Sanya Malhotra: ಶೂಟಿಂಗ್​ ಸೆಟ್​ನಿಂದ ‘ಕದ್ದ’ ಸೀರೆಯನ್ನು ಫ್ರೆಂಡ್ ಮದುವೆಗೆ ಉಟ್ಟುಕೊಂಡು ಹೋಗಿದ್ದ ಖ್ಯಾತ ನಟಿ!

| Updated By: shivaprasad.hs

Updated on: Dec 29, 2021 | 11:57 AM

Meenakshi Sundareshwar: ಸಾನ್ಯಾ ಮಲ್ಹೋತ್ರಾ ಸದ್ಯ ಬಾಲಿವುಡ್​ನಲ್ಲಿ ಪಾತ್ರಗಳ ಮೂಲಕವೇ ಗುರುತಿಸಿಕೊಳ್ಳುತ್ತಿರುವ ಪ್ರತಿಭಾವಂತೆ. ಇದೀಗ ಅವರು ಇತ್ತೀಚಿನ ಚಿತ್ರದಲ್ಲಿನ ಅಚ್ಚರಿಯ ಗುಟ್ಟೊಂದನ್ನು ಹಂಚಿಕೊಂಡಿದ್ದಾರೆ.

Sanya Malhotra: ಶೂಟಿಂಗ್​ ಸೆಟ್​ನಿಂದ ‘ಕದ್ದ’ ಸೀರೆಯನ್ನು ಫ್ರೆಂಡ್ ಮದುವೆಗೆ ಉಟ್ಟುಕೊಂಡು ಹೋಗಿದ್ದ ಖ್ಯಾತ ನಟಿ!
‘ಮೀನಾಕ್ಷಿ ಸುಂದರೇಶ್ವರ್’ ಚಿತ್ರದಲ್ಲಿ ಸಾನ್ಯಾ ಮಲ್ಹೋತ್ರಾ
Follow us on

ಸಾನ್ಯಾ ಮಲ್ಹೋತ್ರಾ.. ಸದ್ಯ ಬಾಲಿವುಡ್​ನಲ್ಲಿ ಪಾತ್ರಗಳ ಮುಖಾಂತರ ಜನಮನ ಗೆಲ್ಲುತ್ತಿರುವ ಅಪರೂಪದ ಪ್ರತಿಭೆ. ‘ದಂಗಲ್’ (Dangal), ‘ಫೋಟೋಗ್ರಾಫ್’ (Photograph) ಸೇರಿದಂತೆ ಈ ನಟಿಯ ಚಿತ್ರಗಳು ವಿಮರ್ಶಕರು ಹಾಗೂ ಅಭಿಮಾನಿಗಳಿಗೆ ಫೇವರಿಟ್. ಇತ್ತೀಚೆಗೆ ನಟಿಯ ‘ಮೀನಾಕ್ಷಿ ಸುಂದರೇಶ್ವರ್’ (Meenakshi Sundareshwar) ಚಿತ್ರ ಓಟಿಟಿಯಲ್ಲಿ ತೆರೆಕಂಡಿತ್ತು. ನೇರವಾಗಿ ನೆಟ್​ಫ್ಲಿಕ್ಸ್ (Netflix)​ ಮೂಲಕ ಬಿಡುಗಡೆಯಾದ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆಗಳೂ ವ್ಯಕ್ತವಾಗಿದ್ದವು. ಆ ಚಿತ್ರದಲ್ಲಿ ಸಂಪೂರ್ಣ ಸಾಂಪ್ರದಾಯಿಕ ಹುಡುಗಿಯಾಗಿ ಸಾನ್ಯಾ (Sanya Malhotra) ಕಾಣಿಸಿಕೊಂಡಿದ್ದರು. ಕಾಟನ್ ಹಾಗೂ ಸಿಲ್ಕ್ ಸೀರೆಗಳನ್ನುಟ್ಟು ಮಿಂಚಿದ್ದ ಅವರು, ನಂತರದಲ್ಲಿ ಆ ಸೀರೆಗಳ ಮೇಲೆ ಪ್ರೀತಿ ಮೂಡಿದ್ದನ್ನು ಇತ್ತೀಚೆಗೆ ಹಂಚಿಕೊಂಡಿದ್ದಾರೆ. ಅದು ಸೆಟ್​ನಿಂದ ಸೀರೆಯನ್ನು ‘ಕದಿಯುವ’ ಮಟ್ಟಕ್ಕೂ ಹೋಯಿತಂತೆ. ಇತ್ತೀಚಿಗೆ ಸಾನ್ಯಾ ಮಾತನಾಡುತ್ತಾ ಈ ಮಜವಾದ ಸಂಗತಿಯನ್ನು ಹಂಚಿಕೊಂಡಿದ್ದಾರೆ.

