ರಾಮನ ಬಗ್ಗೆ ಅವಹೇಳನಕಾರಿ ಡೈಲಾಗ್; ವಿರೋಧದ ಬಳಿಕ ಸಿನಿಮಾನ ಡಿಲೀಟ್ ಮಾಡಿದ ನೆಟ್​ಫ್ಲಿಕ್ಸ್

‘ಅನ್ನಪೂರ್ಣಿ’ ಸಿನಿಮಾ ರಿಲೀಸ್ ಬಳಿಕ BycottNetflix ಹ್ಯಾಶ್​ ಟ್ಯಾಗ್ ಟ್ರೆಂಡ್ ಆಗಿತ್ತು. ಶಿವಸೇನೆ ಮಾಜಿ ನಾಯಕ ರಮೇಶ್ ಸೋಲಂಕಿ ಕೇಸ್ ಕೂಡ ದಾಖಲಿಸಿದ್ದರು. ಇದಾದ ಬಳಿಕ ನೆಟ್​ಫ್ಲಿಕ್ಸ್ ಎಚ್ಚೆತ್ತುಕೊಂಡಿದ್ದು, ಸಿನಿಮಾನ ಡಿಲೀಟ್ ಮಾಡಿದೆ.

ರಾಮನ ಬಗ್ಗೆ ಅವಹೇಳನಕಾರಿ ಡೈಲಾಗ್; ವಿರೋಧದ ಬಳಿಕ ಸಿನಿಮಾನ ಡಿಲೀಟ್ ಮಾಡಿದ ನೆಟ್​ಫ್ಲಿಕ್ಸ್
ಅನ್ನಪೂರ್ಣಿ ಸಿನಿಮಾದ ದೃಶ್ಯ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jan 11, 2024 | 3:22 PM

ತಮಿಳಿನ ‘ಅನ್ನಪೂರ್ಣಿ: ದಿ ಗಾಡೆಸ್ ಆಫ್ ಫುಡ್’ ಸಿನಿಮಾ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಈ ಸಿನಿಮಾದಲ್ಲಿ ರಾಮನ ಬಗ್ಗೆ ಇರುವ ಒಂದು ಅವಹೇಳನಕಾರಿ ಡೈಲಾಗ್ ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಇದನ್ನು ಅನೇಕರು ವಿರೋಧಿಸಿದ್ದರು. BycottNetflix ಹ್ಯಾಶ್​ ಟ್ಯಾಗ್ ಟ್ರೆಂಡ್ ಆಗಿತ್ತು. ಶಿವಸೇನೆ ಮಾಜಿ ನಾಯಕ ರಮೇಶ್ ಸೋಲಂಕಿ ಕೇಸ್ ಕೂಡ ದಾಖಲಿಸಿದ್ದರು. ಇದಾದ ಬಳಿಕ ನೆಟ್​ಫ್ಲಿಕ್ಸ್ ಎಚ್ಚೆತ್ತುಕೊಂಡಿದ್ದು, ಸಿನಿಮಾನ ಡಿಲೀಟ್ ಮಾಡಿದೆ. ನಿರ್ಮಾಣ ಸಂಸ್ಥೆ ಜೀ ಸ್ಟುಡಿಯೋ (Zee Studio) ಕ್ಷಮೆ ಕೇಳಿದೆ.

ಕಳೆದ ವರ್ಷ ಡಿಸೆಂಬರ್ 1ರಂದು ಥಿಯೇಟರ್​​ನಲ್ಲಿ ‘ಅನ್ನಪೂರ್ಣಿ’ ಚಿತ್ರ ಬಿಡುಗಡೆ ಆಯಿತು. ನಂತರ ಸಿನಿಮಾ ಒಟಿಟಿಯಲ್ಲಿ ಪ್ರಸಾರ ಕಂಡಿತು. ಈ ಚಿತ್ರದಲ್ಲಿ ಬರುವ ಒಂದು ದೃಶ್ಯ ಸೆನ್ಸೇಷನ್ ಸೃಷ್ಟಿ ಮಾಡಿತ್ತು. ‘ವನವಾಸದ ಸಮಯದಲ್ಲಿ ರಾಮ, ಸೀತೆ ಹಾಗೂ ಲಕ್ಷ್ಮಣ ಹಸಿವಾದಾಗ ಪ್ರಾಣಿನ ಬೇಟೆ ಆಡಿ ಸೇವಿಸಿದ್ದರು. ರಾಮಾಯಣದಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ’ ಎಂಬ ಸಂಭಾಷಣೆಗೆ ಅನೇಕರು ಟೀಕೆ ಮಾಡಿದ್ದರು.  ಹಿಂದೂ ಭಾವನೆಗೆ ದಕ್ಕೆ ಉಂಟಾಗಿದೆ ಎಂದು ಅನೇಕರು ಹೇಳಿದ್ದರು.

