ಹೊಸ ಶೋ ಮೂಲಕ ಬರ್ತಿದ್ದಾರೆ ರೋಹಿತ್ ಶರ್ಮಾ, ಅಜಯ್ ದೇವಗನ್, ಮಾಧುರಿ ದೀಕ್ಷಿತ್

ಕ್ರಿಕೆಟಿಗ ರೋಹಿತ್ ಶರ್ಮಾ ಸೋನಿ ನೆಟ್‌ವರ್ಕ್ ಮೂಲಕ ಕಿರುತೆರೆಗೆ ಎಂಟ್ರಿ ನೀಡುತ್ತಿದ್ದಾರೆ. ಇದೇ ವೇಳೆ ಅಜಯ್ ದೇವಗನ್ 'ಕ್ರೈಮ್ ಪೆಟ್ರೋಲ್ 2026' ನಿರೂಪಿಸಲಿದ್ದು, ಮಾಧುರಿ ದೀಕ್ಷಿತ್ ಮತ್ತು ನಟಿ ಸಮಂತಾ ಕೂಡ ಸೋನಿಯ ಹೊಸ ವಿವಿಧ ಶೋಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಮಿತಾಭ್ ಬಚ್ಚನ್ ಅವರು ಕೌನ್ ಬನೇಗಾ ಕರೋಡ್ಪತಿ ಶೋ ನಡೆಸಿಕೊಡಲಿದ್ದಾರೆ. 

ಹೊಸ ಶೋ ಮೂಲಕ ಬರ್ತಿದ್ದಾರೆ ರೋಹಿತ್ ಶರ್ಮಾ, ಅಜಯ್ ದೇವಗನ್, ಮಾಧುರಿ ದೀಕ್ಷಿತ್
ಸೋನಿ ಪ್ರೋಗ್ರಾಂ

Updated on: Aug 11, 2026 | 11:35 AM

ಮುಖ್ಯಾಂಶಗಳು

  • ಬರಲಿದೆ ರೋಹಿತ್ ಶರ್ಮಾ ಮನರಂಜನಾ ಶೋ
  • ಅಜಯ್ ದೇವಗನ್ ಮತ್ತು ಮಾಧುರಿ ದೀಕ್ಷಿತ್ ಶೋ
  • ದಕ್ಷಿಣ ಭಾರತೀಯ ಶೋಗಳ ವಿವರವೂ ಲಭ್ಯ

ಭಾರತೀಯ ಕ್ರಿಕೆಟ್  ಆಟಗಾರ ರೋಹಿತ್ ಶರ್ಮಾ ಈಗ ಕಿರುತೆರೆ ಲೋಕಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಕ್ರಿಕೆಟ್ ಮೈದಾನದಲ್ಲಿ ಮಿಂಚಿದ್ದ ಅವರು ಈಗ ಹೊಸ ಮನರಂಜನಾ ಶೋ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಸೋನಿ ನೆಟ್‌ವರ್ಕ್ ಮುಂಬರುವ ಶೋ ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ ರೋಹಿತ್ ಶರ್ಮಾ ಅವರ ಶೋ ಪ್ರಮುಖ ಆಕರ್ಷಣೆಯಾಗಿದೆ. ಅವರ ಶೋ ಯಾವ ರೀತಿ ಇರಲಿದೆ ಎಂಬ ಕುತೂಹಲ ಮೂಡಿದೆ.

