Varun Tej Lavanya Tripathi Wedding: ವರುಣ್ ತೇಜ್-ಲಾವಣ್ಯ ತ್ರಿಪಾಠಿ ಮದುವೆ; ಅದ್ದೂರಿ ಮದುವೆಯಲ್ಲಿ ಸೆಲೆಬ್ರಿಟಿಗಳ ದಂಡು

ಮೆಗಾಸ್ಟಾರ್ ಚಿರಂಜೀವಿ ಶೇರ್ ಮಾಡಿರುವ ಹೊಸ ಫೋಟೋ ಇದೀಗ ವೈರಲ್ ಆಗುತ್ತಿದೆ. ವರುಣ್ ತೇಜ್ ಹಾಗೂ ಲಾವಣ್ಯ ಮದುವೆಯಲ್ಲಿ ಅಲ್ಲು ಅರ್ಜುನ್, ರಾಮ್ ಚರಣ್, ಸಾಯಿ ಧರಮ್ ತೇಜ್, ಅಲ್ಲು ಸಿರಿಶ್, ಪವನ್​ ಕಲ್ಯಾಣ್, ಚಿರಂಜೀವಿ ಮೊದಲಾದವರು ಹಾಜರಿ ಹಾಕಿದ್ದಾರೆ.

Varun Tej Lavanya Tripathi Wedding: ವರುಣ್ ತೇಜ್-ಲಾವಣ್ಯ ತ್ರಿಪಾಠಿ ಮದುವೆ; ಅದ್ದೂರಿ ಮದುವೆಯಲ್ಲಿ ಸೆಲೆಬ್ರಿಟಿಗಳ ದಂಡು
ವರುಣ್​-ಲಾವಣ್ಯ ಮದುವೆ
Follow us
ರಾಜೇಶ್ ದುಗ್ಗುಮನೆ
|

Updated on:Nov 02, 2023 | 10:40 AM

ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ (Lavanya Tripathi) ಬುಧವಾರ (ನವೆಂಬರ್ 1) ಇಟಲಿಯಲ್ಲಿ ವಿವಾಹವಾದರು. ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದ ಇವರಿಬ್ಬರು ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವರುಣ್ ತೇಜ್ ಹಾಗೂ ಲಾವಣ್ಯ ಮದುವೆ ಸಮಾರಂಭವನ್ನು ಮೆಗಾ ಫ್ಯಾಮಿಲಿ ಅದ್ದೂರಿಯಾಗಿ ಆಯೋಜಿಸಿತ್ತು. ಈ ಮದುವೆಯಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಮಾತ್ರ ಭಾಗವಹಿಸಿದ್ದರು. ಮದುವೆಯ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ನವ ದಂಪತಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ.

ಮೆಗಾಸ್ಟಾರ್ ಚಿರಂಜೀವಿ ಶೇರ್ ಮಾಡಿರುವ ಹೊಸ ಫೋಟೋ ಇದೀಗ ವೈರಲ್ ಆಗುತ್ತಿದೆ. ವರುಣ್ ತೇಜ್ ಹಾಗೂ ಲಾವಣ್ಯ ಮದುವೆಯಲ್ಲಿ ಅಲ್ಲು ಅರ್ಜುನ್, ರಾಮ್ ಚರಣ್, ಸಾಯಿ ಧರಮ್ ತೇಜ್, ಅಲ್ಲು ಸಿರಿಶ್, ಪವನ್​ ಕಲ್ಯಾಣ್, ಚಿರಂಜೀವಿ ಮೊದಲಾದವರು ಹಾಜರಿ ಹಾಕಿದ್ದಾರೆ. ನವ ದಂಪತಿ ಕೂಡ ಫೋಟೋಗೆ ಪೋಸ್​ ನೀಡಿದ್ದಾರೆ. ಇವರೆಲ್ಲ ಒಟ್ಟಾಗಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋನ ಚಿರಂಜೀವಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ನವದಂಪತಿಗೆ ಶುಭ ಹಾರೈಸಿದ್ದಾರೆ.

‘ಇಬ್ಬರೂ ಒಟ್ಟಿಗೆ ಪ್ರೀತಿಯ ಹೊಸ ಪಯಣ ಆರಂಭಿಸಿದ್ದಾರೆ. ಹೊಸ ತಾರಾ ಜೋಡಿಗೆ ಶುಭಾಶಯ’ ಎಂದು ಚಿರಂಜೀವಿ ಅವರು ಫೋಟೋಗೆ ಕ್ಯಾಪ್ಶನ್ ನೀಡಿದ್ದಾರೆ. ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ‘ಮಿಸ್ಟರ್’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದರು. ಈ ವೇಳೆ ಇಬ್ಬರ ಮಧ್ಯೆ ಪ್ರೀತಿ ಮೂಡಿದೆ. ಅಂದಿನಿಂದ ಇವರಿಬ್ಬರ ಪ್ರೇಮ ವಿಚಾರವನ್ನು ಗೌಪ್ಯವಾಗಿಡಲಾಗಿತ್ತು.

ಇದನ್ನೂ ಓದಿ: ವರುಣ್ ತೇಜ್-ಲಾವಣ್ಯ ತ್ರಿಪಾಠಿ ವಿವಾಹಪೂರ್ವ ಸಂಭ್ರಮ ಶುರು

ಇಟಲಿಯಲ್ಲಿ ಈ ದಂಪತಿ ಹಸೆಮಣೆ ಏರೋಕೆ ಕಾರಣ ಇದೆ. ‘ಮಿಸ್ಟರ್’ ಸಿನಿಮಾದ ಶೂಟ್ ನಡೆದಿದ್ದು ಇಟಲಿಯಲ್ಲಿ. ಇವರ ಪ್ರೀತಿ ಹುಟ್ಟಿದ್ದು ಅಲ್ಲಿಯೇ. ಹೀಗಾಗಿ, ದಂಪತಿ ಮದುವೆಗೆ ಇಟಲಿಯನ್ನು ಆಯ್ಕೆ ಮಾಡಿಕೊಂಡಿದೆ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:35 am, Thu, 2 November 23