ಈ ಸಸ್ಪೆನ್ಸ್ ಥ್ರಿಲ್ಲರ್​ ಚಿತ್ರವನ್ನು ಒಟಿಟಿಯಲ್ಲಿ ಮಿಸ್ ಮಾಡಲೇಬೇಡಿ

ತಮಿಳು ಚಿತ್ರ 'ಡಿಎನ್ಎ' ಚಿತ್ರಮಂದಿರ ಬಿಡುಗಡೆಯಾದ 24 ಗಂಟೆಗಳ ಒಳಗೆ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಅರ್ಥ್ವ ಮುರಳಿ ಮತ್ತು ನಿಮಿಷಾ ಸಜಯನ್ ನಟಿಸಿರುವ ಈ ಥ್ರಿಲ್ಲರ್ ಚಿತ್ರ ಜಿಯೋ ಹಾಟ್‌ಸ್ಟಾರ್‌ನಲ್ಲಿ ತಮಿಳು, ತೆಲುಗು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಲಭ್ಯವಿದೆ. ಚಿತ್ರವು IMDB ರೇಟಿಂಗ್‌ನಲ್ಲಿ 7.8 ಅಂಕಗಳನ್ನು ಪಡೆದುಕೊಂಡಿದೆ.

ಈ ಸಸ್ಪೆನ್ಸ್ ಥ್ರಿಲ್ಲರ್​ ಚಿತ್ರವನ್ನು ಒಟಿಟಿಯಲ್ಲಿ ಮಿಸ್ ಮಾಡಲೇಬೇಡಿ
ಡಿಎನ್​ಎ
Updated By: ರಾಜೇಶ್ ದುಗ್ಗುಮನೆ

Updated on: Jul 21, 2025 | 7:58 AM

ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 24 ಗಂಟೆಗಳ ಒಳಗೆ ಸಿನಿಮಾ ಒಟಿಟಿಯಲ್ಲಿ (OTT) ಬಿಡುಗಡೆ ಆಗೋದನ್ನು ಎಂದಾದರೂ ಕೇಳಿದ್ದೀರಾ? ಈ ರೀತಿಯ ಘಟನೆ ನಡೆದಿದೆ. ಒಂದು ಥ್ರಿಲ್ಲರ್ ಸಿನಿಮಾ ಪ್ರಸ್ತುತ ಸುದ್ದಿಯಲ್ಲಿದೆ. ಈ ಸಿನಿಮಾದ ಹೆಸರು ಡಿಎನ್​ಎ. ಅರ್ಥ್ವ ಮುರಳಿ ಮತ್ತು ನಿಮಿಷಾ ಸಜಯನ್ ನಟಿಸಿದ ತಮಿಳು ಭಾಷೆಯ ‘ಡಿಎನ್‌ಎ’ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾದ ನಂತರ ಬೆಳಕಿಗೆ ಬಂದಿದೆ.

ನೆಲ್ಸನ್ ವೆಂಕಟೇಶನ್ ನಿರ್ದೇಶನದ ಈ ಚಿತ್ರವು ಜೂನ್ 20ರಂದು ತಮಿಳುನಾಡಿನಲ್ಲಿ ಬಿಡುಗಡೆಯಾಯಿತು. ಅದೇ ಚಿತ್ರವು ತೆಲುಗಿನಲ್ಲಿ ‘ಮೈ ಬೇಬಿ’ ಎಂಬ ಹೆಸರಿನಲ್ಲಿ ಜುಲೈ 18 ರಂದು ಬಿಡುಗಡೆಯಾಯಿತು. ತೆಲುಗಿನಲ್ಲಿ ಬಿಡುಗಡೆಯಾದ 24 ಗಂಟೆಗಳ ಒಳಗೆ ಅಂದರೆ ಜುಲೈ 19ರಂದು ‘ಡಿಎನ್ಎ’ ಒಟಿಟಿಯಲ್ಲಿ ಸ್ಟ್ರೀಮ್ ಆಯಿತು.

