Jawan: ಶಾರುಖ್​ ಜನ್ಮದಿನದ ಪ್ರಯುಕ್ತ ಒಟಿಟಿಯಲ್ಲಿ ಬರಲಿದೆ ‘ಜವಾನ್​’? ಜೊತೆಗೆ ಇನ್ನೊಂದು ಗುಡ್​ ನ್ಯೂಸ್​

|

Updated on: Nov 01, 2023 | 12:19 PM

Jawan OTT Release: ‘ಜವಾನ್​’ ಸಿನಿಮಾದಲ್ಲಿ ಶಾರುಖ್​ ಖಾನ್​ ಮತ್ತು ಅಟ್ಲಿ ಕಾಂಬಿನೇಷನ್​​ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಆ್ಯಕ್ಷನ್​-ಥ್ರಿಲ್ಲರ್​ ಶೈಲಿಯಲ್ಲಿ ಮೂಡಿಬಂದ ಈ ಸಿನಿಮಾವನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಚಿತ್ರಮಂದಿರದಲ್ಲಿ ಅಬ್ಬರಿಸಿದ ಈ ಸಿನಿಮಾ ಒಟಿಟಿಯಲ್ಲಿ ಯಾವ ರೀತಿ ಮ್ಯಾಜಿಕ್​ ಮಾಡಲಿದೆ ಎಂಬುದನ್ನು ತಿಳಿಯುವ ಸಮಯ ಬಂದಿದೆ.

Jawan: ಶಾರುಖ್​ ಜನ್ಮದಿನದ ಪ್ರಯುಕ್ತ ಒಟಿಟಿಯಲ್ಲಿ ಬರಲಿದೆ ‘ಜವಾನ್​’? ಜೊತೆಗೆ ಇನ್ನೊಂದು ಗುಡ್​ ನ್ಯೂಸ್​
ಶಾರುಖ್​ ಖಾನ್​
Follow us on

ಈ ವರ್ಷದ ಬ್ಲಾಕ್​ ಬಸ್ಟರ್​ ಸಿನಿಮಾಗಳಲ್ಲಿ ‘ಜವಾನ್​’ ಚಿತ್ರ (Jawan Movie) ಕೂಡ ಇದೆ. ವಿಶ್ವ ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾ ಸಾವಿರಾರು ಕೋಟಿ ರೂಪಾಯಿ ಕಮಾಯಿ ಮಾಡಿದೆ. ಶಾರುಖ್​ ಖಾನ್​ ಅಭಿಮಾನಿಗಳು ಥಿಯೇಟರ್​ನಲ್ಲಿ ಈ ಚಿತ್ರ ನೋಡಿ ಎಂಜಾಯ್​ ಮಾಡಿದ್ದಾರೆ. ಈಗ ಒಟಿಟಿಯಲ್ಲಿ ‘ಜವಾನ್​’ ನೋಡುವ ಸಮಯ ಹತ್ತಿರ ಆಗಿದೆ. ಈ ಸಿನಿಮಾದ ಒಟಿಟಿ ಸ್ಟ್ರೀಮಿಂಗ್​ ಹಕ್ಕುಗಳನ್ನು ನೆಟ್​ಫ್ಲಿಕ್ಸ್​’ (Netflix) ಖರೀದಿಸಿದೆ. ನವೆಂಬರ್​ 2ರಂದು ಶಾರುಖ್​ ಖಾನ್​ ಜನ್ಮದಿನದ (Shah Rukh Khan Birthday) ಪ್ರಯುಕ್ತ ಈ ಸಿನಿಮಾ ಒಟಿಟಿಯಲ್ಲಿ ಪ್ರಸಾರವಾಗುವ ಸಾಧ್ಯತೆ ದಟ್ಟವಾಗಿದೆ. ಆ ಬಗ್ಗೆ ನೆಟ್​ಫ್ಲಿಕ್ಸ್​ ಸೋಶಿಯಲ್​ ಮೀಡಿಯಾದಲ್ಲಿ ಸೂಚನೆ ಸಿಕ್ಕಿದೆ. ಅಲ್ಲದೇ ಒಂದು ಗುಡ್​ ನ್ಯೂಸ್​ ಕೂಡ ಕಾದಿದೆ.

