AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ದಿನ ಒಟಿಟಿಗೆ ಬರ್ತಿದೆ ‘ಟಿಲ್ಲು ಸ್ಕ್ವೇರ್’ ಹಾಗೂ ‘ದಿ ಫ್ಯಾಮಿಲಿ ಸ್ಟಾರ್’; ಇಲ್ಲಿದೆ ಮಾಹಿತಿ

ಥಿಯೇಟರ್​ನಲ್ಲಿ ರಿಲೀಸ್ ಆದ ‘ಟಿಲ್ಲು ಸ್ಕ್ವೇರ್’ ಹಾಗೂ ‘ದಿ ಫ್ಯಾಮಿಲಿ ಸ್ಟಾರ್’ ಸಿನಿಮಾ ಒಂದೇ ದಿನ ಒಟಿಟಿಗೆ ಕಾಲಿಡುತ್ತಿವೆ. ಈ ಬಗ್ಗೆ ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಲಾಗಿದೆ. ಎರಡೂ ಸಿನಿಮಾಗಳು ಥಿಯೇಟರ್​ನಲ್ಲಿ ರಿಲೀಸ್ ಆಗಿ ಇನ್ನೂ ಒಂದು ತಿಂಗಳು ಕಳೆದಿಲ್ಲ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ.

ಒಂದೇ ದಿನ ಒಟಿಟಿಗೆ ಬರ್ತಿದೆ ‘ಟಿಲ್ಲು ಸ್ಕ್ವೇರ್’ ಹಾಗೂ ‘ದಿ ಫ್ಯಾಮಿಲಿ ಸ್ಟಾರ್’; ಇಲ್ಲಿದೆ ಮಾಹಿತಿ
ಟಿಲ್ಲು-ಫ್ಯಾಮಿಲಿ ಸ್ಟಾರ್
ರಾಜೇಶ್ ದುಗ್ಗುಮನೆ
|

Updated on: Apr 25, 2024 | 1:00 PM

Share

ಸದ್ಯ ಚುನಾವಣಾ ಕಾವು ಜೋರಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಆಗಿವೆ. ಮಾಧ್ಯಮಗಳಲ್ಲಿ, ಸೋಶಿಯಲ್ ಮೀಡಿಯಾಗಳಲ್ಲಿ ಆ ಬಗ್ಗೆಯೇ ಚರ್ಚೆ ಆಗುತ್ತಿದೆ. ಇಂಥ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಮಾಡಿ ಗೆಲ್ಲೋದು ಎಂದರೆ ಅದು ಸುಲಭ ಅಲ್ಲವೇ ಅಲ್ಲ. ಇತ್ತೀಚೆಗೆ ಥಿಯೇಟರ್​ನಲ್ಲಿ ರಿಲೀಸ್ ಆದ ‘ಟಿಲ್ಲು ಸ್ಕ್ವೇರ್’ ಹಾಗೂ ‘ದಿ ಫ್ಯಾಮಿಲಿ ಸ್ಟಾರ್’ (Family Star) ಸಿನಿಮಾ ಒಂದೇ ದಿನ ಒಟಿಟಿಗೆ ಕಾಲಿಡುತ್ತಿವೆ. ಈ ಬಗ್ಗೆ ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಲಾಗಿದೆ. ಎರಡೂ ಸಿನಿಮಾಗಳು ಥಿಯೇಟರ್​ನಲ್ಲಿ ರಿಲೀಸ್ ಆಗಿ ಇನ್ನೂ ಒಂದು ತಿಂಗಳು ಕಳೆದಿಲ್ಲ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ.

‘ದಿ ಫ್ಯಾಮಿಲಿ ಸ್ಟಾರ್’

ವಿಜಯ್ ದೇವರಕೊಂಡ ಹಾಗೂ ಮೃಣಾಲ್ ಠಾಕೂರ್ ನಟನೆಯ ‘ದಿ ಫ್ಯಾಮಿಲಿ ಸ್ಟಾರ್’ ಸಿನಿಮಾ ಹೇಳಿಕೊಳ್ಳುವಂಥ ಮೆಚ್ಚುಗೆ ಪಡೆದಿಲ್ಲ. ಏಪ್ರಿಲ್ 5ರಂದು ಥಿಯೇಟರ್​ನಲ್ಲಿ ರಿಲೀಸ್ ಆದ ಈ ಸಿನಿಮಾ ಕೇವಲ 21ನೇ ದಿನಕ್ಕೆ ಒಟಿಟಿಗೆ ಕಾಲಿಡುತ್ತಿದೆ. ಹೌದು, ಏಪ್ರಿಲ್ 26ರಿಂದ ಈ ಸಿನಿಮಾ ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ವೀಕ್ಷಣೆಗೆ ಲಭ್ಯವಿದೆ.

ಇದನ್ನೂ ಓದಿ: 100 ಕೋಟಿ ಕ್ಲಬ್ ಸೇರಿದ ಅನುಪಮಾ ಪರಮೇಶ್ವರನ್ ಸಿನಿಮಾ; ಕೈ ಹಿಡಿದ ಬೋಲ್ಡ್ ದೃಶ್ಯ

ವಿಜಯ್ ದೇವರಕೊಂಡ ಅವರಿಗೆ ಇತ್ತೀಚೆಗೆ ಅದೃಷ್ಟ ಕೈಕೊಟ್ಟಿದೆ. ಬಹುತೇಕ ಎಲ್ಲಾ ಸಿನಿಮಾಗಳು ಫ್ಲಾಪ್ ಎನಿಸಿಕೊಳ್ಳುತ್ತಿವೆ. ಅವರ ಮ್ಯಾನರಿಸಂ ಸಿನಿಮಾದಲ್ಲಿ ಒಂದೇ ರೀತಿಯಲ್ಲಿ ಇದೆ ಎನ್ನುವ ಆರೋಪವನ್ನು ಕೆಲವರು ಮಾಡಿದ್ದಾರೆ.

‘ಟಿಲ್ಲು ಸ್ಕ್ವೇರ್’

ಸಿದ್ದು ಜೊನ್ನಲಗಡ್ಡ

ಹಾಗೂ ಅನುಪಮಾ ಪರಮೇಶ್ವರನ್ ನಟನೆಯ ‘ಟಿಲ್ಲು ಸ್ಕ್ವೇರ್’ ಸಿನಿಮಾ ಕೂಡ ಏಪ್ರಿಲ್ 26ರಂದು ಒಟಿಟಿಯಲ್ಲಿ ರಿಲೀಸ್ ಆಗಲಿದೆ. ನೆಟ್​ಫ್ಲಿಕ್ಸ್​ನಲ್ಲಿ ತೆಲುಗು ಜೊತೆಗೆ ಕನ್ನಡ, ಹಿಂದಿ ಮೊದಲಾದ ಭಾಷೆಗಳಲ್ಲಿ ಸಿನಿಮಾ ಪ್ರಸಾರ ಕಾಣಲಿದೆ. ಈ ಚಿತ್ರ ಮಾರ್ಚ್ 29ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಒಂದು ತಿಂಗಳು ಪೂರ್ಣಗೊಳ್ಳುವ ಮೊದಲೇ ಸಿನಿಮಾ ಒಟಿಟಿಯತ್ತ ಮುಖ ಮಾಡಿದೆ. ಈ ಸಿನಿಮಾದಲ್ಲಿ ಅನುಪಮಾ ಸಖತ್ ಬೋಲ್ಡ್ ಅವತಾರ ತಾಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.