ಪವನ್ ಕಲ್ಯಾಣ್ ಹಾಗೂ ಅಲಿ ಗೆಳೆತನ ಸರಿ ಇಲ್ಲ ಎಂದವರಿಗೆ ಇಲ್ಲಿದೆ ಉತ್ತರ

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅಲಿ ಅವರು ಪವನ್ ಕಲ್ಯಾಣ್ ಅವರನ್ನು ಟೀಕಿಸಿದ್ದರು. ಪವನ್ ಕಲ್ಯಾಣ್ ಹಾಗೂ ಅಲಿ ಮಧ್ಯೆ ಸಾಕಷ್ಟು ರಾಜಕೀಯ ಭಿನ್ನಾಭಿಪ್ರಾಯಗಳು ಇವೆ. ಆದಾಗ್ಯೂ ಅಲಿ ಅವರು ಪವನ್ ಕಲ್ಯಾಣ್ ಅವರನ್ನು ತಮ್ಮ ಮಗಳ ಮದುವೆಗೆ ಆಮಂತ್ರಿಸಿದ್ದರು.

ಪವನ್ ಕಲ್ಯಾಣ್ ಹಾಗೂ ಅಲಿ ಗೆಳೆತನ ಸರಿ ಇಲ್ಲ ಎಂದವರಿಗೆ ಇಲ್ಲಿದೆ ಉತ್ತರ
ಪವನ್ ಕಲ್ಯಾಣ್ ಹಾಗೂ ಅಲಿ ಗೆಳೆತನ ಸರಿ ಇಲ್ಲ ಎಂದವರಿಗೆ ಇಲ್ಲಿದೆ ಉತ್ತರ
Follow us
ರಾಜೇಶ್ ದುಗ್ಗುಮನೆ
|

Updated on: Sep 20, 2024 | 6:55 AM

ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಸಿನಿಮಾ ಜೊತೆ ರಾಜಕೀಯದಲ್ಲೂ ತೊಡಗಿಕೊಂಡಿದ್ದಾರೆ. ಅವರು ಕಾಮಿಡಿಯನ್ ಅಲಿ ಜೊತೆಗೆ ಒಳ್ಳೆಯ ಸಂಬಂಧ ಹೊಂದಿದ್ದರು. ಆದರೆ, ಇದು ಸಾಕಷ್ಟು ಏರಿಳಿತ ಕಂಡಿದೆ. ಅಲಿ ಅವರು ವೈಎಸ್​ಆರ್​ಸಿಪಿ ಪಕ್ಷ ಸೇರಿದ ಸಂದರ್ಭದಲ್ಲಿ ಪವನ್ ಕಲ್ಯಾಣ್ ಜನಸೇನಾ ಪಕ್ಷ ಸ್ಥಾಪಿಸಿದರು. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅಲಿ ಅವರು ಪವನ್ ಕಲ್ಯಾಣ್ ಅವರನ್ನು ಟೀಕಿಸಿದರು. ಈಗ ಇವರ ಸಂಬಂಧದ ಬಗ್ಗೆ ಅಲಿ ಮಾತನಾಡಿದ್ದಾರೆ.

ಅಲಿ ಹಾಗೂ ಪವನ್ ಕಲ್ಯಾಣ್ ಮಧ್ಯೆ ಸಾಕಷ್ಟು ರಾಜಕೀಯ ಭಿನ್ನಾಭಿಪ್ರಾಯಗಳು ಇವೆ. ಆದಾಗ್ಯೂ ಅಲಿ ಅವರು ಪವನ್ ಕಲ್ಯಾಣ್ ಅವರನ್ನು ತಮ್ಮ ಮಗಳ ಮದುವೆಗೆ ಆಮಂತ್ರಿಸಿದ್ದರು. ಆದರೆ, ಪವನ್ ಕಲ್ಯಾಣ್ ಈ ಮದುವೆಗೆ ಹೋಗಲು ಸಾಧ್ಯವಾಗಿಲ್ಲ. ಹೀಗಾಗಿ, ಇವರ ಸಂಬಂಧ ಸರಿ ಆಗಿಲ್ಲ ಎಂದೇ ಹೇಳಲಾಗಿತ್ತು.

