‘ಅವಳ ಜೊತೆ ಹಾಯಾಗಿರಲಿ’; ಬಿಗ್ ಬಾಸ್​ನಿಂದ ಬಂದ ಬೆನ್ನಲ್ಲೇ ಪತಿಗೆ ವಿಚ್ಛೇದನ ಕೊಡೋಕೆ ಮುಂದಾದ ಪಾಯಲ್

ಪಾಯಲ್ ಹಾಗೂ ಕೃತಿಕಾ ಕೂಡ ಅರ್ಮಾನ್ ಜೊತೆ ಬಿಗ್ ಬಾಸ್ ಮನೆಗೆ ತೆರಳಿದ್ದರು. ಇತ್ತೀಚೆಗೆ ಪಾಯಲ್ ದೊಡ್ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಈಗ ಅವರು ಅರ್ಮಾನ್​ಗೆ ವಿಚ್ಛೇದನ ಕೊಡೋ ನಿರ್ಧಾರಕ್ಕೆ ಬಂದಿದ್ದಾರೆ.  

‘ಅವಳ ಜೊತೆ ಹಾಯಾಗಿರಲಿ’; ಬಿಗ್ ಬಾಸ್​ನಿಂದ ಬಂದ ಬೆನ್ನಲ್ಲೇ ಪತಿಗೆ ವಿಚ್ಛೇದನ ಕೊಡೋಕೆ ಮುಂದಾದ ಪಾಯಲ್
ಬಿಗ್ ಬಾಸ್​ನಿಂದ ಬಂದ ಬೆನ್ನಲ್ಲೇ ಪತಿಗೆ ವಿಚ್ಛೇದನ ಕೊಡೋಕೆ ಮುಂದಾದ ಪಾಯಲ್
Edited By:

Updated on: Jul 20, 2024 | 2:11 PM

ಬಿಗ್ ಬಾಸ್ ಸದಾ ವಿವಾದಗಳ ಮೂಲಕ ಸುದ್ದಿ ಆಗುತ್ತದೆ. ಸದ್ಯ ಹಿಂದಿ ಕಿರುತೆರೆಯಲ್ಲಿ ‘ಬಿಗ್ ಬಾಸ್ ಒಟಿಟಿ 3’ನೇ ಸೀಸನ್ ಪ್ರಸಾರ ಕಾಣುತ್ತಿದೆ. ಇದರಲ್ಲಿ ಅರ್ಮಾನ್ ಮಲಿಕ್ ಸಾಕಷ್ಟು ಸುದ್ದಿ ಆಗುತ್ತಿದ್ದಾರೆ. ಈ ಯೂಟ್ಯೂಬರ್​ಗೆ ಇಬ್ಬರು ಪತ್ನಿಯರು ಇದ್ದಾರೆ. ಅವರ ಹೆಸರು ಪಾಯಲ್ ಹಾಗೂ ಕೃತಿಕಾ. ಪಾಯಲ್ ಹಾಗೂ ಕೃತಿಕಾ ಕೂಡ ಅರ್ಮಾನ್ ಜೊತೆ ಬಿಗ್ ಬಾಸ್ ಮನೆಗೆ ತೆರಳಿದ್ದರು. ಇತ್ತೀಚೆಗೆ ಪಾಯಲ್ ದೊಡ್ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಈಗ ಅವರು ಅರ್ಮಾನ್​ಗೆ ವಿಚ್ಛೇದನ ಕೊಡೋ ನಿರ್ಧಾರಕ್ಕೆ ಬಂದಿದ್ದಾರೆ.

ಪಾಯಲ್ ಅವರು ಈ ಬಗ್ಗೆ ವ್ಲಾಗ್​ನಲ್ಲಿ ಮಾಹಿತಿ ನೀಡಿದ್ದಾರೆ. ‘ಈ ನಾಟಕ ಹಾಗೂ ದ್ವೇಷಗಳಿಂದ ನಾನು ಬೇಸತ್ತಿದ್ದೇನೆ. ನನಗೇನೋ ತೊಂದರೆ ಇಲ್ಲ, ಆದರೆ ಅದು ನನ್ನ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ಇದು ನಿಜಕ್ಕೂ ಆಘಾತಕಾರಿ ಹಾಗೂ ಹೊಲಸು ರೀತಿಯದ್ದು ಈ ಕಾರಣಕ್ಕೆ ಅರ್ಮಾನ್ ಅವರಿಂದ ದೂರ ಆಗಲು ಬಯಸುತ್ತಿದ್ದೇನೆ. ಅವರು ಕೃತಿಕಾ ಜೊತೆ ಇರಬಹುದು. ನನ್ನ ಮಕ್ಕಳನ್ನು ನಾನು ನೋಡಿಕೊಳ್ಳುತ್ತೇನೆ’ ಎಂದು ಅವರು ಹೇಳಿದ್ದಾರೆ.

‘ನಾನು ನನ್ನ ಮೂರು ಮಕ್ಕಳ ಜೊತೆ ಎಲ್ಲಾದರೂ ಹೋಗುತ್ತೇನೆ. ನಾನು ಹೆಚ್ಚು ದ್ವೇಷವನ್ನು ಎದುರಿಸಿಲ್ಲ. ನನ್ನ ನಿರ್ಧಾರದಿಂದ ಹಿಂದೆ ಬರುವ ಮಾತಿಲ್ಲ. ನನ್ನ ಮಕ್ಕಳು ಇದಕ್ಕೆ ಗುರಿಯಾಗೋದು ಬೇಡ. ಯಾವ ಪಾಲಕರೂ ಇದನ್ನು ಸಹಿಸೋದಿಲ್ಲ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಅರ್ಮಾನ್​ ಮಲಿಕ್​ ನಿಶ್ಚಿತಾರ್ಥ; ಬಹುಕಾಲದ ಗೆಳತಿ ಆಶ್ನಾ ಶ್ರಾಫ್ ಜೊತೆ ಉಂಗುರ ಬದಲಿಸಿಕೊಂಡ ಗಾಯಕ

ಅರ್ಮಾನ್ ಮಲಿಕ್ 2011ರಲ್ಲಿ ಪಾಯಲ್​ನ ಮದುವೆ ಆದರು. ಆ ಬಳಿಕ ಅರ್ಮಾನ್ ಅವರು 2018ರಲ್ಲಿ ಪಾಯಲ್ ಗೆಳತಿ ಕೃತಿಕಾ ಅವರನ್ನು ಕೂಡ ಮದುವೆ ಆದರು. ಪಾಯಲ್​ಗೆ ಮೂವರು ಮಕ್ಕಳು ಹಾಗೂ ಕೃತಿಗೆ ಒಂದು ಮಗು ಇದೆ.  ಸದ್ಯ ಅವರು ನೀಡಿರೋ ಹೇಳಿಕೆ ಚರ್ಚೆ ಹುಟ್ಟುಹಾಕಿದೆ. ಇದರ ಜೊತೆಗೆ ಜಿಯೋ ಸಿನಿಮಾ ಬಹುಪತ್ನಿತ್ವವನ್ನು ಪ್ರಚೋದಿಸುತ್ತಿರುವ ಆರೋಪ ಕೂಡ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us