ಒಟಿಟಿಯಲ್ಲೂ ‘ಇರುಮುಡಿ’ ದಾಖಲೆ, ಜಾಗತಿಕ ಪಟ್ಟಿಯಲ್ಲಿ ನಂಬರ್ 1

ಆಂಧ್ರ, ತೆಲಂಗಾಣದ ಚಿತ್ರಮಂದಿರಗಳಲ್ಲಿ ಮೋಡಿ ಮಾಡಿದ್ದ ‘ಇರುಮುಡಿ’ ಸಿನಿಮಾ ಕೆಲ ದಾಖಲೆಗಳನ್ನು ಸಹ ಬರೆದಿತ್ತು. ಬಿಡುಗಡೆ ಆದ ಎಲ್ಲ ಚಿತ್ರಮಂದಿರಗಳಲ್ಲೂ ಹೌಸ್​​ಫುಲ್ ಆದ ಸಿನಿಮಾ ಎನಿಸಿಕೊಂಡಿತ್ತು ‘ಇರುಮುಡಿ’. ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ತಿಂಗಳ ಬಳಿಕ ಒಟಿಟಿಗೆ ಬಂದ ಈ ಸಿನಿಮಾ ಈಗ ಒಟಿಟಿಯಲ್ಲೂ ತನ್ನ ಹವಾ ಮುಂದುವರೆಸಿದೆ. ಚಿತ್ರಮಂದಿರದ ಬಳಿಕ ಒಟಿಟಿಯಲ್ಲೂ ದಾಖಲೆಗಳನ್ನು ಬರೆಯುತ್ತಿದೆ.

ಒಟಿಟಿಯಲ್ಲೂ ‘ಇರುಮುಡಿ’ ದಾಖಲೆ, ಜಾಗತಿಕ ಪಟ್ಟಿಯಲ್ಲಿ ನಂಬರ್ 1
Irumudi Movie

Updated on: Oct 01, 2026 | 10:56 AM

ಮುಖ್ಯಾಂಶಗಳು

  • ಚಿತ್ರಮಂದಿರಗಳಲ್ಲಿ ದಾಖಲೆ ಬರೆದಿದ್ದ ‘ಇರುಮುಡಿ’
  • ‘ಇರುಮುಡಿ’ ಸಿನಿಮಾ ನೆಟ್​​ಫ್ಲಿಕ್ಸ್​​ನಲ್ಲಿ ರಿಲೀಸ್ ಆಗಿದೆ
  • ನೆಟ್​​ಫ್ಲಿಕ್ಸ್​ ಒಟಿಟಿಯಲ್ಲೂ ದಾಖಲೆ ಬರೆದಿದೆ ಸಿನಿಮಾ

ರವಿತೇಜ ನಟನೆಯ ‘ಇರುಮುಡಿ’ ಸಿನಿಮಾ ‘ಟಾಕ್ಸಿಕ್’ ಜೊತೆಗೆ ಬಿಡುಗಡೆ ಆಗಿತ್ತು. ಆಂಧ್ರ, ತೆಲಂಗಾಣದ ಚಿತ್ರಮಂದಿರಗಳಲ್ಲಿ ಮೋಡಿ ಮಾಡಿದ್ದ ಈ ಸಿನಿಮಾ ಕೆಲ ದಾಖಲೆಗಳನ್ನು ಸಹ ಬರೆದಿತ್ತು. ಬಿಡುಗಡೆ ಆದ ಎಲ್ಲ ಚಿತ್ರಮಂದಿರಗಳಲ್ಲೂ ಹೌಸ್​​ಫುಲ್ ಆದ ಸಿನಿಮಾ ಎನಿಸಿಕೊಂಡಿತ್ತು ‘ಇರುಮುಡಿ’. ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ತಿಂಗಳ ಬಳಿಕ ಒಟಿಟಿಗೆ ಬಂದ ಈ ಸಿನಿಮಾ ಈಗ ಒಟಿಟಿಯಲ್ಲೂ ತನ್ನ ಹವಾ ಮುಂದುವರೆಸಿದೆ. ಚಿತ್ರಮಂದಿರದ ಬಳಿಕ ಒಟಿಟಿಯಲ್ಲೂ ದಾಖಲೆಗಳನ್ನು ಬರೆಯುತ್ತಿದೆ.

