2021ರಲ್ಲಿ ಪ್ರೇಕ್ಷಕರ ಮನಗೆದ್ದ ಸಿನಿಮಾಗಳ ಪೈಕಿ ‘ಗರುಡ ಗಮನ ವೃಷಭ ವಾಹನ’ (Garuda Gamana Vrishabha Vahana) ಚಿತ್ರ ಕೂಡ ಪ್ರಮುಖವಾಗಿದೆ. ರಾಜ್ ಬಿ. ಶೆಟ್ಟಿ (Raj B. Shetty) ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ರೌಡಿಸಂ ಲೋಕದ ಕಥೆ ಹೇಳಲಾಗಿದೆ. ನಿರ್ದೇಶನದ ಜತೆಗೆ ಪ್ರಮುಖ ಪಾತ್ರದಲ್ಲೂ ರಾಜ್ ಬಿ. ಶೆಟ್ಟಿ ನಟಿಸಿದ್ದಾರೆ. ಇನ್ನೊಂದು ಮುಖ್ಯ ಪಾತ್ರಕ್ಕೆ ರಿಷಬ್ ಶೆಟ್ಟಿ (Rishab Shetty) ಬಣ್ಣ ಹಚ್ಚಿದ್ದಾರೆ. ಈ ಚಿತ್ರ ಮೂರು ದಿನಗಳ ಹಿಂದೆ ಒಟಿಟಿಯಲ್ಲಿ ತೆರೆಗೆ ಬಂದಿತ್ತು. ಈ ಸಿನಿಮಾ ಈಗ ಒಟಿಟಿಯಲ್ಲೂ ಧೂಳೆಬ್ಬಿಸಿದೆ.
ಟ್ರೇಲರ್ನಿಂದಲೇ ಭಾರಿ ಕುತೂಹಲ ಸೃಷ್ಟಿಸಿದ್ದ ‘ಗರುಡ ಗಮನ ವೃಷಭ ವಾಹನ’ ಚಿತ್ರ ನ.19ರಂದು ತೆರೆಕಂಡಿತು. ಮೊದಲ ದಿನವೇ ಈ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿತು. ಸಿನಿಮಾ ಬಹುತೇಕ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಂಡಿತು. ಚಿತ್ರಕ್ಕೆ ಜನರು ತೋರಿಸಿದ ಪ್ರೀತಿಗೆ ರಾಜ್ ಬಿ. ಶೆಟ್ಟಿ ಫಿದಾ ಆದರು. ತಮ್ಮ ಟೀಂ ಜತೆಗೂಡಿ ಅವರು ಅನೇಕ ಚಿತ್ರಮಂದಿರಗಳಿಗೆ ಭೇಟಿ ನೀಡಿದರು.
ಜನವರಿ 13ರಂದು ಒಟಿಟಿಯಲ್ಲಿ ‘ಗರುಡ ಗಮನ ವೃಷಭ ವಾಹನ’ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಸಿನಿಮಾ ಕೇವಲ ಮೂರು ದಿನಗಳಲ್ಲಿ ಬರೋಬ್ಬರಿ 8 ಕೋಟಿ ನಿಮಿಷಗಳ ವೀಕ್ಷಣೆ ಕಂಡಿದೆ. ಈ ಮೂಲಕ ಒಟಿಟಿಯಲ್ಲೂ ಸಿನಿಮಾ ಭಾರೀ ಜನಮನ್ನಣೆ ಪಡೆದುಕೊಂಡಂತಾಗಿದೆ.
ನಮ್ಮ ಚಿತ್ರ ಗರುಡ ಗಮನ ವೃಷಭ ವಾಹನ ಒಂದು ಹೋರಾಟ. ಜಗತ್ತೇ ಮುಚ್ಚಿ ಕೂತಿರುವಾಗ ನಾವು ನಮ್ಮ ಚಿತ್ರವನ್ನು ಸರಕಾಗಿ ಮಾರದೆ ಕಲೆಯಾಗಿ ನಿಮ್ಮ ಮುಂದೆ ತರುವ ಹುಚ್ಚುತನದಲ್ಲಿ ಕಾದು ಕುಳಿತಿದ್ದೆವು. ಈಗ ಈ ಹುಚ್ಚುತನಕ್ಕೆ ಇನ್ನೊಂದು ಹುಚ್ಚು ತಂಡ ಸೇರಿಕೊಂಡಿದೆ Paramvah Pictures ನಮ್ಮ ಚಿತ್ರವನ್ನು ನಿಮ್ಮ ಮುಂದೆ ಅರ್ಪಿಸುತ್ತಿದೆ ಎನ್ನುವುದು.. pic.twitter.com/PKLq7blJdc
— Raj B Shetty (@RajbShettyOMK) October 4, 2021
‘ಗರುಡ ಗಮನ ವೃಷಭ ವಾಹನ’ ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ ನಿಭಾಯಿಸಿರುವ ಪಾತ್ರ ಭಿನ್ನವಾಗಿದೆ. ಅನೇಕ ಸಿದ್ಧ ಸೂತ್ರಗಳನ್ನು ಮುರಿದು ಅವರು ಈ ಚಿತ್ರವನ್ನು ಕಟ್ಟಿದ್ದಾರೆ. ಸಿನಿಮಾ ಗೆಲ್ಲುವಲ್ಲಿ ಹಾಡುಗಳ ಪಾತ್ರ ಕೂಡ ದೊಡ್ಡದಿದೆ. ಮಿಧುನ್ ಮುಕುಂದನ್ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ‘ಸೋಜುಗಾದ ಸೂಜು ಮಲ್ಲಿಗೆ..’, ‘ಚಂದ್ರ ಚೂಡ ಶಿವ ಶಂಕರ ಪಾರ್ವತಿ ರಮಣ..’ ಹಾಗೂ ‘ಡೀಮನ್ ಇನ್ ಮೀ’ ಹಾಡುಗಳು ಕೇಳುಗರ ಮನಗೆದ್ದಿವೆ.
ಇದನ್ನೂ ಓದಿ: ಪರಭಾಷೆಗಳಿಂದ ‘ಗರುಡ ಗಮನ ವೃಷಭ ವಾಹನ’ ಚಿತ್ರಕ್ಕೆ ಬಂತು ಬೇಡಿಕೆ
‘ಗರುಡ ಗಮನ..’ ಚಿತ್ರದ ಇನ್ನೊಂದು ಮೈಲಿಗಲ್ಲು; ‘ಸೋಜುಗಾದ ಸೂಜು ಮಲ್ಲಿಗೆ’ ಸಾಧನೆ ಏನು?
Published On - 9:15 pm, Sat, 15 January 22