AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೊನೆಯದಾಗಿ ಲೈಂಗಿಕ ಕ್ರಿಯೆ ನಡೆಸಿದ್ದು ಯಾವಾಗ?’; ದೇವರಕೊಂಡಗೆ ಕೇಳಿದ ಪ್ರಶ್ನೆಗೆ ಅನನ್ಯಾ ಪಾಂಡೆ ಕೊಟ್ರು ಉತ್ತರ

ಪ್ರಚಾರದ ಉದ್ದೇಶದಿಂದಲೂ ವಿಜಯ್ ಹಾಗೂ ಅನನ್ಯಾ ‘ಕಾಫಿ ವಿತ್ ಕರಣ್ ಸೀಸನ್​ 7’ಗೆ ಒಟ್ಟಾಗಿ ಬಂದಿದ್ದಾರೆ. ಗುರುವಾರ (ಜುಲೈ 28) ಪ್ರಸಾರವಾಗಲಿರುವ ಈ ಶೋನ ಪ್ರೋಮೋ ಹಂಚಿಕೊಳ್ಳಲಾಗಿದೆ.

‘ಕೊನೆಯದಾಗಿ ಲೈಂಗಿಕ ಕ್ರಿಯೆ ನಡೆಸಿದ್ದು ಯಾವಾಗ?’; ದೇವರಕೊಂಡಗೆ ಕೇಳಿದ ಪ್ರಶ್ನೆಗೆ ಅನನ್ಯಾ ಪಾಂಡೆ ಕೊಟ್ರು ಉತ್ತರ
ವಿಜಯ್-ಅನನ್ಯಾ
TV9 Web
| Edited By: |

Updated on:Jul 26, 2022 | 4:21 PM

Share

‘ಕಾಫಿ ವಿತ್ ಕರಣ್’ (Koffee with Karan) ಶೋದಲ್ಲಿ ವೈಯಕ್ತಿಕ ಪ್ರಶ್ನೆಗಳನ್ನು ನೇರವಾಗಿ ಕೇಳಲಾಗುತ್ತದೆ. ಕೆಲ ಪ್ರಶ್ನೆಗಳು ತುಂಬಾನೇ ಮುಜುಗರ ತರುವ ರೀತಿಯಲ್ಲಿರುತ್ತದೆ. ಕೆಲವರು ಇದನ್ನು ಹಾಸ್ಯಾಸ್ಪದವಾಗಿ ತೆಗೆದುಕೊಂಡರೆ ಇನ್ನೂ ಕೆಲವರು ಮುಜುಗರ ಪಟ್ಟುಕೊಳ್ಳುತ್ತಾರೆ. ಈ ಕಾರಣಕ್ಕೆ ಅನೇಕರು ಈ ಶೋಗೆ ಬರೋಕೆ ಹಿಂಜರಿಯುತ್ತಾರೆ. ‘ಕಾಫಿ ವಿತ್ ಕರಣ್ ಸೀಸನ್​ 7’ಗೆ ಈ ಬಾರಿ ವಿಜಯ್ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ಅತಿಥಿ ಆಗಿ ಬಂದಿದ್ದಾರೆ. ಈ ವೇಳೆ ವಿಜಯ್ ದೇವರಕೊಂಡಗೆ (Vijay Devarakonda) ನೇರ ಪ್ರಶ್ನೆಗಳನ್ನು ಕೇಳಲಾಗಿದೆ.

ವಿಜಯ್ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ಅವರು ‘ಲೈಗರ್’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಈ ಸಿನಿಮಾ ಆಗಸ್ಟ್ 25ರಂದು ತೆರೆಗೆ ಬರುತ್ತಿದೆ. ಈ ಚಿತ್ರಕ್ಕೆ ಕರಣ್ ಕೂಡ ಬಂಡವಾಳ ಹೂಡಿದ್ದಾರೆ. ಪ್ರಚಾರದ ಉದ್ದೇಶದಿಂದಲೂ ವಿಜಯ್ ಹಾಗೂ ಅನನ್ಯಾ ‘ಕಾಫಿ ವಿತ್ ಕರಣ್ ಸೀಸನ್​ 7’ಗೆ ಒಟ್ಟಾಗಿ ಬಂದಿದ್ದಾರೆ. ಗುರುವಾರ (ಜುಲೈ 28) ಪ್ರಸಾರವಾಗಲಿರುವ ಈ ಶೋನ ಪ್ರೋಮೋ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ
Image
ಮೊದಲ ರಾತ್ರಿ ಎಂಬುದೆಲ್ಲ ಇರುವುದಿಲ್ಲ, ಏಕೆಂದರೆ ನೀವು ಸುಸ್ತಾಗಿರುತ್ತೀರಿ ಎಂದ ಆಲಿಯಾ ಭಟ್
Image
ಶಾರುಖ್-ಕರಣ್ ಸಂಬಂಧದ ಬಗ್ಗೆ ಹುಟ್ಟಿತ್ತು ಅನುಮಾನ; ಎಲ್ಲವನ್ನೂ ವಿವರಿಸಿದ್ದ ಜೋಹರ್  
Image
‘ನಾವು ‘ಕೆಜಿಎಫ್​’ ರೀತಿಯ ಸಿನಿಮಾ ಮಾಡಿದ್ರೆ ಕಟು ಟೀಕೆ ವ್ಯಕ್ತವಾಗುತ್ತಿತ್ತು’: ಕರಣ್​ ಜೋಹರ್​ ಆರೋಪ
Image
‘ಇಂಥ ಕೆಲಸ ಮಾಡ್ಬೇಡಿ’: ಎಲ್ಲರ ಎದುರು ಕರಣ್​ ಜೋಹರ್​ಗೆ ಅನಿಲ್​ ಕಪೂರ್ ವಾರ್ನಿಂಗ್​; ವಿಡಿಯೋ ವೈರಲ್​​