ನೆಟ್‌‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿರುವ ಈ ಚಿತ್ರವು ಜಾಗತಿಕ ಮಟ್ಟದಲ್ಲಿ ಇಂಗ್ಲಿಷ್‌ಯೇತರ ಚಲನಚಿತ್ರಗಳ ಚಾರ್ಟ್‌ನಲ್ಲಿ ಮೊದಲನೇ ಸ್ಥಾನವನ್ನು ಪಡೆದುಕೊಂಡು ಸದ್ದು ಮಾಡುತ್ತಿದೆ. ನೆಟ್​​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗುವ ಕೊರಿಯನ್, ಫ್ರೆಂಚ್, ಇರಾನ್ ಸೇರಿದಂತೆ ಹಲವು ವಿದೇಶಿ ಭಾಷೆಗಳ ಕಂಟೆಂಟ್ ಪಟ್ಟಿಯಲ್ಲಿ ‘ಇರುಮುಡಿ’ ಸಿನಿಮಾ ಅತಿ ಹೆಚ್ಚು ವೀಕ್ಷಣೆ ಗಳಿಸುತ್ತಿದ್ದು, ಟ್ರೆಂಡಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇದು ಸಾಮಾನ್ಯ ಸಾಧನೆಯಲ್ಲ. ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿರುವ ಭಾರತೀಯರು ಸಹ ‘ಇರುಮುಡಿ’ ಸಿನಿಮಾವನ್ನು ಒಟಿಟಿಯಲ್ಲಿ ವೀಕ್ಷಿಸುತ್ತಿದ್ದಾರೆ.

ಸೆಪ್ಟೆಂಬರ್ 21 ರಿಂದ 27 ರವರೆಗೆ ‘ಇರುಮುಡಿ’ ಸಿನಿಮಾವು ನೆಟ್​​ಫ್ಲಿಕ್ಸ್​​ನಲ್ಲಿ 34 ಲಕ್ಷ ವೀಕ್ಷಣೆಗಳು ಹಾಗೂ 81 ಲಕ್ಷ ವೀಕ್ಷಣಾ ಗಂಟೆಗಳ ಅವಧಿಯನ್ನು ದಾಖಲಿಸುವ ಮೂಲಕ ಜಾಗತಿಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಅಯ್ಯಪ್ಪ ದೀಕ್ಷೆಯ ಹಿನ್ನೆಲೆಯುಳ್ಳ ಈ ಚಿತ್ರವು ಥಿಯೇಟರ್‌ಗಳಲ್ಲೂ ಭರ್ಜರಿ ಕಲೆಕ್ಷನ್ ಮಾಡಿ ಯಶಸ್ಸು ಕಂಡಿತ್ತು. ಈಗ ಒಟಿಟಿಯಲ್ಲೂ ಸಹ ಅದ್ಭುತ ಪ್ರದರ್ಶನ ಕಾಣುತ್ತಿದೆ.

ಇದರ ಜೊತೆಗೆ ರಾಜ ಕರುಪ್ಪಸಾಮಿ ನಿರ್ದೇಶಿಸಿ, ರಿಷಿಕಾಂತ್ ನಾಯಕನಾಗಿ ನಟಿಸಿರುವ ತಮಿಳು ಚಿತ್ರ ‘ಮೊದ ರಾತ್ರಿ’ ಕೂಡ ನೆಟ್‌‌ಫ್ಲಿಕ್ಸ್ ಜಾಗತಿಕ ಪಟ್ಟಿಯಲ್ಲಿ ಒಳ್ಳೆಯ ಸ್ಥಾನದಲ್ಲಿದೆ. ‘ಇರುಮುಡಿ’ ಮೊದಲನೇ ಸ್ಥಾನದಲ್ಲಿದ್ದರೆ ಎರಡನೇ ಸ್ಥಾನವನ್ನು ‘ಮೊದ ರಾತ್ರಿ’ ಪಡೆದುಕೊಂಡಿದೆ. ಈ ಚಿತ್ರವು 29 ಲಕ್ಷ ವೀಕ್ಷಣೆಗಳು ಹಾಗೂ 69 ಲಕ್ಷ ವೀಕ್ಷಣಾ ಗಂಟೆಗಳನ್ನು ಗಳಿಸುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಈ ಸಿನಿಮಾ ಹಾಸ್ಯ ಪ್ರಧಾನ ಕೌಟುಂಭಿಕ ಕತೆಯನ್ನು ಒಳಗೊಂಡಿದೆ.

‘ಇರುಮುಡಿ’ ಸಿನಿಮಾನಲ್ಲಿ ರವಿತೇಜ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಸಿನಿಮಾ ಅನ್ನು ಶಿವ ನಾರಾಯಣ್ ನಿರ್ದೇಶನ ಮಾಡಿದ್ದು, ಮೈತ್ರಿ ಮೂವಿ ಮೇಕರ್ಸ್ ಸಿನಿಮಾ ನಿರ್ಮಾಣ ಮಾಡಿದೆ. ಸಿನಿಮಾನಲ್ಲಿ ಪ್ರಿಯಾ ಭವಾನಿ ನಾಯಕಿಯಾಗಿ ನಟಿಸಿದ್ದಾರೆ. ಸಾಯಿ ಕುಮಾರ್ ಸಹ ಪ್ರಮುಖವಾದ ಪಾತ್ರದಲ್ಲಿ ನಟನೆ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us