Varun Tej Lavanya Tripathi Wedding: ವರುಣ್ ತೇಜ್-ಲಾವಣ್ಯ ತ್ರಿಪಾಠಿ ವಿವಾಹಪೂರ್ವ ಸಂಭ್ರಮ ಶುರು

ವಿವಾಹ ಪೂರ್ವ ಸಂಭ್ರಮಾಚರಣೆಯ ಅಂಗವಾಗಿ ಸೋಮವಾರ (ಅ.30) ರಾತ್ರಿ ಕಾಕ್​ಟೇಲ್​ ಪಾರ್ಟಿ ಏರ್ಪಡಿಸಲಾಗಿತ್ತು. ಭಾವಿ ದಂಪತಿಗಳಾದ ವರುಣ್ ಮತ್ತು ಲಾವಣ್ಯ ಜೊತೆಗೆ ಅಲ್ಲು ಕುಟುಂಬ ಸದಸ್ಯರು, ಲಾವಣ್ಯ ತ್ರಿಪಾಠಿ ಅವರ ಕುಟುಂಬ ಸದಸ್ಯರು ಈ ಸಮಾರಂಭದಲ್ಲಿ ಭಾಗಿವಹಿಸಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

Varun Tej Lavanya Tripathi Wedding: ವರುಣ್ ತೇಜ್-ಲಾವಣ್ಯ ತ್ರಿಪಾಠಿ ವಿವಾಹಪೂರ್ವ ಸಂಭ್ರಮ ಶುರು
ವರುಣ್ ಮತ್ತು ಲಾವಣ್ಯ ಮದುವೆಯ ಕಾಕ್​ಟೇಲ್​ ಪಾರ್ಟಿ
Follow us
ಮದನ್​ ಕುಮಾರ್​
|

Updated on: Oct 31, 2023 | 2:28 PM

ಟಾಲಿವುಡ್ ಲವ್ ಬರ್ಡ್ಸ್ ವರುಣ್ ತೇಜ್ (Varun Tej) ಮತ್ತು ಲಾವಣ್ಯ ತ್ರಿಪಾಠಿ ಮದುವೆ (Lavanya Tripathi Varun Tej Wedding) ಕಾರ್ಯಗಳು ಸಂಭ್ರಮ, ಸಡಗರದಿಂದ ಆರಂಭವಾಗಿದೆ. ಇಟಲಿಯಲ್ಲಿ ಈ ಡೆಸ್ಟಿನೇಶನ್ ವೆಡ್ಡಿಂಗ್‌ಗೆ ಈಗಾಗಲೇ ಅದ್ಧೂರಿಯಾಗಿ ಸಿದ್ಧತೆಗಳು ನಡೆದಿವೆ. ವಿವಾಹ ಪೂರ್ವ ಸಂಭ್ರಮಾಚರಣೆಯ ಅಂಗವಾಗಿ ಸೋಮವಾರ (ಅಕ್ಟೋಬರ್ 30) ರಾತ್ರಿ ಕಾಕ್​ಟೇಲ್​ ಪಾರ್ಟಿ ಏರ್ಪಡಿಸಲಾಗಿತ್ತು. ಈ ಖುಷಿಯಲ್ಲಿ ಭಾವಿ ಜೋಡಿಗಳಾದ ವರುಣ್ ಮತ್ತು ಲಾವಣ್ಯ (Lavanya Tripathi), ಮೆಗಾ ಸ್ಟಾರ್​ ಫ್ಯಾಮಿಲಿ, ಅಲ್ಲು ಕುಟುಂಬ ಸದಸ್ಯರು ಭಾಗಿಯಾಗಿದ್ದರು. ಇತ್ತೀಚೆಗೆ ಈ ಸಮಾರಂಭದ ಫೋಟೋಗಳು ಹೊರಬಿದ್ದಿವೆ.

ಇದರಲ್ಲಿ ಭಾವಿ ಜೋಡಿ ವರುಣ್ ತೇಜ್ ಮತ್ತು ಲಾವಣ್ಯ ಬಿಳಿ ಬಣ್ಣದ ಡ್ರೆಸ್‌ನಲ್ಲಿ ಸೂಪರ್​ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ರಾಮ್ ಚರಣ್ ಮತ್ತು ಉಪಾಸನಾ ದಂಪತಿ ಬಿಳಿ ಮತ್ತು ಕಪ್ಪು ಬಣ್ಣದ ಡ್ರೆಸ್​ನಲ್ಲಿ ಕಂಗೊಳಿಸಿದ್ದಾರೆ. ಅಲ್ಲು ಅರ್ಜುನ್ ಮತ್ತು ಸಾಯಿ ಧರಮ್ ತೇಜ್ ಕಪ್ಪು ಬಣ್ಣದ ಸೂಟ್‌ನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.

