Suriya: ಇರುಳ ಬುಡಕಟ್ಟು ಜನಾಂಗದ ಕಲ್ಯಾಣಕ್ಕೆ ₹ 1 ಕೋಟಿ ಚೆಕ್ ನೀಡಿದ ಸೂರ್ಯ ದಂಪತಿ; ಅಭಿಮಾನಿಗಳಿಂದ ಮೆಚ್ಚುಗೆ
Jai Bheem Film: ‘ಜೈ ಭೀಮ್’ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ಚಿತ್ರದಲ್ಲಿ ಬೆಳಕು ಚೆಲ್ಲಲಾಗಿರುವ ಇರುಳ ಬುಡಕಟ್ಟು ಸಮುದಾಯದ ಕಲ್ಯಾಣಕ್ಕೆಂದು ಕಾಲಿವುಡ್ ನಟ ಸೂರ್ಯ ದಂಪತಿ ₹ 1 ಕೋಟಿ ಚೆಕ್ ನೀಡಿದ್ದಾರೆ.
ಸೂರ್ಯ ನಟನೆಯ ‘ಜೈ ಭೀಮ್’ ಚಿತ್ರ ಇಂದು (ನವೆಂಬರ್ 2) ಆಮೆಜಾನ್ ಪ್ರೈಮ್ ಒಟಿಟಿ ಮುಖಾಂತರ ನೇರವಾಗಿ ಬಿಡುಗಡೆಗೊಂಡಿದೆ. ಚಿತ್ರವು ಇರುಳ ಬುಡಕಟ್ಟು ಸಮುದಾಯಕ್ಕೆ ಸಂಬಂಧಪಟ್ಟ ಸತ್ಯಘಟನೆಯನ್ನಾಧರಿಸಿದೆ. ಚಿತ್ರದ ಬಿಡುಗಡೆಗೂ ಮುನ್ನಾದಿನ ನಟ ಸೂರ್ಯ ಹಾಗೂ ಅವರ ಪತ್ನಿ ಜ್ಯೋತಿಕಾ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರನ್ನು ಭೇಟಿಯಾದರು. ಆ ಸಂದರ್ಭದಲ್ಲಿ ಇರುಳ ಬುಡಕಟ್ಟು ಜನಾಂಗದ ಕಲ್ಯಾಣಕ್ಕೆಂದು ₹ 1 ಕೋಟಿ ಮೊತ್ತದ ಚೆಕ್ಅನ್ನು ಸೂರ್ಯ ಹಾಗೂ ಜ್ಯೋತಿಕಾ ನೀಡಿದ್ದಾರೆ. ಚೆಕ್ ಅನ್ನು ಅವರು ಸ್ಟಾಲಿನ್ ಅವರಿಗೆ ಹಸ್ತಾಂತರಿಸಿದ್ದಾರೆ. ಈ ಹಣ ಪಳಂಕುಡಿ ಇರುಳರ್ ಶಿಕ್ಷಣ ಟ್ರಸ್ಟ್ ಮೂಲಕ ವಿನಿಯೋಗವಾಗಲಿದೆ. ಸೂರ್ಯ ದಂಪತಿಯ ಕಾರ್ಯಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಚೆಕ್ ಹಸ್ತಾಂತರಿಸುವ ಸಂದರ್ಭದಲ್ಲಿ ನಿವೃತ್ತ ನ್ಯಾಯಮೂರ್ತಿ ಕೆ.ಚಂದ್ರು ಮತ್ತು ಪಳಂಕುಡಿ ಇರುಳರ್ ಟ್ರಸ್ಟ್‌ನ ಸದಸ್ಯರು ಕೂಡ ಹಾಜರಿದ್ದರು. ಸೂರ್ಯ, ಜ್ಯೋತಿಕಾ ನೀಡಿದ ಚೆಕ್ ಅನ್ನು ಎಂ.ಕೆ.ಸ್ಟಾಲಿನ್ ಸ್ವೀಕರಿಸಿದ ಸ್ಟಾಲಿನ್ ನಂತರ, ಟ್ರಸ್ಟ್ಗೆ ಹಸ್ತಾಂತರಿಸಿದ್ದಾರೆ. ಜೈ ಭೀಮ್ ಚಿತ್ರದಲ್ಲಿ ಇರುಳರ್ ಬುಡಕಟ್ಟಿನ ಜನರು ಅನುಭವಿಸಿದ ಕಸ್ಟಡಿ ಹಿಂಸೆಯ ಕುರಿತು ಕಟ್ಟಿಕೊಡಲಾಗಿದೆ. ಈ ಚಿತ್ರವು 1993ರಲ್ಲಿ ನಡೆದ ಸತ್ಯಘಟನೆಯನ್ನು ಆಧರಿಸಿದ್ದು, ಜಾತಿ ತಾರತಮ್ಯ ಮತ್ತು ಬುಡಕಟ್ಟು ಜನಾಂಗದ ಮೇಲಿನ ದೌರ್ಜನ್ಯದ ಬಗ್ಗೆ ಮಾತನಾಡುತ್ತದೆ.
