ನಟ ಶಾರುಖ್ ಖಾನ್ (Shah Rukh Khan) ಅವರಿಗೆ 2023ರ ವರ್ಷ ಸಖತ್ ಸ್ಪೆಷಲ್. ಈ ವರ್ಷ ಅವರ ಎರಡು ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿವೆ. ವರ್ಷದ ಆರಂಭದಲ್ಲಿಯೇ ‘ಪಠಾಣ್’ ಸಿನಿಮಾ ಅಬ್ಬರಿಸಿತು. ಬಾಕ್ಸ್ ಆಫೀಸ್ನಲ್ಲಿ ಸಾವಿರಾರು ಕೋಟಿ ರೂಪಾಯಿ ಕಮಾಯಿ ಮಾಡಿತು. ಸೆಪ್ಟೆಂಬರ್ನಲ್ಲಿ ಬಿಡುಗಡೆಯಾದ ‘ಜವಾನ್’ ಸಿನಿಮಾ (Jawan Movie) ಕೂಡ ಕಮ್ಮಿಯೇನಲ್ಲ. ಆ ಚಿತ್ರವೂ ಜಾಗತಿಕ ಗಲ್ಲಾ ಪೆಟ್ಟಿಗೆಯಲ್ಲಿ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಿಕೊಂಡಿತು. ವಿಶೇಷ ಏನೆಂದರೆ ಶಾರುಖ್ ಖಾನ್ ಅವರು ಕೇವಲ ಚಿತ್ರಮಂದಿರ, ಮಲ್ಟಿಪ್ಲೆಕ್ಸ್ ಮಾತ್ರವಲ್ಲದೇ ಒಟಿಟಿಯಲ್ಲೂ ತಾವೇ ಕಿಂಗ್ ಎಂಬುದನ್ನು ಈಗ ಸಾಬೀತು ಮಾಡಿದ್ದಾರೆ. ನೆಟ್ಫ್ಲಿಕ್ಸ್ (Netflix) ಒಟಿಟಿಯಲ್ಲಿ ಅವರ ‘ಜವಾನ್’ ಸಿನಿಮಾ ಅತಿ ಹೆಚ್ಚು ವೀಕ್ಷಣೆ ಕಂಡಿದೆ.
ಚಿತ್ರಮಂದಿರದಲ್ಲಿ ‘ಜವಾನ್’ ಸಿನಿಮಾ ಸೆಪ್ಟೆಂಬರ್ 7ರಂದು ಬಿಡುಗಡೆ ಆಗಿತ್ತು. ಬಳಿಕ ಶಾರುಖ್ ಖಾನ್ ಅವರ ಬರ್ತ್ಡೇ ಪ್ರಯುಕ್ತ ನವೆಂಬರ್ 2ರಂದು ಈ ಸಿನಿಮಾ ಒಟಿಟಿಗೆ ಕಾಲಿಟ್ಟಿತು. ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಿ ಎರಡು ವಾರ ಕಳೆಯುವುದರೊಳಗೆ ಈ ಸಿನಿಮಾ ದಾಖಲೆ ಬರೆದಿದೆ. ಎರಡು ವಾರದಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಸಿನಿಮಾ ಎಂಬ ಖ್ಯಾತಿಗೆ ‘ಜವಾನ್’ ಪಾತ್ರವಾಗಿದೆ. ಈ ಸುದ್ದಿಯನ್ನು ಸ್ವತಃ ನೆಟ್ಫ್ಲಿಕ್ಸ್ ಸಂಸ್ಥೆಯೇ ಹಂಚಿಕೊಂಡಿದೆ. ಶಾರುಖ್ ಖಾನ್ ಅವರ ಹವಾ ಹೇಗಿದೆ ಎಂಬುದಕ್ಕೆ ಇದೇ ಸಾಕ್ಷಿ.
