ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ (Karan Johar) ನಡೆಸಿಕೊಡುತ್ತಿರುವ ‘ಬಿಗ್ ಬಾಸ್ ಓಟಿಟಿ’ (Bigg Boss OTT) ಕಾರ್ಯಕ್ರಮ ಸಿಕ್ಕಾಪಟ್ಟೆ ಹೈಪ್ ಪಡೆದುಕೊಂಡಿದೆ. ಇದರಲ್ಲಿ ವಿವಾದಗಳೇ ಹೆಚ್ಚು ಸೌಂಡು ಮಾಡುತ್ತಿವೆ. ಆರು ವಾರಗಳ ಕಾಲ ಓಟಿಟಿಯಲ್ಲಿ ಪ್ರಸಾರವಾಗಲಿರುವ ಈ ಶೋನಲ್ಲೀಗ ಮೊದಲ ಎಲಿಮಿನೇಷನ್ ನಡೆದಿದೆ. ನಟಿ ಊರ್ಫಿ ಜಾವೇದ್ (Urfi Javed) ಅವರನ್ನು ಡೊಡ್ಮನೆಯಿಂದ ಹೊರಗೆ ಕಳಿಸಲಾಗಿದೆ. ಈ ಶೋನಲ್ಲಿ ಮುಂದುವರಿಯಬೇಕು ಎಂದು ಅವರು ಮಾಡಿದ ಎಲ್ಲ ಪ್ರಯತ್ನಗಳು ವ್ಯರ್ಥ ಆಗಿವೆ. ಕಣ್ಣೀರು ಹಾಕುತ್ತಲೇ ಅವರು ಬಿಗ್ ಬಾಸ್ನಿಂದ ಹೊರಬಂದಿದ್ದಾರೆ.
ಬಿಗ್ ಬಾಸ್ನಲ್ಲಿ ತಾವು ಇನ್ನಷ್ಟು ದಿನಗಳ ಕಾಲ ಮುಂದುವರಿಯುವ ಬಗ್ಗೆ ಊರ್ಫಿ ಜಾವೇದ್ ಅವರಿಗೆ ಬಹಳ ಭರವಸೆ ಇತ್ತು. ಆದರೆ ಕೊನೇ ಕ್ಷಣದಲ್ಲಿ ಅವರ ನಂಬಿಕೆ ಹುಸಿ ಆಯಿತು. ಸ್ನೇಹಿತ ಜೀಶಾನ್ ಖಾನ್ ಜೊತೆ ಅವರ ಆಪ್ತವಾಗಿದ್ದರು. ಆದರೆ ಜೀಶಾನ್ ಅವರಿಂದಲೇ ಊರ್ಫಿಗೆ ಬೆಂಬಲ ಸಿಗಲಿಲ್ಲ. ಹಾಗಾಗಿ ಅವರು ಎಲಿಮಿಮೇಟ್ ಆಗಬೇಕಾಯಿತು. ಬಿಗ್ ಬಾಸ್ನಿಂದ ಹೊರ ಬರುವುದಕ್ಕೂ ಮುನ್ನ ಅವರು ಜೀಶಾನ್ಗೆ ಹಿಗ್ಗಾಮುಗ್ಗ ಬೈಯ್ದು ಕೋಪ ತೀರಿಸಿಕೊಂಡರು.
‘ಈ ಎಲಿಮಿನೇಷನ್ನಿಂದ ನನಗೆ ಶಾಕ್ ಆಗಿದೆ. ನನ್ನನ್ನು ಯಾಕೆ ಎಲಿಮಿನೇಟ್ ಮಾಡಲಾಗಿದೆ ಎಂಬುದೇ ತಿಳಿಯುತ್ತಿಲ್ಲ. ಎಲ್ಲರೂ ನನಗೆ ಈ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಈಗಲೂ ನಾನು ಅಳುತ್ತಿದ್ದೇನೆ. ಎಲಿಮಿನೇಟ್ ಆದಾಗಿನಿಂದ ಇಲ್ಲಿಯವರೆಗೆ ಅಳು ನಿಲ್ಲಿಸಿಲ್ಲ’ ಎಂದು ಮಾಧ್ಯಮಗಳಿಗೆ ಊರ್ಫಿ ಜಾವೇದ್ ಪ್ರತಿಕ್ರಿಯೆ ನೀಡಿದ್ದಾರೆ. ಬಿಗ್ ಬಾಸ್ನಿಂದ ಹೊರಬಂದು ಅವರು ಎಲ್ಲರ ಮೇಲೂ ಸಿಟ್ಟು ಪ್ರದರ್ಶಿಸುತ್ತಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಅವರು ಕಸದ ಚೀಲವನ್ನೇ ಬಳಸಿಕೊಂಡು ಹೊಸ ಕಾಸ್ಟ್ಯೂಮ್ ತಯಾರಿಸಿ, ಅದರಿಂದ ಮಾನ ಮುಚ್ಚಿಕೊಂಡಿದ್ದರು. ಆ ಬಟ್ಟೆ ತುಂಬ ಗ್ಲಾಮರಸ್ ಆಗಿಯೂ ಕಾಣಿಸಿತ್ತು. ಊರ್ಫಿಯ ಪ್ರತಿಭೆ ಕಂಡು ಇನ್ನುಳಿದ ಸದಸ್ಯರೆಲ್ಲ ಮೆಚ್ಚುಗೆ ಸೂಚಿಸಿದ್ದರು. ಬಿಗ್ ಬಾಸ್ಗೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಊರ್ಫಿ ಇಷ್ಟೆಲ್ಲ ಕ್ರಿಯೇಟಿವಿಟಿ ತೋರಿಸಿದ್ದರು. ಮುಂದೆ ಅವರು ಏನೆಲ್ಲ ಮಾಡಬಹುದು ಎಂಬ ಕೌತುಕ ವೀಕ್ಷಕರಲ್ಲಿ ಮೂಡಿತ್ತು. ಆದರೆ ಬಹಳ ಬೇಗ ಊರ್ಫಿಗೆ ಅದೃಷ್ಟ ಕೈ ಕೊಟ್ಟಿದ್ದರಿಂದ ಅವರು ಎಲಿಮಿನೇಟ್ ಆಗಬೇಕಾಯಿತು. ನೇಹಾ ಭಾಸಿನ್, ರಿಧಿಮಾ ಪಂಡಿತ್, ನಿಶಾಂತ್ ಭಟ್, ದಿವ್ಯಾ ಅಗರ್ವಾಲ್, ಶಮಿತಾ ಶೆಟ್ಟಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳ ನಡುವೆ ಪೈಪೋಟಿ ಮುಂದುವರಿದಿದೆ.
ಇದನ್ನೂ ಓದಿ:
ನೈತಿಕತೆ ಬಿಟ್ಟು ಮಹಿಳಾ ಸ್ಪರ್ಧಿಗೆ ಲಿಪ್ ಕಿಸ್ ಮಾಡಿದ ಗಾಯಕಿ; ಎತ್ತ ಸಾಗುತ್ತಿದೆ ಬಿಗ್ ಬಾಸ್?
ಬಿಗ್ ಬಾಸ್ ನಿರೂಪಣೆ ಬಗ್ಗೆ ಸುದೀಪ್ ಫ್ಯಾನ್ಸ್ಗೆ ಇದ್ದ ಅನುಮಾನಕ್ಕೆ ಪರಮ್ ಫುಲ್ ಸ್ಟಾಪ್