ಪೂಜಾ ಭಟ್ ಜೊತೆಗಿನ ಲಿವ್-ಇನ್ ರಿಲೇಶನ್ಶಿಪ್ ಬಗ್ಗೆ ಮಾತನಾಡಿದ ರಣವೀರ್
ರಣವೀರ್ ಶೋರೆ ಹಾಗೂ ಮಹೇಶ್ ಭಟ್ ಮಗಳು ಪೂಜಾ ಭಟ್ ಡೇಟಿಂಗ್ ಮಾಡುತ್ತಿದ್ದರು. ಕೆಲವೇ ತಿಂಗಳುಗಳ ಸಂಬಂಧದ ನಂತರ ಈ ಇಬ್ಬರೂ ಬೇರೆ ಆದರು. ಬ್ರೇಕಪ್ ಆದ ಬಳಿಕ ರಣವೀರ್ ಕುಡಿದ ಅಮಲಿನಲ್ಲಿ ಥಳಿಸಿದ್ದಾರೆ ಎನ್ನುವ ಆರೋಪ ಬಂತು. ಈ ಬಗ್ಗೆ ರಣವೀರ್ ಅವರು ಮಾತನಾಡಿದ್ದಾರೆ.
ನಟ ರಣವೀರ್ ಶೋರೆ ‘ಬಿಗ್ ಬಾಸ್ ಹಿಂದಿ ಒಟಿಟಿ ‘ ಮೂರನೇ ಸೀಸನ್‌ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ.ಈ ಶೋ ಜಿಯೋ ಸಿನಿಮಾ ಒಟಿಟಿಯಲ್ಲಿ ಪ್ರಸಾರ ಕಾಣುತ್ತಿದೆ. ಮೊದಲ ದಿನದಿಂದಲೂ ಈ ಶೋನಲ್ಲಿ ಅವರು ಜಗಳವಾಡುತ್ತಲೇ ಇದ್ದಾರೆ. ಇತ್ತೀಚಿನ ಸಂಚಿಕೆಯಲ್ಲಿ ರಣವೀರ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಈ ವೇಳೆ ನಟಿ ಪೂಜಾ ಭಟ್ ಜೊತೆಗಿನ ಸಂಬಂಧದ ಬಗ್ಗೆ ಮೌನ ಮುರಿದಿದ್ದಾರೆ. 2000ರ ಸಂದರ್ಭದಲ್ಲಿ ರಣವೀರ್ ಮತ್ತು ಪೂಜಾ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಕೆಲವೇ ತಿಂಗಳುಗಳ ಸಂಬಂಧದ ನಂತರ ಈ ಇಬ್ಬರೂ ಬೇರೆ ಆದರು. ಬ್ರೇಕಪ್ ಆದ ಬಳಿಕ ರಣವೀರ್ ಕುಡಿದ ಅಮಲಿನಲ್ಲಿ ಥಳಿಸಿದ್ದಾರೆ ಎನ್ನುವ ಆರೋಪ ಬಂತು.
‘ಬಿಗ್ ಬಾಸ್ OTT 3’ ಸಂಚಿಕೆಯಲ್ಲಿ ರಣವೀರ್ ತಮ್ಮ ಜೀವನದ ಕಷ್ಟದ ಸಮಯವನ್ನು ಮೆಲುಕು ಹಾಕಿದರು. ‘ಲಡಾಖ್‌ನಲ್ಲಿ ಲಕ್ಷ್ಯ ಚಿತ್ರದ ಚಿತ್ರೀಕರಣದ ವೇಳೆ ತಾಯಿಯ ಆರೋಗ್ಯ ಹದಗೆಟ್ಟಿತ್ತು. ಆದರೆ ಶೂಟಿಂಗ್‌ನಿಂದಾಗಿ ನನ್ನ ತಾಯಿಯನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ನಾನು ಚಿತ್ರೀಕರಣದಿಂದ ಹಿಂತಿರುಗಿದಾಗ ಅವರು ಆಸ್ಪತ್ರೆಯಿಂದ ಮನೆಗೆ ಮರಳಿದ್ದರು. ಆದರೆ ಕೆಲವೇ ದಿನಗಳಲ್ಲಿ ಅವರು ಮೃತಪಟ್ಟರು. ಅದೇ ಸಮಯದಲ್ಲಿ ನನ್ನೊಂದಿಗೆ ಒಬ್ಬ ನಟಿಗೆ ಸಂಬಂಧಿಸಿದ ಹಗರಣವಿತ್ತು. ಅದರಿಂದ ಹೊರಬರಲು ನನಗೆ ಸಾಧ್ಯವಾಗಲಿಲ್ಲ’ ಎಂದು ರಣವೀರ್ ಹೇಳಿದರು.
