ಸೆರ್ಬಿಯಾದ ಪಬ್​ನಲ್ಲಿ ‘ಊ ಅಂಟಾವ ಊಹು ಅಂಟಾವ’ ಎಂದು ಸೊಂಟ ಕುಣಿಸಿದ ಸಮಂತಾ-ವರುಣ್ ಧವನ್

Samantha-Varun: ನಟಿ ಸಮಂತಾ ಹಾಗೂ ವರುಣ್ ಧವನ್, ಸೈಬೀರಿಯಾದ ಕ್ಲಬ್ ಒಂದರಲ್ಲಿ ಊ ಅಂಟಾವ ಊಹು ಅಂಟಾವ ಹಾಡಿಗೆ ಕುಣಿದಿದ್ದಾರೆ.

ಸೆರ್ಬಿಯಾದ ಪಬ್​ನಲ್ಲಿ ಊ ಅಂಟಾವ ಊಹು ಅಂಟಾವ ಎಂದು ಸೊಂಟ ಕುಣಿಸಿದ ಸಮಂತಾ-ವರುಣ್ ಧವನ್
ಸಮಂತಾ-ವರುಣ್

Updated on: Jun 10, 2023 | 3:48 PM

ನಟಿ ಸಮಂತಾ (Samantha) ಹಾಗೂ ನಾಗ ಚೈತನ್ಯ (Naga Chaitanya) ವಿಚ್ಛೇದನದ ಬಳಿಕ ಸಮಂತಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ನಿಂದನೆ, ಸುಳ್ಳು ಆರೋಪಗಳ ದಾಳಿ ನಡೆದಿತ್ತು. ಆಗ ತೀವ್ರ ಖಿನ್ನತೆಯಲ್ಲಿದ್ದ ಸಮಂತಾ ಕಮ್ ಬ್ಯಾಕ್ ಮಾಡಿದ್ದು ಪುಷ್ಪ (Pushpa) ಸಿನಿಮಾದ ಐಟಂ ಹಾಡು ಊ ಅಂಟಾವ ಊಹು ಅಂಟಾವ ಮೂಲಕ. ಸಿನಿಮಾ ಬಿಡುಗಡೆಗೆ ಮುನ್ನ ಯೂಟ್ಯೂಬ್​ನಲ್ಲಿ ಬಿಡುಗಡೆ ಆದ ಆ ಹಾಡು ಸಿನಿಮಾಕ್ಕೆ ದೊಡ್ಡ ಮಟ್ಟಿನ ಪ್ರಚಾರ ಒದಗಿಸುವ ಜೊತೆಗೆ ಸಮಂತಾ ದ್ವೇಷಿಗಳ ಹೊಟ್ಟೆಕಿಚ್ಚಿಗೆ ಇನ್ನಷ್ಟು ತುಪ್ಪ ಸುರಿದಿತ್ತು.

ಪುಷ್ಪ ಸಿನಿಮಾದ ಆ ಹಾಡು ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿಯೂ ದೊಡ್ಡ ಹಿಟ್ ಆಗಿದೆ. ಇದೀಗ ಸಮಂತಾ ವೆಬ್ ಸರಣಿಯೊಂದರ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳಿದ್ದು ಅಲ್ಲಿ ತಮ್ಮ ಸಹನಟರೊಟ್ಟಿಗೆ ಪಬ್ ಒಂದಕ್ಕೆ ಹೋದಾಗ ಅಲ್ಲಿಯೂ ಊ ಅಂಟಾವ ಮಾಮ ಊಹು ಅಂಟಾವ ಹಾಡು ಮೊಳಗಿದೆ, ತಮ್ಮ ಸಹನಟರೊಟ್ಟಿಗೆ ಹಾಡಿಗೆ ಸೊಂಟ ಬಳುಕಿಸಿದ್ದಾರೆ ನಟಿ ಸಮಂತಾ.