ಈ ಚಿತ್ರವು ಒಟಿಟಿ ಪ್ಲಾಟ್‌ಫಾರ್ಮ್ ಜಿಯೋ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಿದೆ. ಈ ಚಿತ್ರವು ತಮಿಳು, ತೆಲುಗು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಒಟಿಟಿಯಲ್ಲಿ ಲಭ್ಯವಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ತಕ್ಷಣ ಒಟಿಟಿಯಲ್ಲಿ ಚಿತ್ರ ಬಿಡುಗಡೆಯಾಗುವುದಿಲ್ಲ. ಇದು ಆದಾಯದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಈ ಚಿತ್ರದ ನಿರ್ಮಾಪಕರು ಒಂದು ವಿಶಿಷ್ಟ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಮತ್ತು ಅದರ ಬಗ್ಗೆ ಬಹಳಷ್ಟು ಚರ್ಚೆಯಾಗುತ್ತಿದೆ. ಈ ಚಿತ್ರವು IMDB ನಲ್ಲಿ 10 ರಲ್ಲಿ 7.8 ರೇಟಿಂಗ್ ಹೊಂದಿದೆ.

ಇದನ್ನೂ ಓದಿ
‘ಎಕ್ಕ’ ಚಿತ್ರಕ್ಕೆ ಸರಿ ಸಮಾನವಾಗಿ ಗಳಿಕೆ ಮಾಡುತ್ತಿದೆ ‘ಜೂನಿಯರ್’
ಬಾಕ್ಸ್ ಆಫೀಸ್ ಉಡೀಸ್ ಮಾಡಿದ ‘ಎಕ್ಕ’ ಸಿನಿಮಾ; ಭಾನುವಾರ ಬಂಗಾರದ ಬೆಳೆ
ರಿಯಾಲಿಟಿ ಶೋ ಸಂಭಾವನೆಯಲ್ಲಿ ಸಲ್ಮಾನ್ ಖಾನ್ ಹಿಂದಿಕ್ಕಿದ ಅಮಿತಾಭ್ ಬಚ್ಚನ್
ಬರ್ತ್​ಡೇ ಗರ್ಲ್ ಪ್ರಿಯಾಂಕಾ ಚೋಪ್ರಾ ಎಷ್ಟು ಶ್ರೀಮಂತೆ ಗೊತ್ತಾ?

ಚಿತ್ರದಲ್ಲಿ ಆನಂದ್ ತನ್ನ ಲವರ್ ಮರಣದಿಂದ ಸಂಪೂರ್ಣವಾಗಿ ದುಃಖ ತಪ್ತನಾಗಿ ವ್ಯಸನಿಯಾಗುತ್ತಾನೆ. ಮತ್ತೊಂದೆಡೆ, ದಿವ್ಯಾ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾಳೆ. ತನ್ನ ಮದುವೆಗೆ ಸರಿಯಾದ ಸಂಗಾತಿಯನ್ನು ಆಯ್ಕೆ ಮಾಡಲು ಅವಳು ಹೆಣಗಾಡುತ್ತಾಳೆ. ಇವರಿಬ್ಬರ ಮದುವೆ ಆಗುತ್ತದೆ. ನಂತರ ಏನಾಗುತ್ತದೆ ಎಂಬುದು ಸಿನಿಮಾದ ಕಥೆ.

ಇದನ್ನೂ ಓದಿ: ಈ ವಾರ ಒಟಿಟಿಗೆ ಬಂದಿವೆ ಕೆಲ ಹಿಟ್ ಸಿನಿಮಾಗಳು: ಇಲ್ಲಿದೆ ಪಟ್ಟಿ

ಚಿತ್ರದಲ್ಲಿ ಮೊಹಮ್ಮದ್ ಜೀಶನ್ ಅಯೂಬ್, ಬಾಲಾಜಿ ಶಕ್ತಿವೇಲ್, ರಮೇಶ್ ತಿಲಕ್, ವಿಜಯ್ ಚಂದ್ರಶೇಖರ್, ಚೇತನ್, ರಿಯಾತ್ವಿಕಾ, ಸುಬ್ರಮಣ್ಯಂ ಶಿವ ಮತ್ತು ಕರುಣಾಕರನ್ ನಟಿಸಿದ್ದಾರೆ. ಈ ಚಿತ್ರದ ಅವಧಿ ಎರಡು ಗಂಟೆ 20 ನಿಮಿಷ ಇದೆ. ಒಂದೊಳ್ಳೆಯ ಆ್ಯಕ್ಷನ್ ಸಿನಿಮಾ ಬೇಕು ಎಂದರೆ ಈ ಚಿತ್ರವನ್ನು ವೀಕ್ಷಣೆ ಮಾಡಬಹುದಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.