Updated on:Jun 06, 2023 | 11:27 AM
ನಟಿ ಸಮಂತಾ ರುತ್ ಪ್ರಭು ಅವರು ಈಗ ‘ಖುಷಿ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾದ ಶೂಟಿಂಗ್ ಸಲುವಾಗಿ ಅವರು ಟರ್ಕಿಗೆ ತೆರಳಿದ್ದಾರೆ. ಈ ಚಿತ್ರಕ್ಕೆ ವಿಜಯ್ ದೇವರಕೊಂಡ ಹೀರೋ.
‘ಖುಷಿ’ ಸಿನಿಮಾದ ಶೂಟಿಂಗ್ ಬಿಡುವಿನಲ್ಲಿ ಸಮಂತಾ ಅವರು ಟರ್ಕಿಯಲ್ಲಿ ಹಾಯಾಗಿ ಕಾಲ ಕಳೆಯುತ್ತಿದ್ದಾರೆ. ತಮ್ಮ ಲೈಫ್ ಸ್ಟೈಲ್ ಹೇಗಿದೆ ಎಂಬುದನ್ನು ತಿಳಿಸುವಂತಹ ಕೆಲವು ಫೋಟೋಗಳನ್ನು ಅವರು ಹೊಂಚಿಕೊಂಡಿದ್ದಾರೆ.
ಸಮಂತಾಗೆ ಪುಸ್ತಕಗಳನ್ನು ಓದುವ ಹವ್ಯಾಸ ಇದೆ. ಕಾರಿನಲ್ಲಿ ಮಲಗಿಕೊಂಡು ಅವರು ಪುಸ್ತಕ ಓದುತ್ತಿರುವ ರೀತಿಯಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ.
ಸಮಂತಾ ಅವರಿಗೆ ಈ ಹಿಂದೆ ಅನಾರೋಗ್ಯ ಕಾಡಿತ್ತು. ಈಗ ಅವರು ಸಂಪೂರ್ಣ ಗುಣಮುಖರಾಗಿದ್ದಾರೆ. ‘ಶಾಕುಂತಲಂ’ ಸಿನಿಮಾ ಸೋಲನ್ನು ಮರೆತು ಮುಂದಿನ ಚಿತ್ರದ ಕೆಲಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ.
ಟರ್ಕಿಯಲ್ಲಿನ ಐಷಾರಾಮಿ ಹೋಟೆಲ್ನಲ್ಲಿ ಸಮಂತಾ ರುತ್ ಪ್ರಭು ಅವರು ಉಳಿದುಕೊಂಡಿದ್ದಾರೆ. ಅಲ್ಲಿ ತಮ್ಮ ಬೆಡ್ ರೂಂ ಫೋಟೋವನ್ನು ಕೂಡ ಸಮಂತಾ ಹಂಚಿಕೊಂಡಿದ್ದಾರೆ.
Published On - 11:17 am, Tue, 6 June 23