ಸಿಟಾಡೆಲ್ ವೆಬ್ ಸರಣಿಯ ಚಿತ್ರೀಕರಣಕ್ಕಾಗಿ ನಟ ವರುಣ್ ಧವನ್ ಹಾಗೂ ಇತರರೊಡನೆ ಸೆರ್ಬಿಯಾ ನಟಿ ಸಮಂತಾ ಹೋಗಿದ್ದಾರೆ. ಚಿತ್ರೀಕರಣದ ಬಿಡುವಿನ ವೇಳೆ ಸ್ಥಳೀಯ ಪಬ್ ಒಂದಕ್ಕೆ ಮೋಜು ಮಾಡಲು ಹೋಗಿದ್ದ ವೇಳೆ ಅಲ್ಲಿ ಸಮಂತಾರ ಊ ಅಂಟಾವ ಊಹು ಅಂಟಾವ ಹಾಡನ್ನು ಡಿಜೆ ಬಾರಿಸಿದ್ದಾನೆ. ಸಮಂತಾ, ವರುಣ್ ಧವನ್ ಹಾಗೂ ಇತರರು ಹಾಡಿಗೆ ಸಖತ್ ಸ್ಟೆಪ್​ಗಳನ್ನು ಹಾಕಿದ್ದಾರೆ. ಆ ವಿಡಿಯೋ ಇದೀಗ ವೈರಲ್ ಆಗಿದೆ. ಕಪ್ಪು ಬಣ್ಣದ ಗ್ಲಾಮರಸ್ ಡ್ರೆಸ್ ಧರಿಸಿ ಕೈಯಲ್ಲಿ ಬಿಯರ್ ಬಾಟಲಿ ಹಿಡಿದು ಸ್ಟೆಪ್​ ಹಾಕಿದ್ದಾರೆ ನಟಿ ಸಮಂತಾ. ವರುಣ್ ಧವನ್ ಸಹ ಖುಷಿಯಾಗಿ ಊ ಅಂಟಾವ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಸಮಂತಾ-ವರುಣ್ ಜೊತೆಗೆ ಚಿತ್ರತಂಡದ ಇನ್ನೂ ಕೆಲವು ಸದಸ್ಯರು ಪಬ್​ನಲ್ಲಿ ಹಾಜರಿದ್ದು ಅವರೂ ಸಹ ಹಾಡಿಗೆ ಸ್ಟೆಪ್ ಹಾಕಿದ್ದಾರೆ.

ಇದನ್ನೂ ಓದಿ:Samantha: ಟರ್ಕಿಯಲ್ಲಿ ಸಮಂತಾ ರುತ್​ ಪ್ರಭು ಮೋಜು ಮಸ್ತಿ; ಐಷಾರಾಮಿ ಜೀವನದ ಫೋಟೋ ಹಂಚಿಕೊಂಡ ನಟಿ

ಸಮಂತಾ ಹಾಗೂ ವರುಣ್ ಧವನ್ ಸಿಟಾಡೆಲ್ ಹೆಸರಿನ ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ನಟಿಸಿರುವ ಇಂಗ್ಲೀಷ್ ವೆಬ್ ಸರಣಿಯ ಹಿಂದಿ ಅವತರಣಿಕೆ ಇದಾಗಿದೆ. ಇಂಗ್ಲೀಷ್​ನಲ್ಲಿ ರೂಸ್ಸೋ ಬ್ರದರ್ಸ್ ಈ ವೆಬ್ ಸರಣಿಗೆ ಚಿತ್ರಕತೆ ಬರೆದು ನಿರ್ಮಾಣ ಮಾಡಿದ್ದರೆ ಹಿಂದಿಯಲ್ಲಿ ರಾಜ್ ಮತ್ತು ಡಿಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ವೆಬ್ ಸರಣಿಯು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಲಿದೆ.

ಸಿಟಾಡೆಲ್ ಹೊರತಾಗಿ ಸಮಂತಾ ಪ್ರಸ್ತುತ ವಿಜಯ್ ದೇವರಕೊಂಡ ಜೊತೆಗೆ ಖುಷಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾದ ಬಳಿಕ ಇಂಗ್ಲೀಷ್​ ಸಿನಿಮಾ ಒಂದರಲ್ಲಿ ನಟಿಸಲಿದ್ದು, ಅರೇಂಜ್​ಮೆಂಟ್ಸ್ ಆಫ್ ಲವ್ ಕಾದಂಬರಿಯನ್ನು ಆಧರಿಸಿದ ಸಿನಿಮಾ ಅದಾಗಿರಲದೆ. ಅದರ ಬಳಿಕ ಬಾಲಿವುಡ್​ನಲ್ಲಿ ಒಂದು ಮಹಿಳಾ ಪ್ರಧಾನ ಸಿನಿಮಾದಲ್ಲಿ ಸಮಂತಾ ನಟಿಸಲಿದ್ದಾರೆ ಆ ಸಿನಿಮಾವನ್ನು ಬಾಲಿವುಡ್ ನಟಿ ತಾಪ್ಸಿ ಪನ್ನು ನಿರ್ಮಾಣ ಮಾಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:10 pm, Sat, 10 June 23