ಇತ್ತೀಚೆಗೆ ಅಲಿ ಅವರು ಒಂದು ಅಚ್ಚರಿಯ ವಿಚಾರ ಬಿಚ್ಚಿಟ್ಟಿದ್ದಾರೆ. ‘ಒಜಿ’ ಸಿನಿಮಾದಲ್ಲಿ ನಟಿಸೋಕೆ ಪವನ್ ಕಲ್ಯಾಣ್ ಅವರು ಅಲಿಗೆ ಆಫರ್ ನೀಡಿದ್ದರು ಎನ್ನುವ ವಿಚಾರ ರಿವೀಲ್ ಆಗಿದೆ.  ‘ನಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾನು ಅವರ ಜೊತೆ ಸಿನಿಮಾ ಮಾಡೋಕೆ ಆಸಕ್ತಿ ಹೊಂದಿದ್ದೇನೆ. ನಮ್ಮ ಮಧ್ಯೆ ರಾಜಕೀಯ ಭಿನ್ನಾಭಿಪ್ರಾಯಗಳು ಇದ್ದರೂ ಪರಸ್ಪರ ಗೌರವ ಇದೆ’ ಎಂದು ಅಲಿ ಅವರು ಹೇಳಿದ್ದಾರೆ.

ಪವನ್ ಕಲ್ಯಾಣ್ ಅವರ ಸಿನಿಮಾಗಳಲ್ಲಿ ಅಲಿ ಕಾಮಿಡಿಯನ್ ಆಗಿ ನಟಿಸಿದ್ದಾರೆ. ಇವರ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಸಖತ್ ಇಷ್ಟ ಆಗುತ್ತದೆ. ಇವರು ಮತ್ತೆ ಒಂದಾದರೆ ಫ್ಯಾನ್ಸ್​ಗೆ ಸಖತ್ ಖುಷಿ ಸಿಗೋದು ಗ್ಯಾರಂಟಿ. ಸದ್ಯ ಬ್ರಹ್ಮಾನಂದಂ ಅವರು ಅಷ್ಟಾಗಿ ಸಿನಿಮಾಗಳನ್ನು ಮಾಡುತ್ತಿಲ್ಲ. ಈ ಸಂದರ್ಭದಲ್ಲಿ ಅಲಿ ಹಾಗೂ ಪವನ್ ಕಲ್ಯಾಣ್ ಒಟ್ಟಾಗಿ ನಟಿಸಿದರೆ ಅಭಿಮಾನಿಗಳಿಗೆ ಖುಷಿ ಆಗಲಿದೆ.

ಇದನ್ನೂ ಓದಿ: ಆಪ್ತ ಎನಿಸಿಕೊಂಡ ಜಾನಿ ಮಾಸ್ಟರ್ ವಿರುದ್ಧವೇ ಕಿರುಕುಳ ಆರೋಪ; ಕ್ರಮ ಕೈಗೊಳ್ತಾರಾ ಪವನ್ ಕಲ್ಯಾಣ್?

ಸದ್ಯ ಪವನ್ ಕಲ್ಯಾಣ್ ಅವರು ‘ಹರಿಹರ ವೀರ ಮಲ್ಲು’, ‘ಉಸ್ತಾದ್ ಭಗತ್ ಸಿಂಗ್’ ಹಾಗೂ ‘ಒಜಿ’ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಅವರು ಈಗ ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಕೂಡ ಹೌದು. ಸಿನಿಮಾ ಕೆಲಸಗಳ ಜೊತೆ ಅವರು ರಾಜಕೀಯದಲ್ಲೂ ತೊಡಗಿಕೊಂಡಿದ್ದಾರೆ. ಇತ್ತೀಚೆಗೆ ಆಂಧ್ರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಆಗ ಅವರು ಸಹಾಯಕ್ಕೆ ಇಳಿದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