‘ದಿ ಕೇರಳ ಸ್ಟೋರಿ’ ಚಿತ್ರವನ್ನು ಒಟಿಟಿಯಲ್ಲಿ ನೋಡುವವರಿಗೆ ಇದೆ ಸರ್​​ಪ್ರೈಸ್​?

|

Updated on: Feb 13, 2024 | 11:01 AM

‘ದಿ ಕೇರಳ ಸ್ಟೋರಿ’ ಸಿನಿಮಾ ಒಳ್ಳೆಯ ಗಳಿಕೆ ಮಾಡಿದೆ. ಈ ರೀತಿಯ ಹಿಟ್ ಸಿನಿಮಾಗಳನ್ನು ಒಟಿಟಿ ಪ್ಲಾಟ್​ಫಾರ್ಮ್​ಗಳು ಸ್ಪರ್ಧೆಗೆ ಇಳಿದು ಖರೀದಿ ಮಾಡುತ್ತವೆ. ‘ದಿ ಕೇರಳ ಸ್ಟೋರಿ’ಗೆ ಹಾಗಾಗಿಲ್ಲ. ವಿವಾದಗಳ ಮೂಲಕ ಸಿನಿಮಾ ಸುದ್ದಿ ಆಗಿದ್ದರಿಂದ ಇದನ್ನು ಯಾರೂ ಖರೀದಿಸಿರಲಿಲ್ಲ. ಈಗ ಸಿನಿಮಾ ಜೀ5ನಲ್ಲಿ ರಿಲೀಸ್ ಆಗುತ್ತಿದೆ.

‘ದಿ ಕೇರಳ ಸ್ಟೋರಿ’ ಚಿತ್ರವನ್ನು ಒಟಿಟಿಯಲ್ಲಿ ನೋಡುವವರಿಗೆ ಇದೆ ಸರ್​​ಪ್ರೈಸ್​?
ಅದಾ ಶರ್ಮಾ
Follow us on

‘ದಿ ಕೇರಳ ಸ್ಟೋರಿ’ ಸಿನಿಮಾ (The Keral Story) ಕಳೆದ ವರ್ಷ ಮೇ ತಿಂಗಳಲ್ಲಿ ರಿಲೀಸ್ ಆಯಿತು. ಥಿಯೇಟರ್​ನಲ್ಲಿ ಈ ಚಿತ್ರವನ್ನು ಮಿಸ್​ ಮಾಡಿಕೊಂಡವರು ಒಟಿಟಿಯಲ್ಲಿ ನೋಡಬಹುದು ಎಂದು ಕಾದಿದ್ದರು. ಕೊನೆಗೂ ಇದಕ್ಕೆ ಮುಹೂರ್ತ ಕೂಡಿ ಬಂದಿದೆ. ಫೆಬ್ರವರಿ 16ರಂದು ಸಿನಿಮಾ ಜೀ5 ಮೂಲಕ ಪ್ರಸಾರ ಕಾಣುತ್ತಿದೆ. ಸೆನ್ಸಾರ್ ಮಂಡಳಿ ಬರೋಬ್ಬರಿ 10 ಕಡೆಗಳಲ್ಲಿ ಕತ್ತರಿ ಹಾಕಿ ‘ಎ’ ಸರ್ಟಿಫಿಕೇಟ್ ನೀಡಿತ್ತು. ಈಗ ಒಟಿಟಿಯಲ್ಲಿ ಕತ್ತರಿ ಹಾಕಿದ ಅಂಶಗಳು ಇರಲಿವೆಯೇ ಎನ್ನುವ ಪ್ರಶ್ನೆ ಮೂಡಿದೆ.

‘ದಿ ಕೇರಳ ಸ್ಟೋರಿ’ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಗಳಿಕೆ ಮಾಡಿದೆ. ಈ ರೀತಿಯ ಹಿಟ್ ಸಿನಿಮಾಗಳನ್ನು ಒಟಿಟಿ ಪ್ಲಾಟ್​ಫಾರ್ಮ್​ಗಳು ಸ್ಪರ್ಧೆಗೆ ಇಳಿದು ಖರೀದಿ ಮಾಡುತ್ತವೆ. ಆದರೆ, ‘ದಿ ಕೇರಳ ಸ್ಟೋರಿ’ ವಿವಾದಗಳ ಮೂಲಕ ಸುದ್ದಿ ಆಗಿದ್ದರಿಂದ ಇದನ್ನು ಯಾರೂ ಖರೀದಿಸಿರಲಿಲ್ಲ. ಈ ಬಗ್ಗೆ ನಿರ್ಮಾಪಕ ವಿಪುಲ್ ಅಮೃತ್​ಲಾಲ್ ಶಾ ಕೂಡ ಮಾತನಾಡಿದ್ದರು. ಕೊನೆಗೂ ‘ದಿ ಕೇರಳ ಸ್ಟೋರಿ’ ಸಿನಿಮಾ ಜೀ5ನಲ್ಲಿ ರಿಲೀಸ್ ಆಗುತ್ತಿದೆ.

