರಿಂದ ಪ್ರಿಯಾಮಣಿ ಮತ್ತು ಮುಸ್ತಫಾ ಅವರ ಮದುವೆ ಅಸಿಂಧು’ ಎಂದಿದ್ದರು.

ಇದನ್ನೂ ಓದಿ: ‘ನಿಮ್ಮಂಥ ಹೆಂಡತಿ ಯಾರಿಗೂ ಸಿಗಬಾರದು’; ಪ್ರಿಯಾಮಣಿಗೆ ನೇರವಾಗಿ ಶಾಪ ಹಾಕಿದ ಜನರು

ಸೆಟ್ಟೇರಿತು ಶಾರುಖ್- ನಯನತಾರಾ ನಟನೆಯ ನೂತನ ಚಿತ್ರ; ಬಣ್ಣಹಚ್ಚಲಿದ್ದಾರಾ ಪ್ರಿಯಾಮಣಿ, ರಾಣಾ ದಗ್ಗುಬಾಟಿ?

Published On - 7:12 pm, Mon, 8 November 21