ಭರ್ಜರಿಯಾಗಿ ಬಿಡುಗಡೆ ಆಗಲಿದೆ ‘ಉಸ್ತಾದ್ ಭಗತ್ ಸಿಂಗ್’ ಗಗನಕ್ಕೇರಲಿದೆ ಟಿಕೆಟ್ ಬೆಲೆ

Pawan Kalyan movie: ‘ಟಾಕ್ಸಿಕ್’ ಹಿಂದೆ ಸರಿದಿದ್ದರಿಂದ ಮಾರ್ಚ್ 19ರಂದು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಬಿಡುಗಡೆ ಆಗಲಿದೆ. ಇದು ಪವನ್ ಕಲ್ಯಾಣ್ ಅವರ ‘ತಾತ್ಕಾಲಿಕ ಕೊನೆಯ ಸಿನಿಮಾ’ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಇದೇ ಕಾರಣಕ್ಕೆ ಬಲು ಅದ್ಧೂರಿಯಾಗಿ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ಭರ್ಜರಿಯಾಗಿ ಬಿಡುಗಡೆ ಆಗಲಿದೆ ‘ಉಸ್ತಾದ್ ಭಗತ್ ಸಿಂಗ್’ ಗಗನಕ್ಕೇರಲಿದೆ ಟಿಕೆಟ್ ಬೆಲೆ
Pawan Kalyan

Updated on: Mar 06, 2026 | 12:37 PM

ಯಶ್ ನಟನೆಯ ‘ಟಾಕ್ಸಿಕ್’ (Toxic) ಸಿನಿಮಾದ ಬಿಡುಗಡೆ ಮುಂದೂಡಲಾಗಿದ್ದು, ಇದೀಗ ಅದೇ ದಿನಾಂಕಕ್ಕೆ ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಬಿಡುಗಡೆ ಆಗಲಿದೆ. ಈ ಮೊದಲು ಮಾರ್ಚ್ 26ಕ್ಕೆ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿತ್ತು. ಆದರೆ ‘ಟಾಕ್ಸಿಕ್’ ಹಿಂದೆ ಸರಿದಿದ್ದರಿಂದ ಆ ದಿನಾಂಕದಂದು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಬಿಡುಗಡೆ ಆಗಲಿದೆ. ಇದು ಪವನ್ ಕಲ್ಯಾಣ್ ಅವರ ‘ತಾತ್ಕಾಲಿಕ ಕೊನೆಯ ಸಿನಿಮಾ’ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಇದೇ ಕಾರಣಕ್ಕೆ ಬಲು ಅದ್ಧೂರಿಯಾಗಿ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ಪವನ್ ಕಲ್ಯಾಣ್ ಇದೀಗ ಆಂಧ್ರದ ಡಿಸಿಎಂ ಆಗಿದ್ದು, ಅವರು ಆಂಧ್ರ ಪ್ರದೇಶ ಚುನಾವಣೆ ಘೋಷಣೆಗೆ ಮುಂಚೆ ಒಪ್ಪಿಕೊಂಡಿದ್ದ ಮೂರು ಸಿನಿಮಾಗಳಲ್ಲಿ ಕೊನೆಯ ಸಿನಿಮಾ ‘ಉಸ್ತಾದ್ ಭಗತ್ ಸಿಂಗ್’ ಆಗಿದೆ. ಈ ಸಿನಿಮಾದ ಬಳಿಕ ಅಧಿಕಾರದಲ್ಲಿದ್ದಷ್ಟು ವರ್ಷ ಅವರು ಸಿನಿಮಾಗಳಲ್ಲಿ ನಟಿಸುವುದಿಲ್ಲ ಎನ್ನಲಾಗುತ್ತಿದೆ. ಹಾಗಾಗಿ ತಾತ್ಕಾಲಿಕವಾಗಿ ಇದು ಅವರ ಕೊನೆಯ ಸಿನಿಮಾ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದೇ ಕಾರಣಕ್ಕೆ ಸಿನಿಮಾವನ್ನು ಭಾರಿ ಅದ್ಧೂರಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಮಾರ್ಚ್ 19ರಂದು ಅಧಿಕೃತವಾಗಿ ಬಿಡುಗಡೆ ಆಗಲಿದ್ದು, ಹಿಂದಿನ ದಿನದಿಂದಲೇ ಆಂಧ್ರ, ತೆಲಂಗಾಣ, ಕರ್ನಾಟಕ ರಾಜ್ಯಗಳಲ್ಲಿ ಪ್ರೀಮಿಯರ್ ಶೋಗಳನ್ನು ಆಯೋಜಿಸಲು ಸಿದ್ಧತೆ ಆರಂಭವಾಗಿದೆ. ಅಲ್ಲದೆ, ಸಿನಿಮಾದ ಪ್ರೀಮಿಯರ್ ಶೋ ಟಿಕೆಟ್​​ಗೆ ಬೆಲೆ ಸಹ ಬಲು ದುಬಾರಿಯೇ ಇರಲಿದೆ. ತೆಲಂಗಾಣ ಮತ್ತು ಆಂಧ್ರ ಎರಡೂ ರಾಜ್ಯಗಳಲ್ಲಿ ಟಿಕೆಟ್ ಬೆಲೆ ಏರಿಸಲು ಸುಲಭವಾಗಿ ಅವಕಾಶ ಸಿಗಲಿದೆ. ಇನ್ನು ಕರ್ನಾಟಕದಲ್ಲಿ ಯಾವ ಅನುಮತಿಯೂ ಬೇಕಾಗಿಲ್ಲ. ಹಾಗಾಗಿ ಸಹಜವಾಗಿಯೇ ನೆರೆಯ ರಾಜ್ಯಗಳಿಗಿಂತಲೂ ಕರ್ನಾಟಕದಲ್ಲೇ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಟಿಕೆಟ್ ಬೆಲೆ ಹೆಚ್ಚಿರಲಿದೆ.

ಇದನ್ನೂ ಓದಿ:‘ಟಾಕ್ಸಿಕ್’ ಬಿಡುಗಡೆ ಮುಂದೂಡಿಕೆಗೆ ಕಾರಣವೇನು: ಒತ್ತಡಕ್ಕೇ ಮಣಿದರೇ ಯಶ್?

‘ಉಸ್ತಾದ್ ಭಗತ್ ಸಿಂಗ್’ ಸಿನಿಮಾನಲ್ಲಿ ಪವನ್ ಕಲ್ಯಾಣ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾನಲ್ಲಿ ಕನ್ನಡತಿ ಶ್ರೀಲೀಲಾ ನಾಯಕಿ. ಸಿನಿಮಾ ನಿರ್ದೇಶನ ಮಾಡಿರುವುದು ಪವನ್ ಅವರ ಆಪ್ತ ಹರೀಶ್ ಶಂಕರ್. ಸಿನಿಮಾಕ್ಕೆ ದೇವಿಶ್ರೀ ಪ್ರಸಾದ್ ಮತ್ತು ತಮನ್ ಇಬ್ಬರೂ ಸಂಗೀತ ನೀಡಿದ್ದಾರೆ. ಸಿನಿಮಾ ಇದೇ ಮಾರ್ಚ್ 19ರಂದು ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:39 am, Fri, 6 March 26

Follow Us