‘ಹಿಂದೂ ಅರ್ಚಕನ ಮಗಳು ಬಿರಿಯಾನಿ ಮಾಡಲು ನಮಾಜ್ ಮಾಡುತ್ತಾಳೆ. ಸಿನಿಮಾದಲ್ಲಿ ಲವ್ ಜಿಹಾದ್ ಪ್ರಮೋಷನ್. ಕಥಾ ನಾಯಕ ಶ್ರೀರಾಮ ಕೂಡ ಮಾಂಸಹಾರಿ ಎಂದು ಹೇಳುವ ಮೂಲಕ ನಾಯಕಿಗೆ ಮಾಂಸ ತಿನ್ನುವಂತೆ ಪ್ರೇರೇಪಿಸಿದ್ದಾನೆ. ಇದು ಹಿಂದೂ ಭಾವನೆಗೆ ಧಕ್ಕೆ ತಂದಂತಾಗಿದೆ’ ಎಂದು ರಮೇಶ್ ಸೋಲಂಕಿ ಹೇಳಿದ್ದರು. ನಯನತಾರಾ, ಜೈ, ನೀಲೇಶ್ ಕೃಷ್ಣ, ನಿರ್ಮಾಪಕ ಜತಿನ್ ಸೇತಿ, ಆರ್​ ರವೀಂದ್ರನ್, ಪುನಿತ್, ಜೀ ಸ್ಟುಡಿಯೋ ಮುಖ್ಯ ಬಿಸ್ನೆಸ್ ಆಫೀಸರ್ ಶರೀಖ್ ಪಟೇಲ್ ಹಾಗೂ ನೆಟ್​ಫ್ಲಿಕ್ಸ್​ನ ಇಂಡಿಯಾದ ಮುಖ್ಯಸ್ಥೆ ಮೋನಿಕಾ ಶೆರ್ಗಿಲ್ ವಿರುದ್ಧ ಕೇಸ್ ದಾಖಲಾಗಿತ್ತು.

ಈ ವಿವಾದದ ಬಳಿಕ ನೆಟ್​ಫ್ಲಿಕ್ಸ್ ಎಚ್ಚೆತ್ತುಕೊಂಡಿದೆ. ಈಗಾಗಲೇ ಸಿನಿಮಾನ ತೆಗೆಯಲಾಗಿದೆ. ವಿಶ್ವ ಹಿಂದೂ ಪರಿಷತ್​ಗೆ ಜೀ ಸ್ಟುಡಿಯೋ ಕ್ಷಮೆ ಕೇಳಿದೆ. ಜೊತೆಗೆ ವಿವಾದಾತ್ಮಕ ದೃಶ್ಯವನ್ನು ತೆಗೆಯುವ ಭರವಸೆ ನೀಡಿದೆ. ‘ನಮಗೆ ಧಾರ್ಮಿಕ ಭಾವನೆಗೆ ಹಾನಿ ಮಾಡುವ ಯಾವುದೇ ಉದ್ದೇಶ ಇಲ್ಲ. ನಾವು ಕ್ಷಮೆ ಕೇಳುತ್ತೇವೆ’ ಎಂದು ನಿರ್ಮಾಣ ಸಂಸ್ಥೆ ಜೀ ಸ್ಟುಡಿಯೋ ತಿಳಿಸಿದೆ.

ಇದನ್ನೂ ಓದಿ: ‘ರಾಮನೂ ಮಾಂಸಾಹಾರ ಸೇವನೆ ಮಾಡಿದ್ದ’; ನಯನತಾರಾ ಸಿನಿಮಾ ಡೈಲಾಗ್ ವಿರುದ್ಧ ಎದ್ದಿದೆ ಅಪಸ್ವರ

ಅನ್ನಪೂರ್ಣಿ (ನಯನತಾರಾ) ಸಾಂಪ್ರದಾಯಿಕ ಕುಟುಂಬದಲ್ಲಿ ಹುಟ್ಟಿದವಳು. ಅವಳಿಗೆ ಅಡುಗೆ ಮಾಡುವ ಪ್ಯಾಷನ್ ಇರುತ್ತದೆ. ಸಂಪ್ರದಾಯ ಹಾಗೂ ಪ್ಯಾಷನ್ ಮಧ್ಯೆ ಸಿಕ್ಕಿ ಆಕೆ ಒದ್ದಾಡುತ್ತಾಳೆ. ಕಥಾ ನಾಯಕಿಗೆ ಮುಸ್ಲಿಂ ಧರ್ಮದ ಯುವಕನ ಜೊತೆ ಪ್ರೀತಿ ಆಗುತ್ತದೆ. ಇದನ್ನು ಅನೇಕರು ವಿರೋಧಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
Daily Devotional: ಮಾಂಗಲ್ಯ ಸರ ತುಂಡಾದರೆ ಏನು ಮಾಡಬೇಕು? ವಿಡಿಯೋ ನೋಡಿ
Daily Devotional: ಮಾಂಗಲ್ಯ ಸರ ತುಂಡಾದರೆ ಏನು ಮಾಡಬೇಕು? ವಿಡಿಯೋ ನೋಡಿ