‘ನೀವು ಕೊನೆಯದಾಗಿ ಸೆxಕ್ಸ್​ ಮಾಡಿದ್ದು ಯಾವಾಗ?’ ಎನ್ನುವ ಪ್ರಶ್ನೆ ವಿಜಯ್ ದೇವರಕೊಂಡ ಅವರಿಗೆ ಎದುರಾಯಿತು. ಈ ಪ್ರಶ್ನೆಗೆ ವಿಜಯ್ ದೇವರಕೊಂಡ ಅವರು ನಕ್ಕರು. ಆಗ ಅನನ್ಯಾ ಅವರು ತಾವು ಇದಕ್ಕೆ ಉತ್ತರ ಊಹಿಸುವುದಾಗಿ ಹೇಳಿದರು. ‘ಇಂದು ಮುಂಜಾನೆ?’ ಎಂದು ಅನುಮಾನದಲ್ಲೇ ಕೇಳಿದರು.

Serious question – do you like ?? Then you’ll love Episode 4 of #HotstarSpecials #KoffeeWithKaranS7, streams from this Thursday only on Disney+ Hotstar.@DisneyPlusHS @TheDeverakonda @ananyapandayy @apoorvamehta18 @jahnvio @aneeshabaig @Dharmatic_ pic.twitter.com/omxqi1NyBO

‘ನಾನು ಕಾರಿನಲ್ಲಿ ಸೆxಕ್ಸ್ ಮಾಡಿದ್ದೇನೆ’ ಎಂದು ವಿಜಯ್ ದೇವರಕೊಂಡ ಹೇಳಿದರು. ಇದಕ್ಕೆ ಕರಣ್​, ‘ಅದು ಉತ್ತಮ ಅನಿಸುವುದಿಲ್ಲ ಅಲ್ಲವೇ’ ಎಂದು ಪ್ರಶ್ನೆ ಹಾಕಿದರು. ‘ಹತಾಶೆಗೊಂಡಾಗ ಈ ರೀತಿ ಮಾಡಬೇಕಾಗುತ್ತದೆ’ ಎಂದರು ವಿಜಯ್ ದೇವರಕೊಂಡ.

ಇದನ್ನೂ ಓದಿ: ‘ಲೈಗರ್’ ಟ್ರೇಲರ್ ಲಾಂಚ್​ನಲ್ಲಿ 199 ರೂ. ಹವಾಯಿ ಚಪ್ಪಲಿ​ ಧರಿಸಿ ಬಂದ ವಿಜಯ್ ದೇವರಕೊಂಡ; ಕಾರಣವೇನು?

‘ಕಾಫಿ ವಿತ್ ಕರಣ್​ 7’ ಈಗಾಗಲೇ ಮೂರು ಎಪಿಸೋಡ್​ಗಳನ್ನು ಪೂರ್ಣಗೊಳಿಸಿದೆ. ಮೊದಲ ಎಪಿಸೋಡ್​ನಲ್ಲಿ ರಣವೀರ್ ಸಿಂಗ್ ಹಾಗೂ ಆಲಿಯಾ ಭಟ್ ಆಗಮಿಸಿದ್ದರು. ನಂತರ ಜಾನ್ವಿ ಕಪೂರ್ ಹಾಗೂ ಸಾರಾ ಅಲಿ ಖಾನ್ ಬಂದಿದ್ದರು. ಕಳೆದ ವಾರ ಅಕ್ಷಯ್ ಕುಮಾರ್ ಹಾಗೂ ಸಮಂತಾ ಒಟ್ಟಾಗಿ ಈ ಶೋಗೆ ಆಗಮಿಸಿದ್ದರು. ಈ ಬಾರಿ ‘ಲೈಗರ್’ ಜೋಡಿ ಬರುತ್ತಿದೆ. ಈ ಎಪಿಸೋಡ್ ಬಗ್ಗೆ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Published On - 4:06 pm, Tue, 26 July 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್