2021ರ ಅತ್ಯುತ್ತಮ ನೆನಪುಗಳನ್ನು ಹಂಚಿಕೊಳ್ಳುತ್ತಾ ಸಾನ್ಯಾ ಹಲವು ವಿಚಾರಗಳನ್ನು ತೆರೆದಿಟ್ಟಿದ್ದಾರೆ. ‘‘ಮೊದಲ ಲಾಕ್​ಡೌನ್ ಮುಗಿದ ನಂತರ ಮೀನಾಕ್ಷಿ ಸುಂದರೇಶ್ವರ್ ಚಿತ್ರೀಕರಣ ಆರಂಭಿಸಿದೆವು. ಮತ್ತೆ ಕ್ಯಾಮೆರಾ ಮುಂದೆ ನಿಲ್ಲುವುದಕ್ಕೆ ಬಹಳ ಖುಷಿಯಿತ್ತು. ಮೀನಾಕ್ಷಿಯಾಗಿ ತಯಾರಾಗುವುದಕ್ಕೆ ಹಾಗೂ ಆ ಸೀರೆಗಳನ್ನು ಉಡುವುದನ್ನು ಬಹಳ ಇಷ್ಟಪಡುತ್ತಿದ್ದೆ’’ ಎಂದಿದ್ದಾರೆ ಸಾನ್ಯಾ. ಮುಂದುವರೆದು ಮಾತನಾಡಿದ ಅವರು, ‘‘ನನ್ನ ಬಳಿ ಈಗಲೂ ಆ ಸೀರೆಗಳಿವೆ. ಅವುಗಳನ್ನು ಸೆಟ್​ನಿಂದ ‘ಕದ್ದಿದ್ದೆ’. ಹೆಲ್ಲೋ ನೆಟ್​​ಫ್ಲಿಕ್ಸ್! ಅವುಗಳಲ್ಲಿ ಒಂದನ್ನು ನನ್ನ ಸ್ನೇಹಿತೆಯ ಮದುವೆಗೂ ಉಟ್ಟಿದ್ದೆ’’ ಎಂದು ಸಾನ್ಯಾ ನಕ್ಕಿದ್ದಾರೆ. ಸೀರೆಗಳ ಮೇಲಿನ ಪ್ರೀತಿಯನ್ನೂ ಹಾಗೂ ಶೂಟಿಂಗ್​ ಸೀರೆಗಳನ್ನು ಬಳಸಿದ ಪರಿಯನ್ನು ಸಾನ್ಯಾ ತಮಾಷೆಯಾಗಿ ಹೀಗೆ ಹೇಳಿದ್ದಾರೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲವಲ್ಲ!

ವಿವೇಕ್ ಸೋನಿ ನಿರ್ದೇಶನದ ‘ಮೀನಾಕ್ಷಿ ಸುಂದರೇಶ್ವರ್’ನಲ್ಲಿ ಮಧುರೈ ಮೂಲದ ಯುವತಿಯ ಪಾತ್ರದಲ್ಲಿ ಸಾನ್ಯಾ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಒಪ್ಪಿಕೊಂಡಿದ್ದರ ಕುರಿತು ಸಾನ್ಯಾ ಈ ಹಿಂದೆ ಪಿಟಿಐ ಜತೆ ಮಾತನಾಡಿದ್ದರು. ಸರಳವಾದ ಪ್ರೇಮ ಕತೆಗಳನ್ನು ನೋಡಲು ಬಯಸುತ್ತೇನೆ. ಈ ಚಿತ್ರದ ಸ್ಕ್ರಿಪ್ಟ್ ಕೇಳಿದಾಗ ಬಹಳ ಆಸಕ್ತಿ ಮೂಡಿತು ಎಂದು ಅವರು ಹೇಳಿದ್ದರು.

ಸನ್ಯಾ ಈಗ ‘ಸ್ಯಾಮ್ ಬಹದ್ದೂರ್ ಚಿತ್ರದಲ್ಲಿ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾನೆಕ್ಷಾ ಅವರ ಪತ್ನಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಮೇಘನಾ ಗುಲ್ಜಾರ್ ನಿರ್ದೇಶನದ ಚಿತ್ರದಲ್ಲಿ ಸ್ಯಾಮ್ ಮಾನೆಕ್ಷಾ ಪಾತ್ರದಲ್ಲಿ ವಿಕ್ಕಿ ಕೌಶಲ್ ನಟಿಸಿದ್ದಾರೆ. ಇದಲ್ಲದೇ ‘ಲವ್ ಹಾಸ್ಟೆಲ್’ ಎಂಬ ಕ್ರೈಮ್ ಥ್ರಿಲ್ಲರ್ ಸೇರಿದಂತೆ ಹಲವು ಚಿತ್ರಗಳು ಸಾನ್ಯಾ ಬತ್ತಳಿಕೆಯಲ್ಲಿವೆ.

ಇದನ್ನೂ ಓದಿ:

ಅಪ್ಪು ಇಲ್ಲದೇ ಕಳೆಯಿತು 2 ತಿಂಗಳು; ನೇತ್ರದಾನದ ಬಗ್ಗೆ ವಿಶೇಷ ಮಾಹಿತಿ ಹಂಚಿಕೊಂಡ ರಾಘಣ್ಣ

85 ಲಕ್ಷ ರೂ. ಕಾರಿನ ಬಗ್ಗೆ ಮಾತಾಡಿ ಕಣ್ಣೀರು ಹಾಕಿದ ಅಲ್ಲು ಅರ್ಜುನ್​; ವೇದಿಕೆಯಲ್ಲಿ ನಡೆದಿದ್ದೇನು?

Published On - 11:56 am, Wed, 29 December 21