AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಟಿಟಿಯಲ್ಲಿ ಬರಲಿದೆ ಹೊಸ ರೂಪದ ‘ಧುರಂಧರ್’; ಪ್ರೇಕ್ಷಕರಿಗೆ ಶುರುವಾಯ್ತು ಗೊಂದಲ

‘ಧುರಂಧರ್’ ಸಿನಿಮಾವನ್ನು ಹೊಸ ರೂಪದಲ್ಲಿ ನೋಡಲು ಪ್ರೇಕ್ಷಕರಿಗೆ ಅವಕಾಶ ಸಿಗುತ್ತಿದೆ. ಈ ಪ್ರಕಟಣೆಯು ರಣವೀರ್ ಅಭಿಮಾನಿಗಳಲ್ಲಿ ಸಖತ್ ಕ್ರೇಜ್ ಹುಟ್ಟುಹಾಕಿದೆ. ಕಟ್ ಇಲ್ಲದ, ಹೆಚ್ಚುವರಿ ದೃಶ್ಯಗಳನ್ನು ಒಳಗೊಂಡ ಹೊಸ ವರ್ಷನ್ ಬಿಡುಗಡೆ ಮಾಡುವುದಾಗಿ ನೆಟ್​ಫ್ಲಿಕ್ಸ್ ಹೇಳಿದೆ. ಆ ಕುರಿತು ಇಲ್ಲಿದೆ ಇನ್ನಷ್ಟು ಮಾಹಿತಿ..

ಒಟಿಟಿಯಲ್ಲಿ ಬರಲಿದೆ ಹೊಸ ರೂಪದ ‘ಧುರಂಧರ್’; ಪ್ರೇಕ್ಷಕರಿಗೆ ಶುರುವಾಯ್ತು ಗೊಂದಲ
Ranveer Singh
ಮದನ್​ ಕುಮಾರ್​
|

Updated on: May 21, 2026 | 2:49 PM

Share

ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ (Ranveer Singh) ನಟನೆಯ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ‘ಧುರಂಧರ್’ ಸದ್ಯ ಒಟಿಟಿ ಜಗತ್ತಿನಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಚಿತ್ರದ ಎರಡನೇ ಭಾಗ ‘ಧುರಂಧರ್: ದಿ ರಿವೇಂಜ್’ ಇತ್ತೀಚೆಗಷ್ಟೇ ವಿದೇಶಗಳಲ್ಲಿ ಒಟಿಟಿ ಮೂಲಕ ರಿಲೀಸ್ ಆಗಿ ಭಾರಿ ಸೌಂಡ್ ಮಾಡಿತ್ತು. ಇದರ ಬೆನ್ನಲ್ಲೇ ಈಗ ಚಿತ್ರತಂಡ ಹಾಗೂ ನೆಟ್‌ಫ್ಲಿಕ್ಸ್ (Netflix) ಪ್ರೇಕ್ಷಕರಿಗೆ ಮತ್ತೊಂದು ಬಿಗ್ ಸರ್ಪ್ರೈಸ್ ನೀಡಿದೆ. ‘ಧುರಂಧರ್’ (Dhurandhar) ಚಿತ್ರದ ಮೊದಲ ಭಾಗವು, ಯಾವುದೇ ಕಟ್‌ ಇಲ್ಲದೇ, ಇದುವರೆಗೆ ಯಾರೂ ನೋಡಿರದ ದೃಶ್ಯಗಳೊಂದಿಗೆ ಮತ್ತೆ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲು ಸಜ್ಜಾಗಿದೆ.

ನೆಟ್‌ಫ್ಲಿಕ್ಸ್ ಸಂಸ್ಥೆಯು ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಈ ಬಗ್ಗೆ ಪ್ರಕಟಣೆ ಹಂಚಿಕೊಂಡಿದೆ. ಥಿಯೇಟರ್‌ನಲ್ಲಿ ರಿಲೀಸ್ ಆದಾಗ ಕತ್ತರಿ ಬಿದ್ದಿದ್ದ ಹಲವು ಪ್ರಮುಖ ಮತ್ತು ರಗಡ್ ದೃಶ್ಯಗಳನ್ನು ಒಳಗೊಂಡ ವಿಸ್ತೃತ ಆವೃತ್ತಿ ಇದಾಗಿರಲಿದೆ ಎಂದು ತಿಳಿಸಿದೆ. ಚಿತ್ರದ ಹೊಸ ಪೋಸ್ಟರ್ ಹಂಚಿಕೊಂಡಿರುವ ನೆಟ್‌ಫ್ಲಿಕ್ಸ್, ‘ಈ ಆವೃತ್ತಿಯನ್ನು ಮೇ 22ರಿಂದ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ವೀಕ್ಷಿಸಿ’ ಎಂದು ಬರೆದುಕೊಂಡಿದೆ.

