‘ಕಷ್ಟದ ದಿನಗಳಲ್ಲಿ ಸಿಕ್ಕ ಸ್ನೇಹಿತ ಅವನು’: ಗೆಳೆಯನ ನೆನೆದ ಪವನ್ ಕಲ್ಯಾಣ್

Pawan Kalyan: ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಜುಲೈ 24 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಪ್ರೀ ರಿಲೀಸ್ ಇವೆಂಟ್ ನಿನ್ನೆಯಷ್ಟೆ ನಡೆದಿದ್ದು, ಕಾರ್ಯಕ್ರಮದಲ್ಲಿ ಪವನ್ ಕಲ್ಯಾಣ್ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ತಾವು ಕಷ್ಟದಲ್ಲಿದ್ದಾಗ ತಮ್ಮನ್ನು ಹುಡುಕಿಕೊಂಡು ಬಂದು ಸಹಾಯ ಮಾಡಿದ ಗೆಳೆಯರೊಬ್ಬರ ಬಗ್ಗೆ ಮಾತನಾಡಿದ್ದಾರೆ.

‘ಕಷ್ಟದ ದಿನಗಳಲ್ಲಿ ಸಿಕ್ಕ ಸ್ನೇಹಿತ ಅವನು’: ಗೆಳೆಯನ ನೆನೆದ ಪವನ್ ಕಲ್ಯಾಣ್
Pawan Kalyan

Updated on: Jul 22, 2025 | 1:16 PM

ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್ (Pawan Kalyan) ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಜುಲೈ 24 ರಂದು ಬಿಡುಗಡೆ ಆಗಲಿದೆ. ಆರು ವರ್ಷಗಳ ಹಿಂದೆ ಪ್ರಾರಂಭವಾಗಿದ್ದ ಸಿನಿಮಾ ಈಗ ಬಿಡುಗಡೆ ಕಾಣುತ್ತಿದೆ. ಆಂಧ್ರ ಡಿಸಿಎಂ ಆಗಿರುವ ಪವನ್ ಕಲ್ಯಾಣ್, ತಮ್ಮ ರಾಜಕೀಯ ಕಾರ್ಯಗಳ ನಡುವೆಯೂ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡು ಸಿನಿಮಾ ಮುಗಿಸಿಕೊಟ್ಟಿದ್ದಾರೆ. ನಿನ್ನೆ ಹೈದರಾಬಾದ್​ನಲ್ಲಿ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಅನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪವನ್ ಕಲ್ಯಾಣ್ ಅಭಿಮಾನಿಗಳನ್ನುದ್ದೇಶಿಸಿ ಆತ್ಮೀಯವಾಗಿ ಮಾತನಾಡಿದ್ದಾರೆ. ಈ ವೇಳೆ ತಮ್ಮ ಕಷ್ಟಕಾಲದಲ್ಲಿ ನೆರವಾದ ಗೆಳೆಯನ ಬಗ್ಗೆ ಹೇಳಿಕೊಂಡಿದ್ದಾರೆ.

ಸಿನಿಮಾಗಳಲ್ಲಿ ಕಂಡ ಏಳು-ಬೀಳುಗಳ ಬಗ್ಗೆ ಮಾತನಾಡಿರುವ ಪವನ್ ಕಲ್ಯಾಣ್, ‘ನಾನು ಸಿನಿಮಾಗಳಲ್ಲಿ ಗೆಲುವಿಗಿಂತಲೂ ಸೋಲನ್ನೇ ನೋಡಿದ್ದು ಹೆಚ್ಚು. ಒಂದು ಹಂತದಲ್ಲಿ ಸತತವಾಗಿ ಸಿನಿಮಾ ಸೋತಿತ್ತು. ಗೆದ್ದಾಗ ಎಲ್ಲರೂ ಸ್ನೇಹಿತರೆ ಆದರೆ ಸೋಲಿನಲ್ಲಿ ನನ್ನನ್ನು ಹುಡುಕಿಕೊಂಡು ಬಂದಿದ್ದು ತ್ರಿವಿಕ್ರಮ್ ಶ್ರೀನಿವಾಸ್. ನಾನು ಸೋತು, ಸಿನಿಮಾ ಲೋಕದ ಯಾರೂ ನನ್ನ ಹತ್ತಿರ ಇಲ್ಲದಾಗ ನನ್ನನ್ನು ಹುಡುಕಿಕೊಂಡು ಬಂದಿದ್ದು ತ್ರಿವಿಕ್ರಮ್ ಶ್ರೀನಿವಾಸ್, ಆತ ನನ್ನ ಕಷ್ಟ ಕಾಲದ ಗೆಳೆಯ’ ಎಂದಿದ್ದಾರೆ ಪವನ್.

