ಆಪ್ತ ಎನಿಸಿಕೊಂಡ ಜಾನಿ ಮಾಸ್ಟರ್ ವಿರುದ್ಧವೇ ಕಿರುಕುಳ ಆರೋಪ; ಕ್ರಮ ಕೈಗೊಳ್ತಾರಾ ಪವನ್ ಕಲ್ಯಾಣ್?

ರಾಷ್ಟ್ರ ಪ್ರಶಸ್ತಿ ವಿಜೇತ ಕೊರಿಯೋಗ್ರಾಫರ್ ಶೇಖ್ ಜಾನಿ ಬಾಷಾ ಅವರ ಪರಿಚಯ ಅನೇಕರಿಗೆ ಇದೆ. ಅವರು ಜಾನಿ ಮಾಸ್ಟರ್ ಎಂದೇ ಫೇಮಸ್. ಈಗ ಅವರ ವಿರುದ್ಧ ಸೈಬೆರಾಬಾದ್ ಪೊಲೀಸರು ಅತ್ಯಾಚಾರ ಆರೋಪದಡಿ ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಇವರು ಪವನ್ ಕಲ್ಯಾಣ್​ಗೆ ಆಪ್ತರು.

ಆಪ್ತ ಎನಿಸಿಕೊಂಡ ಜಾನಿ ಮಾಸ್ಟರ್ ವಿರುದ್ಧವೇ ಕಿರುಕುಳ ಆರೋಪ; ಕ್ರಮ ಕೈಗೊಳ್ತಾರಾ ಪವನ್ ಕಲ್ಯಾಣ್?
ಪವನ್ ಕಲ್ಯಾಣ್
Follow us
ರಾಜೇಶ್ ದುಗ್ಗುಮನೆ
|

Updated on: Sep 17, 2024 | 6:54 AM

ಜಾನಿ ಮಾಸ್ಟರ್ ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದೆ. 21 ವರ್ಷದ ಯುವತಿಗೆ ಹೈದರಾಬಾದ್, ಚೆನ್ನೈ ಮೊದಲಾದ ಕಡೆಗಳಲ್ಲಿ ಅತ್ಯಾಚಾರ ಮಾಡಿದ ಆರೋಪ ಇವರ ವಿರುದ್ಧ ಕೇಳಿ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಟ ಹಾಗೂ ತೆಲಂಗಾಣ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಜಾನಿ ಮಾಸ್ಟರ್ ವಿರುದ್ಧ ಕ್ರಮ ಕೈಗೊಳ್ಳುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.

ಜಾನಿ ಮಾಸ್ಟರ್ ಮೆಗಾ ಕುಟುಂಬದ ಜೊತೆ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ರಾಮ್ ಚರಣ್, ಚಿರಂಜೀವಿ, ಪವನ್ ಕಲ್ಯಾಣ್ ಮೊದಲಾದವರ ಜೊತೆ ಗೆಳೆತನ ಬೆಳೆಸಿಕೊಂಡಿದ್ದಾರೆ. ಒಂದು ಸಂದರ್ಭದಲ್ಲಿ ಅವರು ನಿರ್ದೇಶಕರಾಗಿ ಕಾಲಿಡೋಕೆ ರೆಡಿ ಆಗಿದ್ದರು. ಈ ಸಿನಿಮಾಗೆ ಪವನ್ ಕಲ್ಯಾಣ್ ಅವರೇ ಹೀರೋ ಆಗಿ ನಟಿಸಬೇಕಿತ್ತು. ಜಾನಿ ಅವರು ಪವನ್ ಕಲ್ಯಾಣ್ ಅವರ ರಾಜಕೀಯ ಜೀವನಕ್ಕೂ ಬೆಂಬಲವಾಗಿ ನಿಂತಿದ್ದಾರೆ.

ಇತ್ತೀಚಿಗಿನ ಆಂಧ್ರ ಪ್ರದೇಶ ಚುನಾವಣೆಯಲ್ಲಿ ಜಾನಿ ಮಾಸ್ಟರ್ ಅವರು ಜನಸೇನಾ ಪಕ್ಷಕ್ಕೆ ಸೇರಿದರು. ನಂತರ ಅವರು ಚುನಾವಣಾ ಪ್ರಚಾರ ಕೂಡ ಮಾಡಿದರು. ಪವನ್ ಕಲ್ಯಾಣ್ ಅವರನ್ನು ಟೀಕಿಸಿದವರ ವಿರುದ್ಧ ಹರಿಹಾಯ್ದರು. ಹೀಗಾಗಿ ಪವನ್ ಹಾಗೂ ಇವರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ.

ಈಗ ಜಾನಿ ಮಾಸ್ಟರ್ ವಿರುದ್ಧವೇ ಅತ್ಯಾಚಾರ ಆರೋಪ ಕೇಳಿ ಬಂದಿದೆ. ಅದೂ ಜನಸೇನಾ ಪಕ್ಷದ ಸದಸ್ಯನ ವಿರುದ್ಧ. ಹೀಗಾಗಿ, ಅವರ ವಿರುದ್ಧ ಪವನ್ ಕಲ್ಯಾಣ್ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಜೋರಾಗಿದೆ. ಜೊತೆಗೆ ಪಕ್ಷದ ಸದಸ್ಯತ್ವವನ್ನೂ ರದ್ದು ಮಾಡಲು ಆಗ್ರಹಿಸಲಾಗಿದೆ. ಪವನ್ ಕಲ್ಯಾಣ್ ಅವರು ಮಹಿಳಾ ಕಲ್ಯಾಣ, ಸುರಕ್ಷತೆ ಬಗ್ಗೆ ಮಾತನಾಡುತ್ತಾ ಇರುತ್ತಾರೆ. ಹೀಗಾಗಿ, ಅವರು ಜಾನಿ ಮಾಸ್ಟರ್ ವಿರುದ್ಧ ಕ್ರಮ ಕೈಗೊಂಡು ಇದನ್ನು ಸಾಬೀತು ಮಾಡಬೇಕಿದೆ.

ಇದನ್ನೂ ಓದಿ: ಜೊತೆಗಿದ್ದ ಯುವತಿಗೆ ಲೈಂಗಿಕ ಕಿರುಕುಳ; ಡ್ಯಾನ್ಸ್ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ವಿರುದ್ಧ ಕೇಸ್

ಜಾನಿ ಮಾಸ್ಟರ್ ವಿರುದ್ಧ ಅತ್ಯಾಚಾರ ಮೊದಾದಲ ಆರೋಪಗಳು ಎದುರಾಗಿವೆ. ಅವರ ವಿರುದ್ಧ ಕ್ರಮಕ್ಕೆ ಅನೇಕರು ಆಗ್ರಹಿಸಿದ್ದಾರೆ. ಜಾನಿ ಕನ್ನಡದಲ್ಲೂ ಹಲವು ಹಾಡುಗಳಿಗೆ ಕೊರಿಯೋಗ್ರಫಿ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.