ನಟಿ ಆಲಿಯಾ ಭಟ್ (Alia Bhatt) ಅವರು ಇತ್ತೀಚೆಗೆ ಮಗುವಿನ ಆಗಮನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟರು. ಪ್ರೆಗ್ನೆನ್ಸಿಯಿಂದ ಈಗ ಆಲಿಯಾ ಒಪ್ಪಿಕೊಂಡಿರುವ ಸಿನಿಮಾ ಕೆಲಸಗಳು ವಿಳಂಬವಾಗಲಿದೆ ಎನ್ನುವ ವರದಿಗಳು ಪ್ರಕಟವಾದವು. ಆಲಿಯಾ ಅವರನ್ನು ಇಂಗ್ಲೆಂಡ್ನಿಂದ ಭಾರತಕ್ಕೆ ಕರೆತರಲು ಪತಿ ರಣಬೀರ್ ಕಪೂರ್ (Ranbir Kapoor) ಅಲ್ಲಿಗೆ ತೆರಳಲಿದ್ದಾರೆ ಎಂದು ವರದಿ ಆಯಿತು. ಇದಕ್ಕೆ ಆಲಿಯಾ ಖಡಕ್ ಉತ್ತರ ನೀಡಿದ್ದರು. ಓಪನ್ ಆಗಿಯೇ ಈ ಬಗ್ಗೆ ಅವರು ಅಸಮಾಧಾನ ಹೊರಹಾಕಿದ್ದಾರೆ. ಈಗ ಆಲಿಯಾ ಬೆಂಬಲಕ್ಕೆ ಅನೇಕರು ನಿಂತಿದ್ದಾರೆ. ಪಾಕಿಸ್ತಾನದ ನಟಿಯರೂ ಆಲಿಯಾಗೆ ಸಪೋರ್ಟ್ ಮಾಡಿದ್ದಾರೆ.
ಸೆಲೆಬ್ರಿಟಿಗಳ ಬಗ್ಗೆ ನಿತ್ಯ ಹಲವು ವದಂತಿಗಳು ಹುಟ್ಟಿಕೊಳ್ಳುತ್ತಿರುತ್ತದೆ. ಬಹುತೇಕ ನಟಿಯರು ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆಲಿಯಾ ಭಟ್ ಬಗ್ಗೆಯೂ ಈ ಮೊದಲು ಹಲವು ವದಂತಿಗಳು ಹುಟ್ಟಿಕೊಂಡಿದ್ದವು. ಆದರೆ, ಇದಕ್ಕೆಲ್ಲ ಅವರು ಬೇಸರ ಮಾಡಿಕೊಂಡಿಲ್ಲ. ಆದರೆ ಅವರ ಕುರಿತು ಹರಿದಾಡಿದ ವರದಿ ಬಗ್ಗೆ ಸಿಟ್ಟಾಗಿದ್ದಾರೆ.
ಹಾಲಿವುಡ್ನ ‘ಹಾರ್ಟ್ ಆಫ್ ಸ್ಟೋನ್’ ಸಿನಿಮಾದಲ್ಲಿ ಆಲಿಯಾ ನಟಿಸುತ್ತಿದ್ದಾರೆ. ಈಗ ಆಲಿಯಾ ಪ್ರೆಗ್ನೆಂಟ್ ಆದ್ದರಿಂದ ಈ ಚಿತ್ರದ ಕೆಲಸಗಳು ವಿಳಂಬವಾಗುತ್ತದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಇನ್ನು, ಈ ಚಿತ್ರದ ಶೂಟಿಂಗ್ ಲಂಡನ್ನಲ್ಲಿ ನಡೆಯುತ್ತಿದೆ. ಆಲಿಯಾರನ್ನು ಕರೆತರಲು ರಣಬೀರ್ ಕಪೂರ್ ಇಂಗ್ಲೆಂಡ್ಗೆ ಹೋಗುತ್ತಾರೆ ಎನ್ನಲಾಗಿತ್ತು. ಇವೆರಡನ್ನೂ ಆಲಿಯಾ ಅಲ್ಲಗಳೆದಿದ್ದಾರೆ. ‘ನಾವಿನ್ನೂ ಪುರುಷಪ್ರಧಾನ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ಇದು 2022. ನಾವು ಹಳೇ ಕಾಲದ ಆಲೋಚನೆಯಿಂದ ಹೊರಬರಬಹುದೇ?’ ಎಂದು ಆಲಿಯಾ ಪ್ರಶ್ನೆ ಮಾಡಿದ್ದರು.
ಆಲಿಯಾ ಅವರ ಈ ಹೇಳಿಕೆಗೆ ಪಾಕಿಸ್ತಾನ ನಟಿಯರಾದ ಜಾರಾ ನೂರಾ ಅಬ್ಬಾಸ್ ಹಾಗೂ ದುರ್-ಎ-ಫಿಶನ್ ಸಲೀಮ್ ಬೆಂಬಲ ನೀಡಿದ್ದಾರೆ. ‘ಪಾಕಿಸ್ತಾನದವರು ಮಾತ್ರ ಈ ರೀತಿ ಯೋಚಿಸುತ್ತಾರೆ ಎಂದು ನಾನು ಅಂದುಕೊಂಡಿದ್ದೆ. ನಾನು ಪ್ರೆಗ್ನೆನ್ಸಿ ಘೋಷಿಸಿದಾಗ ಅನೇಕ ಬ್ರ್ಯಾಂಡ್ಗಳು ನನ್ನನ್ನು ಕೈಬಿಡಲು ಮುಂದಾದವು. ಮಹಿಳೆಯರು ಗರ್ಭಿಣಿ ಆಗುತ್ತಿದ್ದಾರೆ ಎಂದಾಗ ನಮ್ಮನ್ನು ಉಪಯೋಗಕ್ಕೆ ಬಾರದವರು ಎಂದು ಸಮಾಜ ನಿರ್ಧರಿಸುತ್ತದೆ. ನಮ್ಮ ಕಲೆಯನ್ನು ಪುರುಷರ ಎದುರು ಸಾಬೀತುಪಡಿಸಬೇಕಾಗಿಲ್ಲ’ ಎಂದು ಜಾರಾ ಬರೆದುಕೊಂಡಿದ್ದಾರೆ. ದುರ್-ಎ-ಫಿಶನ್ ಸಲೀಮ್ ಕೂಡ ಆಲಿಯಾ ಪರ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಪ್ರೆಗ್ನೆನ್ಸಿ ಘೋಷಣೆಗೂ ಮೊದಲು ಆಲಿಯಾ ಭಟ್ ತೆಗೆದುಕೊಂಡಿದ್ರು ಒಂದು ಮಹತ್ವದ ನಿರ್ಧಾರ
Alia Bhatt: ಪ್ರೆಗ್ನೆನ್ಸಿ ಬೆನ್ನಲ್ಲೇ ಆಲಿಯಾಗೆ ವಿಪರೀತ ಕೋಪ; ಅದಕ್ಕೆ ಕಾರಣ ಗಂಡನ ಕುರಿತ ಒಂದೇ ಒಂದು ಗಾಸಿಪ್