Rs. 1Cr was donated towards the welfare of the Irula Tribe, by @Suriya_offl Sir & #Jyotika Ma’am on behalf of 2D in the presence of our Hon’ble Chief Minister of TN @mkstalin the cheque was handed over to Justice K. Chandru (Retd) & members of Pazhangudi Irula Trust.#JaiBhim pic.twitter.com/uvYdGUbo9U
— 2D Entertainment (@2D_ENTPVTLTD) November 1, 2021
‘ಜೈ ಭೀಮ್’ ಚಿತ್ರವನ್ನು ತಾ ಸೇ ಜ್ಞಾನವೇಲ್ ನಿರ್ದೇಶಿಸಿದ್ದು ಸೂರ್ಯ, ಲಿಜೋಮೋಲ್ ಜೋಸ್, ಮಣಿಕಂದನ್ ಮುಖ್ಯಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಕಾಶ್ ರಾಜ್, ರಜಿಶಾ ವಿಜಯನ್, ಜಯಪ್ರಕಾಶ್ ಮತ್ತು ರಾವ್ ರಮೇಶ್ ಚಿತ್ರದಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಸೂರ್ಯ ಮತ್ತು ಜ್ಯೋತಿಕಾ ಅವರ 2ಡಿ ಎಂಟರ್‌ಟೈನ್‌ಮೆಂಟ್ ನಿರ್ಮಿಸಿದೆ. ಸೂರ್ಯ ಒಡೆತನದ ನಿರ್ಮಾಣ ಸಂಸ್ಥೆಯು ಈ ವರ್ಷದ ಆರಂಭದಲ್ಲಿ ಆಮೆಜಾನ್ OTT ಜೊತೆ ನಾಲ್ಕು ಚಲನಚಿತ್ರಗಳ ಒಪ್ಪಂದವನ್ನು ಮಾಡಿಕೊಂಡಿತ್ತು. ಅದರ ಆಧಾರದಲ್ಲಿ ನೇರವಾಗಿ ಪ್ರೀಮಿಯರ್ ಆಗಲಿರುವ 2D ಎಂಟರ್‌ಟೈನ್‌ಮೆಂಟ್‌ನ ನಾಲ್ಕು ಚಲನಚಿತ್ರಗಳಲ್ಲಿ ‘ಜೈ ಭೀಮ್’ ಒಂದಾಗಿದೆ.
ಇದನ್ನೂ ಓದಿ:
Aryan Khan: 22 ದಿನ ಜೈಲಿನಲ್ಲಿದ್ದ ಆರ್ಯನ್ ಖಾನ್ಗೆ ಈಗ ಮನೆಯವರಿಂದಲೇ ಬ್ಲಡ್ ಟೆಸ್ಟ್; ಕಾರಣ ಏನು?