ಕೇರಳದ ಯುವತಿಯೊಬ್ಬಳು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ನಂತರ ಐಸಿಸ್​ಗೆ ಸೇರುವ ಕಥೆ ಈ ಚಿತ್ರದಲ್ಲಿ ತೋರಿಸಲಾಗಿದೆ. ಈ ರೀತಿ 32 ಸಾವಿರ ಪ್ರಕರಣಗಳು ನಡೆದಿವೆ ಎಂದು ಆರಂಭದಲ್ಲಿ ನಿರ್ದೇಶಕ ಸುದಿಪ್ತೋ ಸೇನ್ ಹೇಳಿದ್ದರು. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ನಂತರ ಈ ಸಂಖ್ಯೆಯನ್ನು ಬದಲಾಯಿಸಲಾಗಿದೆ.

ಸೆನ್ಸಾರ್ ಮಂಡಳಿ ಚಿತ್ರಕ್ಕೆ ಎ ಪ್ರಮಾಣಪತ್ರ ನೀಡುವುದರ ಜೊತೆಗೆ 10 ದೃಶ್ಯಗಳಿಗೆ ಕತ್ತರಿ ಹಾಕಿದೆ. ಈಗ ಒಟಿಟಿಗೆ ರಿಲೀಸ್ ಆಗುವಾಗ ಆ ಕತ್ತರಿ ಹಾಕಿದ ದೃಶ್ಯಗಳನ್ನು ಸೇರಿಸಲಾಗುತ್ತದೆ ಎನ್ನುವ ಸುದ್ದಿ ಹರಿದಾಡಿದೆ. ಇದು ನಿಜವಾಗಲಿ ಎಂದು ವೀಕ್ಷಕರು ಬಯಸುತ್ತಿದ್ದಾರೆ. ಈಗಾಗಲೇ ಸೆನ್ಸಾರ್ ಆದ ಕಾಪಿಯನ್ನೇ ಪ್ರಸಾರ ಮಾಡಲು ಜೀ5 ನಿರ್ಧರಿಸಿದೆ ಎನ್ನಲಾಗುತ್ತಿದೆ. ವಿವಾದಗಳು ಉಂಟಾದರೆ ಆ ಸಿನಿಮಾಗಳನ್ನು ಪ್ಲಾಟ್​ಫಾರ್ಮ್​ನಿಂದಲೇ ತೆಗೆಯಬೇಕಾಗುತ್ತದೆ.

ಇದನ್ನೂ ಓದಿ: ರಾಮನ ಬಗ್ಗೆ ಅವಹೇಳನಕಾರಿ ಡೈಲಾಗ್; ವಿರೋಧದ ಬಳಿಕ ಸಿನಿಮಾನ ಡಿಲೀಟ್ ಮಾಡಿದ ನೆಟ್​ಫ್ಲಿಕ್ಸ್

ಇತ್ತೀಚೆಗೆ ‘ಅನ್ನಪೂರ್ಣಿ’ ಸಿನಿಮಾ ಸಾಕಷ್ಟು ವಿವಾದ ಹುಟ್ಟುಹಾಕಿತ್ತು. ‘ರಾಮನೂ ಮಾಂಸಹಾರ ಸೇವನೆ ಮಾಡಿದ್ದ’ ಎನ್ನುವ ಡೈಲಾಗ್ ಚರ್ಚೆ ಹುಟ್ಟುಹಾಕಿತ್ತು. ನಂತರ ಈ ಚಿತ್ರವನ್ನು ಒಟಿಟಿಯಿಂದ ಹಿಂದಕ್ಕೆ ಪಡೆಯಲಾಗಿತ್ತು. ಆ ರೀತಿ ಆಗಬಾರದು ಎಂದು ಜೀ5 ಎಚ್ಚರಿಕೆ ವಹಿಸುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