ಈ ವಾರ ಒಟಿಟಿಯಲ್ಲಿ ರಿಲೀಸ್ ಆದ ಸಿನಿಮಾ, ಸೀರಿಸ್​ಗಳ ಬಗ್ಗೆ ಇಲ್ಲಿದೆ ವಿವರ

|

Updated on: Jan 10, 2025 | 3:14 PM

ಸಂಕ್ರಾಂತಿ ಹಬ್ಬದ ಸಮಯದಲ್ಲಿ, ಒಟಿಟಿ ಪ್ಲಾಟ್‌ಫಾರ್ಮ್‌ಗಳು ಮತ್ತು ಥಿಯೇಟರ್‌ಗಳಲ್ಲಿ ಹಲವಾರು ಹೊಸ ಚಲನಚಿತ್ರಗಳು ಮತ್ತು ವೆಬ್ ಸರಣಿಗಳು ಬಿಡುಗಡೆಯಾಗುತ್ತಿವೆ. ಆಹಾ, ನೆಟ್‌ಫ್ಲಿಕ್ಸ್ ಮತ್ತು ಜೀ5 ಮುಂತಾದ ಪ್ಲಾಟ್‌ಫಾರ್ಮ್‌ಗಳಲ್ಲಿ ತೆಲುಗು, ಹಿಂದಿ ಮತ್ತು ಇಂಗ್ಲಿಷ್ ಚಲನಚಿತ್ರಗಳು ಮತ್ತು ವೆಬ್ ಸರಣಿಗಳು ಲಭ್ಯವಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಈ ವಾರ ಒಟಿಟಿಯಲ್ಲಿ ರಿಲೀಸ್ ಆದ ಸಿನಿಮಾ, ಸೀರಿಸ್​ಗಳ ಬಗ್ಗೆ ಇಲ್ಲಿದೆ ವಿವರ
ಈ ವಾರ ಒಟಿಟಿಯಲ್ಲಿ ರಿಲೀಸ್ ಆದ ಸಿನಿಮಾ, ಸೀರಿಸ್​ಗಳ ಬಗ್ಗೆ ಇಲ್ಲಿದೆ ವಿವರ
Follow us on

ಸಂಕ್ರಾಂತಿ ಹಬ್ಬ ಸಮೀಪಿಸುತ್ತಿದೆ. ದಕ್ಷಿಣ ಭಾರತದ ವಿಶೇಷ ಹಬ್ಬಗಳಲ್ಲಿ ಒಂದಾದ ಈ ಹಬ್ಬವನ್ನು ಆಚರಿಸಲು ಎಲ್ಲರೂ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸಿನಿಮಾ ರಂಗದಲ್ಲೂ ಹಬ್ಬದ ವಾತಾವರಣ ನಿರ್ಮಾಣ ಆಗಿದೆ. ಥಿಯೇಟರ್​ನಲ್ಲಿ ಸಾಲು ಸಾಲು ಚಿತ್ರಗಳು ಬಿಡುಗಡೆ ಕಾಣುತ್ತಿವೆ. ಅದೇ ರೀತಿ ಒಟಿಟಿಯಲ್ಲೂ ಹಲವು ಸಿನಿಮಾಗಳು ತೆರೆಗೆ ಬರುತ್ತಿವೆ.  ವೆಬ್ ಸೀರಿಸ್​ಗಳು ಕೂಡ ಈ ಸಾಲಿನಲ್ಲಿ ಇವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಆಹಾ ಒಟಿಟಿ

ತೆಲುಗು ಸಿನಿಮಾಗಳನ್ನು ಕೇಂದ್ರೀಕೃತವಾಗಿರಿಸಿಕೊಂಡು ಸಿದ್ಧವಾದ ಒಟಿಟಿ ‘ಆಹಾ’. ಈ ಓಟಿಟಿಯಲ್ಲಿ ಹಲವು ತೆಲುಗು ಸಿನಿಮಾಗಳು ರಿಲೀಸ್ ಆಗುತ್ತವೆ. ‘ನೀಲಿ ಮೇಘ ಶ್ಯಾಮ’ ಒಟಿಟಿಯಲ್ಲಿ ಪ್ರಸಾರ ಆರಂಭಿಸಿದೆ. ತೆಲುಗಿನ ‘ಹೈಡ್ ಆ್ಯಂಡ್ ಸೀಕ್’ ಕೂಡ ಈ ವಾರ ರಿಲೀಸ್ ಆಗಿ ವೀಕ್ಷಣೆಗೆ ಲಭ್ಯವಿದೆ.

ನೆಟ್​ಫ್ಲಿಕ್ಸ್

ನೆಟ್​ಫ್ಲಿಕ್ಸ್​ನಲ್ಲಿ ಈ ವಾರ ಭಾರತದ ಹೆಚ್ಚು ಸಿನಿಮಾಗಳು ರಿಲೀಸ್ ಆಗುತ್ತಿಲ್ಲ. ಈ ವಾರ ‘ಬ್ಲ್ಯಾಕ್ ವಾರಂಟ್’ ಹೆಸರಿನ ಹಿಂದಿ ವೆಬ್ ಸೀರಿಸ್ ಪ್ರಸಾರ ಕಂಡಿದೆ. ಕ್ರೈಮ್ ಡ್ರಾಮಾ ಕಥೆಯನ್ನು ಇದು ಹೊಂದಿದೆ. ಉಳಿದಂತೆ ಕೆಲವು ಇಂಗ್ಲಿಷ್ ಸೀರಿಸ್​ಗಳು ವೀಕ್ಷಣೆಗೆ ಲಭವ್ಯಿದೆ.

ಇದನ್ನೂ ಓದಿ: ನೆಟ್​ಫ್ಲಿಕ್ಸ್​ ಮಾಡಿದ ಅಚಾತುರ್ಯದಿಂದ ರಿವೀಲ್ ಆಯ್ತು ‘ಸ್ಕ್ವಿಡ್ ಗೇಮ್ 3’ ರಿಲೀಸ್ ದಿನಾಂಕ

 ಜೀ 5

‘ದಿ ಸಾವರಮತಿ ರಿಪೋರ್ಟ್​’ ಈ ವಾರ ಒಟಿಟಿಯಲ್ಲಿ ಬಿಡುಗಡೆ ಕಂಡಿದೆ. ಜೀ 5 ಮೂಲಕ ಈ ಸಿನಿಮಾ ವೀಕ್ಷಣೆಗೆ ಲಭ್ಯ ಇದೆ. ವಿಕ್ರಾಂತ್ ಮಾಸ್ಸಿ ಅವರು ಈ ಚಿತ್ರದಲ್ಲಿ ನಟಿಸಿದ್ದರು. ಸಾಬರಮತಿ ಎಕ್ಸ್​ಪ್ರೆಸ್ ದುರಂತ ಆಧರಿಸಿ ಸಿನಿಮಾ ಸಿದ್ಧಗೊಂಡಿದೆ.  ಈ ಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಸಿನಿಮಾನ ಈಗ ಒಟಿಟಿಯಲ್ಲಿ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.