‘ಪಠಾಣ್’ ಗೆದ್ದರೂ ಸೀಕ್ವೆಲ್ನಲ್ಲಿ ನಿರ್ದೇಶಕನಿಗೆ ಗೇಟ್ ಪಾಸ್ ಕೊಟ್ಟ ನಿರ್ಮಾಪಕ
‘ವಾರ್’ ಹಾಗೂ ‘ಪಠಾಣ್’ ಮೂಲಕ ಸಿದ್ದಾರ್ಥ್ ಆನಂದ್ ದೊಡ್ಡ ಗೆಲುವು ಕಂಡರು. ಇತ್ತೀಚೆಗೆ ಮೂಡಿ ಬಂದ ಅವರ ನಿರ್ದೇಶನದ ‘ಫೈಟರ್’ ಚಿತ್ರ ಫ್ಯಾನ್ಸ್ಗೆ ಅಷ್ಟು ಇಷ್ಟ ಆಗಿಲ್ಲ. ಈ ಸಿನಿಮಾ ದೊಡ್ಡ ಪಾತ್ರವರ್ಗ ಇದ್ದ ಹೊರತಾಗಿಯೂ ಸಾಧಾರಣ ಬಿಸ್ನೆಸ್ ಮಾಡಿದೆ. ಹೀಗಾಗಿ ಆದಿತ್ಯ ಚೋಪ್ರಾ ಅವರು ಆತಂಕಕ್ಕೆ ಒಳಾಗಿದ್ದಾರೆ.
‘ಪಠಾಣ್’ ಸಿನಿಮಾ (Pathaan Movie) ಸೂಪರ್ ಹಿಟ್ ಆಗಿದೆ. ಶಾರುಖ್ ಖಾನ್ ಅವರಿಗೆ ಭರ್ಜರಿ ಯಶಸ್ಸು ತಂದುಕೊಟ್ಟ ಸಿನಿಮಾ. ಈ ಚಿತ್ರ 1000 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ಸಿದ್ದಾರ್ಥ್ ಆನಂದ್. ಅವರು ‘ಪಠಾಣ್’ ಚಿತ್ರದ ಸೀಕ್ವೆಲ್ನ ಶೂಟ್ ಮಾಡುವುದಿಲ್ಲ ಎಂದು ವರದಿ ಆಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಬೇಸರಗೊಂಡಿದ್ದಾರೆ. ನಿರ್ಮಾಪಕ ಆದಿತ್ಯ ಚೋಪ್ರಾ ಅವರು ಈ ರೀತಿ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಒಂದು ಕಾರಣ ಇದೆ.
‘ವಾರ್’ ಹಾಗೂ ‘ಪಠಾಣ್’ ಮೂಲಕ ಸಿದ್ದಾರ್ಥ್ ಆನಂದ್ ದೊಡ್ಡ ಗೆಲುವು ಕಂಡರು. ಇತ್ತೀಚೆಗೆ ಮೂಡಿ ಬಂದ ಅವರ ನಿರ್ದೇಶನದ ‘ಫೈಟರ್’ ಚಿತ್ರ ಫ್ಯಾನ್ಸ್ಗೆ ಅಷ್ಟು ಇಷ್ಟ ಆಗಿಲ್ಲ. ಈ ಸಿನಿಮಾ ದೊಡ್ಡ ಪಾತ್ರವರ್ಗ ಇದ್ದ ಹೊರತಾಗಿಯೂ ಸಾಧಾರಣ ಬಿಸ್ನೆಸ್ ಮಾಡಿದೆ. ಹೀಗಾಗಿ ಆದಿತ್ಯ ಚೋಪ್ರಾ ಅವರು ಆತಂಕಕ್ಕೆ ಒಳಾಗಿದ್ದಾರೆ. ಸಿದ್ದಾರ್ಥ್ ಆನಂದ್ ಬದಲು ಹೊಸ ನಿರ್ದೇಶಕರ ಹುಡುಕಾಟದಲ್ಲಿ ಅವರಿದ್ದಾರೆ.
ಬಾಲಿವುಡ್ನಲ್ಲಿ ಆ್ಯಕ್ಷನ್ ಸಿನಿಮಾಗಳನ್ನು ನಿರ್ದೇಶನ ಮಾಡುವ ಹಲವು ನಿರ್ದೇಶಕರು ಇದ್ದಾರೆ. ಆ ಸಾಲಿನಲ್ಲಿ ಇರುವ ನಿರ್ದೇಶಕರ ಜೊತೆ ಆದಿತ್ಯ ಚೋಪ್ರಾ ಮಾತುಕತೆಯಲ್ಲಿ ತೊಡಗಿಕೊಂಡಿದ್ದಾರೆ. ಮುಂದಿನದ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಆಗೋ ಸಾಧ್ಯತೆ ಇದೆ. ಇದರಿಂದ ಹೊಸ ರೀತಿಯ ಸಿನಿಮಾಗಳು ಮೂಡಿಬರಲು ಸಹಕಾರಿ ಆಗಲಿದೆ.
ಆದಿತ್ಯ ಚೋಪ್ರಾ ಅವರು ಈ ಮೊದಲು ಕೂಡ ಹಾಗೆಯೇ ಮಾಡಿದ್ದಾರೆ. ಒಂದು ಸಿನಿಮಾ ಹಿಟ್ ಆದರೆ ಅದರ ಸೀಕ್ವೆಲ್ಗೆ ಅವರು ಬೇರೆಯದೇ ನಿರ್ದೇಶಕರ ಆಯ್ಕೆ ಮಾಡುತ್ತಾರೆ. ‘ಟೈಗರ್’, ‘ವಾರ್’ ಸಿನಿಮಾಗಳ ಸೀಕ್ವೆಲ್ ಇದಕ್ಕೆ ಉತ್ತಮ ಉದಾಹರಣೆ. ಸದ್ಯ ‘ಪಠಾಣ್ 2’ಗೆ ಯಾವುದೇ ನಿರ್ದೇಶಕರು ಫೈನಲ್ ಆಗಿಲ್ಲ.
ಇದನ್ನೂ ಓದಿ: ‘ಪಠಾಣ್’ ಬಳಿಕ ‘ಫೈಟರ್’ಗೂ ಸಿಬಿಎಫ್ಸಿ ಅವಕೃಪೆ, ಎಲ್ಲದಕ್ಕೂ ಕಾರಣ ದೀಪಿಕಾ ಬಿಕಿನಿ
2012ರಲ್ಲಿ ‘ಏಕ್ ಥಾ ಟೈಗರ್’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದ ಮೂಲಕ ಯಶ್ ರಾಜ್ ಫಿಲ್ಮ್ಸ್ ಯೂನಿವರ್ಸ್ ಆರಂಭ ಆಯಿತು. ‘ಟೈಗರ್ ಜಿಂದಾ ಹೈ’, ‘ಟೈಗರ್ 3’ ಕೂಡ ರಿಲೀಸ್ ಆಗಿದೆ. ಈ ಯೂನಿವರ್ಸ್ನ ಅಡಿಯಲ್ಲಿ ‘ಪಠಾಣ್’, ‘ವಾರ್’ ಕೂಡ ಮೂಡಿ ಬಂದಿವೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