ನಟ ರೂಪೇಶ್ ಶೆಟ್ಟಿ ಅವರು ‘ಬಿಗ್ ಬಾಸ್ ಕನ್ನಡ ಒಟಿಟಿ’ (Bigg Boss Kannada OTT) ಶೋನಲ್ಲಿ ತಮ್ಮದೇ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಯಾರ ಜೊತೆಗೂ ಅನಗತ್ಯ ಕಿರಿಕ್ ಮಾಡಿಕೊಳ್ಳದೇ ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ. ಟಾಸ್ಕ್ ವಿಚಾರದಲ್ಲೂ ಅವರು ಹಿಂದೆ ಬಿದ್ದಿಲ್ಲ. ಪ್ರತಿ ವಾರ ಅವರು ವೀಕ್ಷಕರಿಂದ ವೋಟ್ ಪಡೆದು ಬಚಾವ್ ಆಗುತ್ತಿದ್ದಾರೆ. ನಟಿ ಸಾನ್ಯಾ ಐಯ್ಯರ್ (Sanya Iyer) ಜೊತೆಗೆ ಅವರಿಗೆ ಉತ್ತಮ ಬಾಂಧವ್ಯ ಬೆಳೆದಿದೆ. ಈ ಬಗ್ಗೆ ಅವರು ಪರಸ್ಪರ ಮಾತನಾಡಿಕೊಂಡಿದ್ದಾರೆ. ‘ಒಂದು ವೇಳೆ ನಿನ್ನ ಸಪೋರ್ಟ್ ಇಲ್ಲದೇ ಇದ್ದಿದ್ದರೆ ನಾನು ಕಳೆದುಹೋಗುತ್ತಿದ್ದೆ. ನನಗೆ ತುಂಬ ಕಷ್ಟ ಆಗುತ್ತಿತ್ತು. ನೀನು ನನಗೆ ಫ್ರೆಂಡ್ ಆದೆ. ಅದಕ್ಕೆ ಧನ್ಯವಾದ’ ಎಂದು ರೂಪೇಶ್ (Roopesh Shetty) ಹೇಳಿದ್ದಾರೆ. ಅದನ್ನು ಕೇಳಿ ಸಾನ್ಯಾ ಐಯ್ಯರ್ ಅವರಿಗೆ ಖುಷಿ ಆಗಿದೆ.
ತುಂಬ ಆತ್ಮೀಯವಾಗಿ ಕುಳಿತುಕೊಂಡು ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಅಯ್ಯರ್ ಮಾತನಾಡಿದ್ದಾರೆ. ಮನದ ಮಾತುಗಳನ್ನು ರೂಪೇಶ್ ಓಪನ್ ಆಗಿ ಹೇಳಿದ್ದಾರೆ. ‘ನನಗೆ ಹುಡುಗರು ತುಂಬ ಫ್ರೆಂಡ್ಸ್ ಇದ್ದಾರೆ. ಆದರೆ ಹುಡುಗಿಯರಲ್ಲಿ ಯಾರೂ ಇಲ್ಲ. ನಿನ್ನ ಲಿಸ್ಟ್ನಲ್ಲಿ ನನ್ನನ್ನು ಮೊದಲಿಗೆ ಇಡು. ಯಾವುದೇ ಸಂದರ್ಭದಲ್ಲಿ ನಿನಗೆ ಸಹಾಯ ಬೇಕೆಂದರೂ ನನಗೆ ಫೋನ್ ಮಾಡು. ಎಷ್ಟೇ ಬ್ಯುಸಿ ಇದ್ದರೂ ನಾನು ಬರ್ತೀನಿ’ ಎಂದು ರೂಪೇಶ್ ಹೇಳಿದ್ದಾರೆ.
ಇಷ್ಟೆಲ್ಲ ಕೇಳಿಸಿಕೊಂಡು ಸಾನ್ಯಾ ಐಯ್ಯರ್ ಸುಮ್ಮನಾಗಿಲ್ಲ. ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ‘ನಿನ್ನ ಜೊತೆ ಇದ್ದಾಗ ನಾನು ಬೇರೆಯದೇ ರೀತಿಯ ಕಂಫರ್ಟ್ ಝೋನ್ನಲ್ಲಿ ಇರುತ್ತೇನೆ. ನಾನು ಏನು ಹೇಳಿದರೂ ನೀನು ಜಡ್ಜ್ ಮಾಡಲ್ಲ ಅಂತ ನನಗೆ ಗೊತ್ತು’ ಎಂದಿದ್ದಾರೆ ಸಾನ್ಯಾ. ‘ನಾನು ಯಾವುದೇ ಹುಡುಗಿಯ ಮೇಲೆ ಅಪ್ಪಿತಪ್ಪಿಯೂ ಕೈ ಹಾಕಲ್ಲ. ನಂದಿನಿ ಮೈ ಸ್ವಲ್ಪ ಟಚ್ ಆದರೂ ನಾನು ಸಾರಿ ಎನ್ನುತ್ತೇನೆ’ ಎಂದಿದ್ದಾರೆ ರೂಪೇಶ್ ಶೆಟ್ಟಿ.
ಹಲವು ಟ್ವಿಸ್ಟ್ಗಳಿಗೆ ‘ಬಿಗ್ ಬಾಸ್ ಒಟಿಟಿ ಕನ್ನಡ’ ಶೋ ಕಾರಣ ಆಗುತ್ತಿದೆ. ನಾಲ್ಕನೇ ವಾರದಲ್ಲಿ ಡಬಲ್ ಎಲಿಮಿನೇಷನ್ ನಡೆದಿದೆ. ಅಕ್ಷತಾ ಕುಕ್ಕಿ ಮತ್ತು ಚೈತ್ರಾ ಹಳ್ಳಿಕೇರಿ ಅವರು ಔಟ್ ಆಗಿದ್ದಾರೆ. ಇನ್ನುಳಿದ ಕೆಲವೇ ದಿನಗಳಲ್ಲಿ ಆಟದ ರಂಗು ಇನ್ನಷ್ಟು ಹೆಚ್ಚಲಿದೆ. 6ನೇ ವಾರಕ್ಕೆ ಈ ಶೋ ಮುಗಿಯಲಿದೆ. ಇದರಲ್ಲಿ ಇರುವ ಕೆಲವರಿಗೆ ‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲಿ ಸ್ಪರ್ಧಿಸುವ ಅವಕಾಶ ಸಿಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.