ಮತ್ತೆ ಟ್ರ್ಯಾಕ್​ಗೆ ಮರಳಿದ ಪವನ್ ಕಲ್ಯಾಣ್ ಸಿನಿಮಾ; ‘ಒಜಿ’ ಕಡೆಯಿಂದ ಬಿಗ್ ಅಪ್​ಡೇಟ್

ಛಾಯಾಗ್ರಾಹಕ ರವಿ ಚಂದ್ರನ್ ಅವರು ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ‘ಒಜಿ ಸಿನಿಮಾಗೆ ಮರಳಿದ್ದೇನೆ’ ಎಂದು ಬರೆದುಕೊಂಡಿದ್ದಾರೆ. ಅವರ ಇನ್​ಸ್ಟಾಗ್ರಾಮ್ ಸ್ಟೇಟಸ್ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಸದ್ಯ ರಾಜಕೀಯ ಕೆಲಸಗಳ ಮಧ್ಯೆ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.

ಮತ್ತೆ ಟ್ರ್ಯಾಕ್​ಗೆ ಮರಳಿದ ಪವನ್ ಕಲ್ಯಾಣ್ ಸಿನಿಮಾ; ‘ಒಜಿ’ ಕಡೆಯಿಂದ ಬಿಗ್ ಅಪ್​ಡೇಟ್
ಪವನ್

Updated on: Oct 15, 2024 | 1:05 PM

ಪವನ್ ಕಲ್ಯಾಣ್ ಅವರು ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅವರು ರಾಜಕೀಯದ ಕಡೆ ಗಮನ ಹರಿಸಿದರು. ಅವರು ಈಗ ಮತ್ತೆ ಸಿನಿಮಾ ಕೆಲಸಗಳಿಗೆ ಮರಳಿದಂತಿದೆ. ಹೌದು, ‘ಒಜಿ’ ಸಿನಿಮಾದ ಶೂಟಿಂಗ್ ಮತ್ತೆ ಆರಂಭ ಆಗಿದೆ. ಈ ಬಗ್ಗೆ ಸಿನಿಮಾದ ಛಾಯಾಗ್ರಾಹಕ ರವಿ ಚಂದ್ರನ್ ಹೇಳಿದ್ದಾರೆ. ಈ ವಿಚಾರ ಕೇಳಿ ಪವನ್ ಕಲ್ಯಾಣ್ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

‘ಒಜಿ’ ಸಿನಿಮಾ ಘೋಷಣೆ ಆಗಿದ್ದು 2022ರಲ್ಲಿ. ಆ ಬಳಿಕ ಸಿನಿಮಾದ ಕೆಲಸಗಳು ನಿಧಾನವಾಗಿ ಸಾಗಿದವು. ಡಿವಿವಿ ದಾನಯ್ಯ ಅವರು ಸಿನಿಮಾನ ನಿರ್ಮಾಣ ಮಾಡುತ್ತಿದ್ದಾರೆ. ಪವನ್ ಕಲ್ಯಾಣ್, ಇಮ್ರಾನ್ ಹಷ್ಮಿ, ಪ್ರಕಾಶ್ ರಾಜ್, ಪ್ರಿಯಾಂಕಾ ಮೋಹನ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಪವನ್ ಕಲ್ಯಾಣ್ ರಾಜಕೀಯದಲ್ಲಿ ಬ್ಯುಸಿ ಇದ್ದ ಕಾರಣ ಅವರು ಸಿನಿಮಾ ಕಡೆ ಗಮನ ಹರಿಸಿರಲಿಲ್ಲ.

ಛಾಯಾಗ್ರಾಹಕ ರವಿ ಚಂದ್ರನ್ ಅವರು ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ‘ಒಜಿ ಸಿನಿಮಾಗೆ ಮರಳಿದ್ದೇನೆ’ ಎಂದು ಬರೆದುಕೊಂಡಿದ್ದಾರೆ. ಅವರ ಇನ್​ಸ್ಟಾಗ್ರಾಮ್ ಸ್ಟೇಟಸ್ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಸದ್ಯ ರಾಜಕೀಯ ಕೆಲಸಗಳ ಮಧ್ಯೆ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.

‘ಒಜಿ’ ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾಗಿದೆ. ‘ಸಾಹೋ’ ಸಿನಿಮಾ ಮಾಡಿದ್ದ ಸುಜೀತ್ ಅವರು ‘ಒಜಿ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಪ್ರಭಾಸ್ ನಟನೆಯ ‘ಸಾಹೋ’ ಸಿನಿಮಾ ಹೀನಾಯವಾಗಿ ಸೋತಿತ್ತು. ಈಗ ‘ಒಜಿ’ ಚಿತ್ರ 2025ರ ಮಾರ್ಚ್​​ನಲ್ಲಿ ತೆರೆಗೆ ಬರುತ್ತಿದೆ. ಈ ಸಿನಿಮಾ ಯಾವ ರೀತಿಯಲ್ಲಿ ಮೂಡಿ ಬರುತ್ತಿದೆ ಎನ್ನುವ ಅಭಿಮಾನಿಗಳಿಗೆ ಮೂಡಿದೆ.

ಇದನ್ನೂ ಓದಿ: ಪವನ್ ಕಲ್ಯಾಣ್ ಹಾಗೂ ಅಲಿ ಗೆಳೆತನ ಸರಿ ಇಲ್ಲ ಎಂದವರಿಗೆ ಇಲ್ಲಿದೆ ಉತ್ತರ

ಇತ್ತೀಚೆಗೆ ಆಂಧ್ರ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣ ಆಗಿತ್ತು. ಈ ವೇಳೆ ಪವನ್ ಕಲ್ಯಾಣ್ ಅವರು ಸಹಾಯಕ್ಕೆ ಧಾವಿಸಿದ್ದರು. ಸರ್ಕಾರದಿಂದ ನೆರವು ನೀಡುವುದರ ಜೊತೆಗೆ ತಮ್ಮ ಖಾತೆಯಿಂದಲೂ ಅವರು ಹಣ ನೀಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.