View this post on Instagram

A post shared by Netflix India (@netflix_in)

ಒಂದೆಡೆ ಅಭಿಮಾನಿಗಳು ಈ ‘ಅನ್‌ಕಟ್’ ಆವೃತ್ತಿ ನೋಡಲು ಕಾಯುತ್ತಿದ್ದರೆ, ಮತ್ತೊಂದೆಡೆ ಪ್ರೇಕ್ಷಕರಲ್ಲಿ ಭಾರೀ ಗೊಂದಲ ಸೃಷ್ಟಿಯಾಗಿದೆ. ಇದಕ್ಕೆ ಕಾರಣ ‘ಧುರಂಧರ್’ ಎರಡನೇ ಭಾಗದ ಒಟಿಟಿ ರಿಲೀಸ್ ಅಪ್ಡೇಟ್. ‘ಧುರಂಧರ್: ದಿ ರಿವೇಂಜ್’ ಈಗಾಗಲೇ ಮೇ 14ರಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಆದರೆ, ಭಾರತದಲ್ಲಿ ಇದರ ಪ್ರೀಮಿಯರ್ ಜೂನ್ 4ರಂದು ‘ಜಿಯೋ ಹಾಟ್‌ಸ್ಟಾರ್’ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ನಡೆಯಲಿದೆ.

ಈ ಗೊಂದಲದಿಂದಾಗಿ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ತರಹೇವಾರಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ‘ಒಂದು ಭಾಗ ನೆಟ್‌ಫ್ಲಿಕ್ಸ್‌ನಲ್ಲಿ ಬಂದರೆ, ಮತ್ತೊಂದು ಭಾಗ ಜಿಯೋಸ್ಟಾರ್‌ನಲ್ಲಿ ಬರುತ್ತಿದೆ, ನಮಗಂತೂ ಫುಲ್ ಗೊಂದಲ’ ಎಂದು ಜನರು ಕಮೆಂಟ್ ಮಾಡಿದ್ದಾರೆ. ‘ಇದನ್ನು ಮೊದಲೇ ರಿಲೀಸ್ ಮಾಡಬಾರದಿತ್ತೇ?’ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಇನ್ನು ಕೆಲವರು, ‘ನಮಗೆ ಭಾಗ 2 ಕೂಡ ನೆಟ್‌ಫ್ಲಿಕ್ಸ್‌ನಲ್ಲೇ ಬೇಕಿತ್ತು’ ಎಂದು ಬೇಡಿಕೆ ಇಡುತ್ತಿದ್ದಾರೆ.

ಇದನ್ನೂ ಓದಿ: ‘ಧುರಂಧರ್’ ಚಿತ್ರದಲ್ಲಿ ದೇಶದ ಭದ್ರತೆಯ ರಹಸ್ಯ ಮಾಹಿತಿ ಸೋರಿಕೆ ಆರೋಪ; ಹೈಕೋರ್ಟ್ ಮಹತ್ವದ ಆದೇಶ

ಯಾರಿಗೆ ಯಾವ ಒಟಿಟಿಯಲ್ಲಿ ಸಿನಿಮಾ ಸಿಗಲಿದೆ ಎಂಬ ಗೊಂದಲ ಏನೇ ಇದ್ದರೂ, ಮೇ 22ರಿಂದ ರಣವೀರ್ ಸಿಂಗ್ ಅವರ ರಗಡ್ ಆ್ಯಕ್ಷನ್ ದೃಶ್ಯಗಳನ್ನು ಯಾವುದೇ ಕಟ್ ಇಲ್ಲದೇ ನೋಡಲು ನೆಟ್‌ಫ್ಲಿಕ್ಸ್ ಪ್ರೇಕ್ಷಕರಂತೂ ಕಾತರರಾಗಿದ್ದಾರೆ. ಒಟಿಟಿ ಪ್ರೇಕ್ಷಕರು ಈ ವರ್ಷನ್ ನೋಡಿ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More