‘ನಾನು ಸೋತಿದ್ದಾಗ ನನಗೆ ‘ಜಲ್ಸ’ ಸಿನಿಮಾ ಮಾಡಿ ಗೆಲುವು ತಂದುಕೊಟ್ಟರು. ಆಗ ತ್ರಿವಿಕ್ರಮ್ ಶ್ರೀನಿವಾಸ್ ಯಾರೆಂದು ಸಹ ನನಗೆ ಗೊತ್ತಿರಲಿಲ್ಲ. ಆದರೆ ಅವರ ಗೆಳೆತನ ನನಗೆ ಇಷ್ಟವಾಯ್ತು. ನನ್ನ ಬಳಿ ಯಾವ ದೊಡ್ಡ ನಿರ್ದೇಶಕರೂ ಇಲ್ಲ. ನನಗೆ ಯಾವ ದೊಡ್ಡ ನಿರ್ದೇಶಕರೂ ಸಿನಿಮಾ ಮಾಡುವುದಿಲ್ಲ. ನನಗೆ ಇರುವುದು ತ್ರಿವಿಕ್ರಮ್ ಶ್ರೀನಿವಾಸ್’ ಎಂದಿದ್ದಾರೆ ಪವನ್ ಕಲ್ಯಾಣ್.

ಇದನ್ನೂ ಓದಿ:‘ಹರಿ ಹರ ವೀರ ಮಲ್ಲು’: ಎಲ್ಲ ಗೊಂದಲಗಳಿಗೆ ತೆರೆ ಎಳೆದ ಪವನ್ ಕಲ್ಯಾಣ್

‘ಜಲ್ಸಾ’ ಸಿನಿಮಾಕ್ಕೆ ಮುಂಚೆ ಪವನ್ ಕಲ್ಯಾಣ್, ‘ಬಾಲು’ ಸಿನಿಮಾ ಮಾಡಿದ್ದರು ಅದು ಸೋತಿತು. ಬಳಿಕ ‘ಬಂಗಾರಂ’ ಮಾಡಿದರು ಅದು ಸಾಧಾರಣ ಯಶಸ್ಸನ್ನಷ್ಟೆ ಗಳಿಸಿತು, ಬಳಿಕ ‘ಅನ್ನವರಂ’ ಮಾಡಿದರು ಅದೂ ಸಹ ಸೋತಿತು. ಅದರ ಬಳಿಕ ಬಂದ ‘ಜಲ್ಸ’ ಸಿನಿಮಾ ದೊಡ್ಡ ಹಿಟ್ ಆಯ್ತು. ಬಳಿಕ 2013 ರಲ್ಲಿ ತ್ರಿವಿಕ್ರಮ್ ಶ್ರೀನಿವಾಸ್ ಜೊತೆಗೆ ‘ಅತ್ತಾರಿಂಟಿಕಿ ದಾರೇದಿ’ ಸಿನಿಮಾ ಮಾಡಿದರು ಅದು ಬ್ಲಾಕ್ ಬಸ್ಟರ್ ಆಯ್ತು. 2018 ರಲ್ಲಿ ತ್ರಿವಿಕ್ರಮ್ ಶ್ರೀನಿವಾಸ್, ಪವನ್ ಕಲ್ಯಾಣ್​ಗಾಗಿ ‘ಅಜ್ಞಾತವಾಸಿ’ ಸಿನಿಮಾ ನಿರ್ದೇಶನ ಮಾಡಿದರು. ಆದರೆ ಆ ಸಿನಿಮಾ ಅಟ್ಟರ್ ಫ್ಲಾಪ್ ಆಯ್ತು.

ತ್ರಿವಿಕ್ರಮ್ ಶ್ರೀನಿವಾಸ್ ಮತ್ತು ಪವನ್ ಕಲ್ಯಾಣ್ ಬಲು ಆತ್ಮೀಯ ಗೆಳೆಯರು. ಪವನ್ ಕಲ್ಯಾಣ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಾಗ ಅವರಿಗೆ ಬೆಂಬಲ ನೀಡಿದ್ದ ತ್ರಿವಿಕ್ರಮ್ ಶ್ರೀನಿವಾಸ್, ಕಳೆದ ಆಂಧ್ರ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಪವನ್ ಜೊತೆಗಿದ್ದು ಬೆಂಬಲ ನೀಡಿದ್ದರು. ತ್ರಿವಿಕ್ರಮ್ ಶ್ರೀನಿವಾಸ್ ಪ್ರಸ್ತುತ ವೆಂಕಟೇಶ್ ಅವರಿಗಾಗಿ ಒಂದು ಸಿನಿಮಾ ಹಾಗೂ ಜೂ ಎನ್​ಟಿಆರ್​ಗಾಗಿ ಒಂದು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಜೂ ಎನ್​ಟಿಆರ್ ಅವರಿಗಾಗಿ ‘ಮುರುಗನ್’ ಸಿನಿಮಾ ಮಾಡುತ್ತಿದ್ದು, ಈ ಸಿನಿಮಾ ಪೌರಾಣಿಕ ಕತೆಯನ್ನು ಆಧರಿಸಿದ ಸಿನಿಮಾ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:15 pm, Tue, 22 July 25