ತಮ್ಮ ಜೀವನದ ಅತ್ಯಂತ ಟಫ್ ಪಾತ್ರ ಯಾವುದು ಎಂಬುದನ್ನು ವಿವರಿಸಿದ ಸಮಂತಾ

|

Updated on: Mar 18, 2024 | 2:18 PM

ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿರುವ ಸಮಂತಾ ಅವರು ಈಗ ವಿಶ್ರಾಂತಿ ಪಡೆಯುತ್ತಿದ್ದಾರೆ. ಮತ್ತೆ ಸಿನಿಮಾಗಳಿಗೆ ಅವರು ಕಂಬ್ಯಾಕ್ ಮಾಡಬೇಕಿದೆ. ಇತ್ತೀಚೆಗೆ ಇಂಡಿಯಾ ಟುಡೆ ಕಾನ್ಕ್ಲೇವ್ 2024ರಲ್ಲಿ ಭಾಗವಹಿಸಿದ್ದ ಸಮಂತಾ, ತಮ್ಮ ವೃತ್ತಿಜೀವನದಲ್ಲಿ ಅತ್ಯಂತ ಕಷ್ಟಕರವಾದ ಪಾತ್ರದ ಬಗ್ಗೆ ಮಾತನಾಡಿದ್ದಾರೆ.

ತಮ್ಮ ಜೀವನದ ಅತ್ಯಂತ ಟಫ್ ಪಾತ್ರ ಯಾವುದು ಎಂಬುದನ್ನು ವಿವರಿಸಿದ ಸಮಂತಾ
ಸಮಂತಾ
Follow us on

ಹಲವು ವರ್ಷಗಳಿಂದ ದಕ್ಷಿಣ ಭಾರತದಲ್ಲಿ ನಟಿ ಸಮಂತಾ ಟಾಪ್ ಹೀರೋಯಿನ್ ಆಗಿದ್ದಾರೆ. ಅವರು ‘ಯೇ ಮಾಯ ಚೇಸಾವೆ’ ಸಿನಿಮಾ (Ye Maaya Chesave) ಮೂಲಕ ತೆಲುಗು ಚಿತ್ರರಂಗಕ್ಕೆ ಪರಿಚಯಗೊಂಡರು. ತಮ್ಮ ಸೌಂದರ್ಯ ಮತ್ತು ನಟನೆಯಿಂದ ಸಾಕಷ್ಟು ಅಭಿಮಾನಿಗಳನ್ನು ಪಡೆದಿದ್ದಾರೆ. ವೈಯಕ್ತಿಕ ಜೀವನದಲ್ಲಿ ನಡೆದ ಘಟನೆಗಳಿಂದ ಅವರ ಜೀವನವು ತಿರುವು ಪಡೆದಿದೆ. ಈಗ ಅವರು ಸಿನಿಮಾಗಳಿಂದ ದೂರ ಉಳಿದಿದ್ದಾರೆ. ವಿಚ್ಛೇನದ ಹಾಗೂ ಮಯೋಸೈಟಿಸ್ ಕಾಯಿಲೆಯಿಂದ ಆದ ತೊಂದರೆ ವಿರುದ್ಧ ಸೆಣಸಾಡುತ್ತಿರುವ ಅವರು ಮತ್ತೆ ಬೆಳ್ಳಿತೆರೆಯಲ್ಲಿ ಮಿಂಚಲು ಪ್ರಯತ್ನಿಸುತ್ತಿದ್ದಾರೆ. ಈಗ ಅವರುಸಿಟಾಡೆಲ್ ಸೀರಿಸ್ ಬಗ್ಗೆ ಮಾತನಾಡಿದ್ದಾರೆ.

ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿರುವ ಸಮಂತಾ ಅವರು ಈಗ ವಿಶ್ರಾಂತಿ ಪಡೆಯುತ್ತಿದ್ದಾರೆ. ಮತ್ತೆ ಸಿನಿಮಾಗಳಿಗೆ ಅವರು ಕಂಬ್ಯಾಕ್ ಮಾಡಬೇಕಿದೆ. ಇತ್ತೀಚೆಗೆ ಇಂಡಿಯಾ ಟುಡೆ ಕಾನ್ಕ್ಲೇವ್ 2024ರಲ್ಲಿ ಭಾಗವಹಿಸಿದ್ದ ಸಮಂತಾ, ತಮ್ಮ ವೃತ್ತಿಜೀವನದಲ್ಲಿ ಅತ್ಯಂತ ಕಷ್ಟಕರವಾದ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಆ ಪಾತ್ರದ ಬಗ್ಗೆ ಅವರು ಇನ್ನೂ ಹೆಮ್ಮೆಪಡುತ್ತೇನೆ ಎಂದು ಹೇಳಿದ್ದಾರೆ.

‘ಸಿಟಾಡೆಲ್’ ಶೂಟಿಂಗ್ ವೇಳೆ ಅವರು ದೈಹಿಕವಾಗಿ ದುರ್ಬಲರಾಗಿದ್ದರಂತೆ. ‘ಸಿಟಾಡೆಲ್ ಸೀರಿಸ್​ನಲ್ಲಿ ನಾನು ನಿರ್ವಹಿಸಿದ ಪಾತ್ರ ನನ್ನ ಜೀವನದ ಅತ್ಯಂತ ಕಷ್ಟಕರವಾದ ಪಾತ್ರ. ಆ ಸರಣಿಯ ಶೂಟಿಂಗ್ ವೇಳೆ ನಾನು ದುರ್ಬಲನಾಗಿದ್ದೆ. ಹೀಗಾಗಿ ಸಿಟಾಡೆಲ್ ಸೀರೀಸ್ ಈಗಾಗಲೇ ಸಕ್ಸಸ್ ಆಗಿದೆ ಅನ್ನಿಸುತ್ತಿದೆ. ಕಠಿಣ ಪರಿಸ್ಥಿತಿಯಲ್ಲೂ ಆ ಸರಣಿಯನ್ನು ಪೂರ್ಣಗೊಳಿಸಿದ್ದೇನೆ. ಆ ಸರಣಿಯನ್ನು ಮುಗಿಸುತ್ತೇನೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ. ನಾನು ಮಾಡಿದ ಪಾತ್ರದ ಬಗ್ಗೆ ಹೆಮ್ಮೆ ಇದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ಆ ಡ್ಯಾನ್ಸ್​ ಮಾಡುವಾಗ ಕಂಫರ್ಟ್​ ಇರಲಿಲ್ಲ’: ಈಗ ಬಾಯ್ಬಿಟ್ಟ ಸಮಂತಾ

‘ಸಿಟಾಡೆಲ್’ ಸೀರಿಸ್ ಶೂಟಿಂಗ್ ಮಯೋಸೈಟಿಸ್ ಇರುವುದು ಪತ್ತೆಯಾದ ಹೊರತಾಗಿಯೂ ಅವರು ಈ ಸೀರಿಸ್ ಮಾಡಿದ್ದರು. ‘ಖುಷಿ’ ಸಿನಿಮಾದ ಶೂಟಿಂಗ್ ಕೂಡ ಅರ್ಧಕ್ಕೆ ನಿಂತಿತ್ತು. ಅದನ್ನು ಅವರು ಪೂರ್ಣಗೊಳಿಸಿದ್ದರು. ‘ಸಿಟಾಡೆಲ್’ ಸರಣಿಯನ್ನು ರಾಜ್ ಮತ್ತು ಡಿಕೆ ನಿರ್ದೇಶಿಸಿದ್ದಾರೆ. ಇದರಲ್ಲಿ ಬಾಲಿವುಡ್ ಹೀರೋ ವರುಣ್ ಧವನ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇತ್ತೀಚೆಗಷ್ಟೇ ಈ ಸರಣಿಯ ಡಬ್ಬಿಂಗ್ ಕೆಲಸ ಮುಗಿದಿದೆ. ಈ ಸರಣಿಯು ಶೀಘ್ರದಲ್ಲೇ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗಲಿದೆ. ಇದು ಇಂಗ್ಲಿಷ್ ‘ಸಿಟಾಡೆಲ್​’ನ ಇಂಡಿಯನ್ ವರ್ಷನ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