‘ಇದೆಲ್ಲ ಸುಳ್ಳು’; ಮದುವೆ ಬಳಿಕ ಒಂದು ವಿಚಾರಕ್ಕೆ ಸ್ಪಷ್ಟನೆ ಕೊಟ್ಟ ವರುಣ್ ತೇಜ್

ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಇತ್ತೀಚೆಗೆ ಹೈದರಾಬಾದ್​ನಲ್ಲಿ ಅದ್ದೂರಿಯಾಗಿ ಆರತಕ್ಷತೆ ಮಾಡಿಕೊಂಡಿದ್ದಾರೆ. ನಾಗ ಚೈತನ್ಯ, ಅಡಿವಿ ಶೇಷ್, ಸುದೀಪ್ ಕಿಶನ್, ಅಲ್ಲು ಸಿರಿಶ್, ಸೈನಾ ನೆಹ್ವಾಲ್ ಸೇರಿ ಅನೇಕ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗಿ ನವದಂಪತಿಗೆ ಶುಭಾಶಯ ಕೋರಿದ್ದಾರೆ.  

‘ಇದೆಲ್ಲ ಸುಳ್ಳು’; ಮದುವೆ ಬಳಿಕ ಒಂದು ವಿಚಾರಕ್ಕೆ ಸ್ಪಷ್ಟನೆ ಕೊಟ್ಟ ವರುಣ್ ತೇಜ್
ವರುಣ್ ತೇಜ್-ಲಾವಣ್ಯ ತ್ರಿಪಾಠಿ
Updated By: ರಾಜೇಶ್ ದುಗ್ಗುಮನೆ

Updated on: Nov 08, 2023 | 1:06 PM

ವರುಣ್ ತೇಜ್ (Varun Tej) ಹಾಗೂ ಲಾವಣ್ಯಾ ತ್ರಿಪಾಠಿ ಇತ್ತೀಚೆಗೆ ಇಟಲಿಯಲ್ಲಿ ಅದ್ದೂರಿಯಾಗಿ ಮದುವೆ ಆದರು. ಆಪ್ತರು ಹಾಗೂ ಕುಟುಂಬದವರು ಮಾತ್ರ ಮದುವೆಗೆ ಹಾಜರಿ ಹಾಕಿದ್ದರು. ಇವರು ಈಗಾಗಲೇ ಮದುವೆ ಫೋಟೋ ಹಂಚಿಕೊಂಡಿದ್ದಾರೆ. ಇವರ ವಿವಾಹದ ವಿಡಿಯೋ ನೋಡೋಕೆ ಫ್ಯಾನ್ಸ್ ಕಾದಿದ್ದಾರೆ. ಇವರ ಮದುವೆ ಸ್ಟ್ರೀಮಿಂಗ್ ಹಕ್ಕು ನೆಟ್​ಫ್ಲಿಕ್ಸ್​ಗೆ 8 ಕೋಟಿ ರೂಪಾಯಿಗೆ ಮಾರಾಟ ಆಗಿದೆ ಎಂದು ವರದಿ ಆಗಿತ್ತು. ಇದಕ್ಕೆ ಸಂಬಂಧಿಸಿದಂತೆ ವರುಣ್ ತೇಜ್ ಅವರು ಸ್ಪಷ್ಟನೆ ನೀಡಿದ್ದಾರೆ.

ವರುಣ್ ತೇಜ್ ಅವರು ಈ ವಿಚಾರದ ಕುರಿತು ಪ್ರಕಟಣೆ ಹೊರಡಿಸಿದ್ದಾರೆ. ‘ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಮದುವೆ ಪ್ರಸಾರದ ಹಕ್ಕು ಒಟಿಟಿಗೆ ಮಾರಾಟ ಮಾಡಲಾಗಿದೆ ಎಂಬುದು ಸಂಪೂರ್ಣ ಸುಳ್ಳು. ಇದನ್ನು ನಂಬಬೇಡಿ ಮತ್ತು ಈ ಸುಳ್ಳು ಸುದ್ದಿಯನ್ನು ಹರಡಬೇಡಿ’ ಎಂದು ವರುಣ್ ತೇಜ್ ಅವರು ಹೇಳಿರುವುದಾಗಿ ಅವರ ಪಿಆರ್ ತಂಡ ಟ್ವೀಟ್ ಮಾಡಿದೆ.

ವಿಘ್ನೇಶ್ ಶಿವನ್ ಹಾಗೂ ನಯನತಾರಾ ಮದುವೆ ಪ್ರಸಾರದ ಹಕ್ಕನ್ನು ನೆಟ್​ಫ್ಲಿಕ್ಸ್ ಪಡೆದಿತ್ತು. ಇದರ ಟೀಸರ್ ಕೂಡ ರಿಲೀಸ್ ಆಯಿತು. ಆದರೆ, ಯಾವುದೇ ರೀತಿಯ ವಿಡಿಯೋನ ಪ್ರಸಾರ ಮಾಡಿಲ್ಲ. ಇವರ ಒಪ್ಪಂದ ಕ್ಯಾನ್ಸಲ್ ಆಗಿದೆ ಎನ್ನಲಾಗುತ್ತಿದೆ. ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಮದುವೆಯ ವಿಡಿಯೋ ಐದು ವರ್ಷಗಳ ಬಳಿಕ ರಿಲೀಸ್ ಆಯಿತು.

ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಇತ್ತೀಚೆಗೆ ಹೈದರಾಬಾದ್​ನಲ್ಲಿ ಅದ್ದೂರಿಯಾಗಿ ಆರತಕ್ಷತೆ ಮಾಡಿಕೊಂಡಿದ್ದಾರೆ. ನಾಗ ಚೈತನ್ಯ, ಅಡಿವಿ ಶೇಷ್, ಸುದೀಪ್ ಕಿಶನ್, ಅಲ್ಲು ಸಿರಿಶ್, ಸೈನಾ ನೆಹ್ವಾಲ್ ಸೇರಿ ಅನೇಕ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗಿ ನವದಂಪತಿಗೆ ಶುಭಾಶಯ ಕೋರಿದ್ದಾರೆ.

ಇದನ್ನೂ ಓದಿ: ವರುಣ್ ತೇಜ್-ಲಾವಣ್ಯ ತ್ರಿಪಾಠಿ ಮದುವೆ; ಅದ್ದೂರಿ ಮದುವೆಯಲ್ಲಿ ಸೆಲೆಬ್ರಿಟಿಗಳ ದಂಡು

ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಒಟ್ಟಾಗಿ ಸಿನಿಮಾ ಮಾಡಿದ್ದಾರೆ. ಈ ವೇಳೆ ಇವರ ಮಧ್ಯೆ ಪ್ರೀತಿ ಮೂಡಿದೆ. ಇವರು ಪ್ರೀತಿ ವಿಚಾರವನ್ನು ಗುಟ್ಟಾಗಿಯೇ ಇಟ್ಟಿದ್ದರು. ಕೆಲ ತಿಂಗಳ ಹಿಂದೆ ಇವರು ನಿಶ್ಚಿತಾರ್ಥ ಮಾಡಿಕೊಂಡರು. ಈಗ ಇಬ್ಬರೂ ಮದುವೆ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:14 pm, Wed, 8 November 23