ಶ್ರೀಮುರಳಿ ನಟನೆಯ ‘ಬಘೀರ’ ಸಿನಿಮಾ ಅಕ್ಟೋಬರ್ 31ರಂದು ಥಿಯೇಟರ್ನಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾಗೆ ಎಲ್ಲರಿಂದ ಮೆಚ್ಚುಗೆ ಸಿಕ್ಕಿತ್ತು. ಈಗ ಈ ಚಿತ್ರ ಒಟಿಟಿಗೆ ಕಾಲಿಟ್ಟಿದೆ. ಕೇವಲ 20 ದಿನಗಳಲ್ಲಿ ಸಿನಿಮಾ ಒಟಿಟಿ ಹಾದಿ ಹಿಡಿದಿದೆ. ಹಾಗಾದರೆ ಈ ಚಿತ್ರ ಯಾವ ಒಟಿಟಿಯಲ್ಲಿ ಪ್ರಸಾರ ಕಾಣುತ್ತಿದೆ? ಸಿನಿಮಾ ಮಾಡಿದ ವಿಶೇಷ ಸಾಧನೆ ಏನು ಎಂಬ ಬಗ್ಗೆ ಇಲ್ಲಿದೆ ವಿವರ.
ಶ್ರೀಮುರಳಿ, ರುಕ್ಮಿಣಿ ವಸಂತ್ ಮೊದಲಾದವರು ನಟಿಸಿರೋ ‘ಬಘೀರ’ ಚಿತ್ರಕ್ಕೆ ಡಾಕ್ಟರ್ ಸೂರಿ ಅವರ ನಿರ್ದೇಶನ ಇದೆ. ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದೆ. ಈ ಚಿತ್ರವನ್ನು ನೆಟ್ಫ್ಲಿಕ್ಸ್ ಖರೀದಿ ಮಾಡಿದೆ ಅನ್ನೋದು ವಿಶೇಷ. ಕನ್ನಡದ ಜೊತೆಗೆ ತೆಲುಗು, ಮಲಯಾಳಂ ಹಾಗೂ ತಮಿಳು ಭಾಷೆಗಳಲ್ಲಿ ಈ ಚಿತ್ರ ವೀಕ್ಷಣೆಗೆ ಲಭ್ಯವಿದೆ. ಈ ಬಗ್ಗೆ ನೆಟ್ಫ್ಲಿಕ್ಸ್ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದೆ.
ಸಾಮಾನ್ಯವಾಗಿ ಅಮೇಜಾನ್ ಪ್ರೈಮ್, ಜೀ 5 ಮೊದಲಾದ ಒಟಿಟಿ ಪ್ಲಾಟ್ಫಾರ್ಮ್ಗಳು ಕನ್ನಡ ಸಿನಿಮಾಗಳನ್ನು ಪಡೆಯಲು ಪೈಪೋಟಿ ನಡೆಸುತ್ತವೆ. ಆದರೆ, ನೆಟ್ಫ್ಲಿಕ್ಸ್ ಮೊದಲಿನಿಂದಲೂ ಈ ಬಗ್ಗೆ ತಾತ್ಸಾರ ತೋರುತ್ತಾ ಬಂದಿದೆ. ಈ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಇರೋದು ಬೆರಳೆಣಿಕೆ ಕನ್ನಡ ಚಿತ್ರಗಳು ಮಾತ್ರ. ಆದರೆ, ಈ ಒಟಿಟಿ ಸಂಸ್ಥೆ ‘ಬಘೀರ’ ಚಿತ್ರವನ್ನು ಖರೀದಿ ಮಾಡಿದೆ ಎಂದಾಗ ಸಹಜವಾಗಿಯೇ ಕನ್ನಡಿಗರಿಗೆ ಖುಷಿ ಆಗಿದೆ. ಅನೇಕರು ಸಿನಿಮಾದ ಗುಣಮಟ್ಟದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
Veeraru inna kalpanikaralla. Ooralli ondu hosa veera bandidane, avana hesare…Bagheera 🐆⚡️
Watch Bagheera on Netflix, out 21 November in Kannada, Tamil, Telugu and Malayalam!#BagheeraOnNetflix pic.twitter.com/xxYzLzF0qD— Netflix India South (@Netflix_INSouth) November 20, 2024
ಇದನ್ನೂ ಓದಿ: ತೆಲುಗಿನಲ್ಲಿ ‘ಬಘೀರ’ ಚಿತ್ರ ಮಾಡಿದ ಕಲೆಕ್ಷನ್ ಎಷ್ಟು? ಸಿನಿಮಾದ ಒಟ್ಟಾರೆ ಗಳಿಕೆ ಬಗ್ಗೆ ಇಲ್ಲಿದೆ ವಿವರ
‘ಬಘೀರ’ ಸಿನಿಮಾದಲ್ಲಿ ಶ್ರೀಮುರಳಿ ಹಾಗೂ ರುಕ್ಮಿಣಿ ಜೊತೆ ಪ್ರಕಾಶ್ ರಾಜ್, ಅಚ್ಯುತ್ ಕುಮಾರ್, ರಂಗಾಯಣ ರಘು, ಗರುಡ ರಾಮ್ ಮೊದಲಾದವರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆ ಮಾಡಿದೆ. ಈ ಚಿತ್ರಕ್ಕೆ ಪ್ರಶಾಂತ್ ನೀಲ್ ಕಥೆ ಬರೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.