ಸದ್ಯ, ವರುಣ್ ಮತ್ತು ಲಾವಣ್ಯ ಅವರ ಮದುವೆಯ ಫೋಟೋಗಳು ವೈರಲ್ ಆಗುತ್ತಿವೆ. ಇದನ್ನು ಮೆಗಾ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದರೊಂದಿಗೆ #VarunLav ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್ ಆಗಿದೆ. ವಿವಾಹ ಪೂರ್ವ ಸಂಭ್ರಮದ ಅಂಗವಾಗಿ ಮಂಗಳವಾರ (ಅಕ್ಟೋಬರ್ 31) ಬೆಳಗ್ಗೆ 11 ಗಂಟೆಯಿಂದ ವರುಣ್ ತೇಜ್ ಹಾಗೂ ಲಾವಣ್ಯ ಅವರ ಹಳದಿ ಸಮಾರಂಭ ನಡೆಯಲಿದೆ. ಇದರೊಂದಿಗೆ ವಿಶೇಷ ಥೀಮ್‌ನೊಂದಿಗೆ ಪೂಲ್ ಪಾರ್ಟಿ ಕೂಡ ನಡೆಯಲಿದೆ. ಈ ಸಮಾರಂಭದಲ್ಲಿ ಪ್ರತಿಯೊಬ್ಬರೂ ಹಳದಿ, ಬಿಳಿ ಮತ್ತು ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸುತ್ತಾರೆ.

ಇದನ್ನೂ ಓದಿ: ಪ್ರೀತಿ ಹುಟ್ಟಿದ ಜಾಗದಲ್ಲೇ ವರುಣ್ ತೇಜ್​-ಲಾವಣ್ಯ ತ್ರಿಪಾಠಿ ಮದುವೆ

ಹಳದಿ ಸಮಾರಂಭಕ್ಕಾಗಿ ಲಾವಣ್ಯಗಾಗಿ ವಿಶೇಷ ಲೆಹೆಂಗಾವನ್ನು ವಿನ್ಯಾಸಗೊಳಿಸಲಾಗಿದೆ. ಈ ಲೆಹೆಂಗಾವನ್ನು ಲಾವಣ್ಯ ತ್ರಿಪಾಠಿ ಅವರ ತಾಯಿಯ ಸೀರೆಯಿಂದ ತಯಾರಿಸಲಾಗಿದೆ. ಮದುವೆಯ ಮೊದಲು ನಡೆಯುವ ಹಳದಿ ಸಮಾರಂಭವನ್ನು ಸ್ಮರಣೀಯವಾಗಿಸಲು ಈ ಉಡುಪನ್ನು ವಿನ್ಯಾಸಗೊಳಿಸಲಾಗಿದೆ. ಖ್ಯಾತ ವಸ್ತ್ರ ವಿನ್ಯಾಸಕಿ ಅರ್ಚನಾ ರಾವ್ ಈ ಲೆಹೆಂಗಾ ವಿನ್ಯಾಸ ಮಾಡಿದ್ದಾರೆ. ಹಳದಿ ಸಮಾರಂಭ ಮುಗಿದ ನಂತರ ಸಂಜೆ ಐದೂವರೆ ಗಂಟೆಗೆ ಮೆಹೆಂದಿ ಸಮಾರಂಭ ಆರಂಭವಾಗುತ್ತದೆ.

ಮದುವೆಯ ಹಾಗೂ ಆರತಕ್ಷತೆ ವಿವರ

ಬುಧವಾರ (ನವೆಂಬರ್ 1) ವರುಣ್ ತೇಜ್ ಮತ್ತು ಲಾವಣ್ಯ ಹಸೆಮಣೆ ಏರಲಿದ್ದಾರೆ. ಅಂದು ಮಧ್ಯಾಹ್ನ ಸರಿಯಾಗಿ 2.48ಕ್ಕೆ ಲಾವಣ್ಯ ಕೊರಳಿಗೆ ವರುಣ್​ ಅವರು ತಾಳಿ ಕಟ್ಟಲಿದ್ದಾರೆ. ಮದುವೆಯ ನಂತರ ರಾತ್ರಿ 8:30ರಿಂದ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