‘ನನ್ನ ಸಹೋದರ ನನ್ನನ್ನು ಅಮೆರಿಕದಲ್ಲಿರುವ ಮನೆಗೆ ಬರುವಂತೆ ಹೇಳಿದ. ಅವನ ಬಳಿ ಸಾಲ ಪಡೆದು ನಟನೆ ಕೋರ್ಸ್ ತೆಗೆದುಕೊಂಡೆ. ಅಲ್ಲಿಂದ ವಾಪಸಾದ ನಂತರ 2005ರಲ್ಲಿ ‘ದಿ ಗ್ರೇಟ್ ಇಂಡಿಯನ್ ಕಾಮಿಡಿ ಶೋ’ನಲ್ಲಿ ಭಾಗವಹಿಸಿದೆ. ಅದೇ ಸಮಯದಲ್ಲಿ ನನ್ನ ಎರಡು ಸ್ಥಗಿತಗೊಂಡ ಚಿತ್ರಗಳು ಬ್ಯಾಕಟ್ ಟು ಬ್ಯಾಕ್ ರಿಲೀಸ್ ಆಗಿ ಹಿಟ್ ಆದವು. ನನ್ನ ಕೆಲಸವು ಪ್ರೇಕ್ಷಕರಿಂದ ಪ್ರೀತಿಯನ್ನು ಪಡೆಯಲಾರಂಭಿಸಿತು ಮತ್ತು ನಾನು ಅಲ್ಲಿಂದ ಕ್ರಮೇಣ ಪ್ರಗತಿ ಸಾಧಿಸಿದೆ’ ಎಂದಿದ್ದಾರೆ ಅವರು.
ಇದನ್ನೂ ಓದಿ: ರಣವೀರ್ ಸಿಂಗ್ ಮೊದಲ ಆಡಿಷನ್ ಹೇಗಿತ್ತು ನೋಡಿ; ನೀವು ನಗೋದು ಗ್ಯಾರಂಟಿ
ಇಷ್ಟೆಲ್ಲಾ ಹೇಳುವಾಗ ರಣವೀರ್ ಅವರು ಪೂಜಾ ಭಟ್ ಹೆಸರನ್ನು ತೆಗೆದುಕೊಳ್ಳಲಿಲ್ಲ. ಆದರೆ ಅವರು ಮಾತನಾಡಿದ್ದು ಪೂಜಾ ಭಟ್ ಬಗ್ಗೆಯೇ ಎನ್ನಲಾಗಿದೆ. 2000ನೇ ಇಸವಿಯಲ್ಲಿ ಪೂಜಾ ಭಟ್ ಅವರು ರಣವೀರ್ ಮೇಲೆ ಕುಡಿದ ಮತ್ತಿನಲ್ಲಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಆಗ ಅವರು ಆರೋಪವನ್ನು ನಿರಾಕರಿಸಿದ್ದರು. ‘ಇತರೆ ಜೋಡಿಗಳಂತೆ ಪೂಜಾ ಮತ್ತು ನಾನು ಕೆಲವು ವಿಷಯಗಳನ್ನು ಒಪ್ಪಲಿಲ್ಲ. ಆದರೆ ನಾನು ಅವಳನ್ನು ಎಂದಿಗೂ ಹೊಡೆದಿಲ್ಲ’ ಎಂದು ಅವರು ಈ ಮೊದಲು ಹೇಳಿದ್ದರು. ಪೂಜಾ ಮತ್ತು ರಣವೀರ್ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ವಾಸಿಸುತ್ತಿದ್ದರು. ಆದರೆ ಜಗಳದ ನಂತರ ಪೂಜಾ ಮನೆ ಬಿಟ್ಟು ಹೋಗಿದ್ದರು. ಪೂಜಾ ಅವರು ಆಲಿಯಾ ಭಟ್ ಅವರ ಸಹೋದರಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.