ಇದನ್ನೂ ಓದಿ: ದಾಖಲೆ ಬರೆದ ಡಂಕಿ; ಸಿನಿಮಾ ಟೀಸರ್: ಮತ್ತೊಂದು ಬ್ಲಾಕ್ ಬಸ್ಟರ್ಗೆ ಶಾರುಖ್ ಖಾನ್ ರೆಡಿ
ಒಟಿಟಿಯಲ್ಲಿ ತಮ್ಮ ಸಿನಿಮಾಗೆ ಜನರು ಈ ಪರಿ ಪ್ರೀತಿ ತೋರಿಸಿರುವುದಕ್ಕೆ ಶಾರುಖ್ ಖಾನ್ ಅವರಿಗೆ ಖುಷಿ ಆಗಿದೆ. ಅದಕ್ಕಾಗಿ ಅವರು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ‘ಇದು ಬರೀ ಸಿನಿಮಾ ಅಲ್ಲ. ಕಥೆ ಹೇಳುವುದರ ಸೆಲೆಬ್ರೇಷನ್, ಸಿನಿಮಾದ ಶಕ್ತಿ’ ಎಂದು ಶಾರುಖ್ ಖಾನ್ ಹೇಳಿದ್ದಾರೆ ಎಂದು ವರದಿ ಆಗಿದೆ. ಹಿಂದಿ ಮಾತ್ರವಲ್ಲದೇ ತಮಿಳು ಮತ್ತು ತೆಲುಗಿನಲ್ಲೂ ರಿಲೀಸ್ ಆದ ‘ಜವಾನ್’ ಸಿನಿಮಾಗೆ ಕಾಲಿವುಡ್ ನಿರ್ದೇಶಕ ಅಟ್ಲಿ ಆ್ಯಕ್ಷನ್-ಕಟ್ ಹೇಳಿದ್ದಾರೆ. ಶಾರುಖ್ ಖಾನ್ ಜೊತೆ ನಯನತರಾ, ವಿಜಯ್ ಸೇತುಪತಿ, ಪ್ರಿಯಾಮಣಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
Vikram Rathore has hijacked our hearts and records! ❤️🔥 📈
Jawan is now the most watched film in India in the first 2 weeks of launch, across all languages, on Netflix!Watch Jawan in Hindi, Tamil and Telugu, now streaming on Netflix#JawanOnNetflix @iamsrk @Atlee_dir… pic.twitter.com/0uRkbFhr0t
— Netflix India (@NetflixIndia) November 21, 2023
‘ಜವಾನ್’ ಮತ್ತು ‘ಪಠಾಣ್’ ಸಿನಿಮಾಗಳ ಯಶಸ್ಸಿನಿಂದ ಶಾರುಖ್ ಖಾನ್ ಅವರ ಬೇಡಿಕೆ ಹೆಚ್ಚಾಗಿದೆ. ಈಗ ಅವರು ‘ಡಂಕಿ’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾಗೆ ಭರ್ಜರಿ ಪ್ರಚಾರ ನೀಡಲಾಗುತ್ತಿದೆ. ಈಗಾಗಲೇ ಟೀಸರ್ನಿಂದ ಕುತೂಹಲ ಮೂಡಿಸಲಾಗಿದೆ. ಹಾಡುಗಳ ಮೂಲಕವೂ ಗಮನ ಸೆಳೆಯುವ ಪ್ರಯತ್ನದಲ್ಲಿ ಚಿತ್ರತಂಡ ನಿರತವಾಗಿದೆ. ಈ ಚಿತ್ರಕ್ಕೆ ರಾಜ್ಕುಮಾರ್ ಹಿರಾನಿ ನಿರ್ದೇಶನ ಮಾಡಿದ್ದಾರೆ. ಶಾರುಖ್ ಖಾನ್ ಮಾತ್ರವಲ್ಲದೇ ವಿಕ್ಕಿ ಕೌಶಲ್, ತಾಪ್ಸೀ ಪನ್ನು ಮುಂತಾದವರು ಸಹ ಅಭಿನಯಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:31 am, Wed, 22 November 23