ಒಮ್ಮೆ ಚಿತ್ರಮಂದಿರದಲ್ಲಿ ‘ಜವಾನ್​’ ಸಿನಿಮಾ ನೋಡಿದವರು ಮತ್ತೊಮ್ಮೆ ಯಾಕೆ ಒಟಿಟಿಯಲ್ಲಿ ನೋಡಬೇಕು? ಅದಕ್ಕೆ ಉತ್ತರ ಇಲ್ಲಿದೆ. ಗುಡ್​ ನ್ಯೂಸ್​ ಏನೆಂದರೆ ಈಗ ಒಟಿಟಿಯಲ್ಲಿ ಪ್ರಸಾರ ಆಗುವ ‘ಜವಾನ್​’ ಚಿತ್ರದಲ್ಲಿ ಡಿಲಿಟೆಡ್​ ಸೀನ್​ಗಳು ಕೂಡ ಸೇರಿರಲಿವೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನಿರ್ದೇಶಕ ಅಟ್ಲಿ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ಹಾಗಾಗಿ ನೆಟ್​ಫ್ಲಿಕ್ಸ್​​ನಲ್ಲಿ ‘ಜವಾನ್​’ ಸಿನಿಮಾದ ಎಕ್ಸ್​ಟೆಂಡೆಡ್​ ವರ್ಷನ್​ ಪ್ರಸಾರವಾಗಲಿದೆ ಎಂದು ಫ್ಯಾನ್ಸ್​ ಊಹಿಸಿದ್ದಾರೆ. ಆ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಆಗಬೇಕಿದೆ.

ಇದನ್ನೂ ಓದಿ: ‘ಜವಾನ್​’ ಚಿತ್ರದ ಬಳಿಕ ನಯನತಾರಾಗೆ ಸಿಗುತ್ತಾ ಮತ್ತೊಂದು ಗೆಲುವು?

ತಮಿಳು ಚಿತ್ರರಂಗದ ಯಶಸ್ವಿ ನಿರ್ದೇಶಕ ಅಟ್ಲಿ ಅವರು ‘ಜವಾನ್​’ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳುವ ಮೂಲಕ ಬಾಲಿವುಡ್​ ಪ್ರವೇಶಿಸಿದ್ದಾರೆ. ಶಾರುಖ್​ ಖಾನ್​ ಮತ್ತು ಅಟ್ಲಿ ಕಾಂಬಿನೇಷನ್​​ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಆ್ಯಕ್ಷನ್​-ಥ್ರಿಲ್ಲರ್​ ಶೈಲಿಯಲ್ಲಿ ಮೂಡಿಬಂದ ಈ ಸಿನಿಮಾವನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಚಿತ್ರಮಂದಿರದಲ್ಲಿ ಅಬ್ಬರಿಸಿದ ಈ ಸಿನಿಮಾ ಒಟಿಟಿಯಲ್ಲಿ ಯಾವ ರೀತಿ ಮ್ಯಾಜಿಕ್​ ಮಾಡಲಿದೆ ಎಂಬುದನ್ನು ತಿಳಿಯುವ ಸಮಯ ಬಂದಿದೆ. ‘ಜವಾನ್​’ ಎಕ್ಸ್​ಟೆಂಡೆಡ್​ ವರ್ಷನ್​ ನೋಡಲು ಫ್ಯಾನ್ಸ್​ ಕಾದಿದ್ದಾರೆ.

ಇದನ್ನೂ ಓದಿ: ಸಖತ್ ಅದ್ದೂರಿಯಾಗಿರಲಿದೆ ಶಾರುಖ್ ಖಾನ್ ಬರ್ತ್​ಡೇ ಪಾರ್ಟಿ; ಯಾರಿಗೆಲ್ಲ ಆಹ್ವಾನ?

‘ಜವಾನ್​’ ಸಿನಿಮಾದಲ್ಲಿ ಬಹುತಾರಾಗಣ ಇದೆ. ಶಾರುಖ್​ ಖಾನ್​ ಜೊತೆ ದೀಪಿಕಾ ಪಡುಕೋಣೆ, ನಯನತಾರಾ, ವಿಜಯ್​ ಸೇತುಪತಿ, ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರಾ, ಸಂಜಯ್​ ದತ್​ ಮುಂತಾದವರು ನಟಿಸಿದ್ದಾರೆ. ಈ ಕಲಾವಿದರ ಸಂಗಮದಿಂದ ಸಿನಿಮಾದ ಮೆರುಗು ಹೆಚ್ಚಾಗಿದೆ. ನವೆಂಬರ್​ 2ರಂದು ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್​ ಆದರೆ ಈ ಬಾರಿಯ ಶಾರುಖ್​ ಖಾನ್​ ಹುಟ್ಟುಹಬ್ಬದ ಸಡಗರ ಜೋರಾಗಲಿದೆ. ಬರ್ತ್​ಡೇ ಸಲುವಾಗಿ ಶಾರುಖ್​ ಖಾನ್​ ಅವರು ದೊಡ್ಡ ಪಾರ್ಟಿ ಆಯೋಜಿಸಲಿದ್ದಾರೆ. ಅದರಲ್ಲಿ ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.