ರೋಹಿತ್ ಶರ್ಮಾ ಮನರಂಜನಾ ಶೋ

ರೋಹಿತ್ ಶರ್ಮಾ ಅವರ ಹೊಸ ಶೋ ಬಗ್ಗೆ ಟೀಸರ್ ಈಗಾಗಲೇ ಬಿಡುಗಡೆಯಾಗಿದೆ. ಈ ಶೋ ಅತ್ಯಂತ ತಮಾಷೆಯಾಗಿರಲಿದೆ ಎಂದು ವರದಿಯಾಗಿದೆ. ಟೀಸರ್‌ನಲ್ಲಿ ಅಭಿಮಾನಿಗಳು ರೋಹಿತ್ ಅವರ ‘ಕೋಯಿ ಬಿ ಗಾರ್ಡನ್ ಮೇ ನಹಿ ಘುಮೇಗಾ’ ಎಂಬ ಪ್ರಸಿದ್ಧ ಸಂಭಾಷಣೆಯನ್ನು ಹೇಳುವಂತೆ ಕೇಳುತ್ತಾರೆ. ಇದರಿಂದ ರೋಹಿತ್ ಕೋಪಗೊಳ್ಳುವ ದೃಶ್ಯ ವೈರಲ್ ಆಗಿದೆ. ಶೋ ಬಗ್ಗೆ ಹೆಚ್ಚಿನ ವಿವರಗಳನ್ನು ಸೀಕ್ರೆಟ್ ಆಗಿಯೇ ಇಡಲಾಗಿದೆ.

ಅಜಯ್ ದೇವಗನ್ ಮತ್ತು ಮಾಧುರಿ ದೀಕ್ಷಿತ್

ಸೋನಿ ಸಂಸ್ಥೆಯು ‘ಕ್ರೈಮ್ ಪೆಟ್ರೋಲ್ 2026’ ಶೋಗೆ ನಟ ಅಜಯ್ ದೇವಗನ್ ಅವರನ್ನು ನಿರೂಪಕರನ್ನಾಗಿ ಆಯ್ಕೆ ಮಾಡಿದೆ. ಈ ಕಾರ್ಯಕ್ರಮವು ನೈಜ ಅಪರಾಧ ಕಥೆಗಳನ್ನು ಆಧರಿಸಿದೆ. ಇನ್ನು ಮರಾಠಿ ಭಾಷೆಯ ‘ಕೋನ್ ಹೊಣಾರ್ ಕರೋಡ್‌ಪತಿ’ ಶೋಗೆ ನಟಿ ಮಾಧುರಿ ದೀಕ್ಷಿತ್ ನಿರೂಪಣೆ ಮಾಡಲಿದ್ದಾರೆ. ಇವರ ಜೊತೆಗೆ ‘ಕೆಬಿಸಿ ಸೀಸನ್ 18’ ಕೂಡ ಆರಂಭವಾಗುತ್ತಿದೆ. ಇದಕ್ಕೆ ಬಿಗ್ ಬಿ ನಿರೂಪಕ.

ದಕ್ಷಿಣ ಭಾರತೀಯ ಶೋಗಳು

ದಕ್ಷಿಣ ಭಾರತದ ವೀಕ್ಷಕರಿಗಾಗಿ ವಿಶೇಷ ಶೋಗಳನ್ನು ರೂಪಿಸಲಾಗಿದೆ. ‘ಮಾಸ್ಟರ್ ಚೆಫ್ ತಮಿಳು’ ಶೋನಲ್ಲಿ ನಟಿ ಸಮಂತಾ ರುತ್ ಪ್ರಭು ಕಾಣಿಸಿಕೊಳ್ಳಲಿದ್ದಾರೆ. ತಮಿಳು ಐಡಲ್ ಸಂಗೀತ ಕಾರ್ಯಕ್ರಮಕ್ಕೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ತೀರ್ಪುಗಾರರಾಗಿರಲಿದ್ದಾರೆ. ಭಾರತೀಯ ಗೇಮ್ ಶೋಗೆ ಭಾರತಿ ಸಿಂಗ್ ನಿರೂಪಣೆ ಮಾಡಲಿದ್ದಾರೆ. ‘ಸ್ಕ್ಯಾಮ್ 2010’ ವೆಬ್ ಸೀರೀಸ್ ಕೂಡ ಸೋನಿ ಲಿವ್‌ನಲ್ಲಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us